Advertisement

ವಲಸೆ ಕಾರ್ಮಿಕರಿಗೆ ರೈಲು ವದಂತಿ: ಮಂಗಳೂರು ರೈಲು ನಿಲ್ದಾಣದಲ್ಲಿ ಸೇರಿದ ಸಾವಿರಾರು ಜನ

08:23 AM May 09, 2020 | keerthan |

ಮಂಗಳೂರು: ಕೋವಿಡ್-19 ಲಾಕ್ ಡೌನ್ ಹಿನ್ನಲೆಯಲ್ಲಿ ವಲಸೆ ಕಾರ್ಮಿಕರನ್ನು ರೈಲಿನ ಮೂಲಕ ಊರಿಗೆ ಕಳುಹಿಸಿ ಕೊಡಲಾಗುತ್ತದೆ ಎಂಬ ವದಂತಿ ಮಂಗಳೂರಿನಲ್ಲಿ ಹಬ್ಬಿದ್ದು, ಇದರಿಂದಾಗಿ ಇಲ್ಲಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಾವಿರಾರು ಜನರ ಸೇರಿ ಗೊಂದಲ ಉಂಟಾದ ಘಟನೆ ಶುಕ್ರವಾರ ನಡೆಯಿತು.

Advertisement

ಮಂಗಳೂರಿನಿಂದ ರೈಲಿನಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ಊರಿಗೆ ಕಳುಹಿಸುತ್ತಾರೆ ಅಂತ ವದಂತಿ ಹರಡಿತ್ತು. ಇಂದು ಮುಂಜಾನೆಯಿಂದಲೇ ಸಾವಿರಾರು ಕಾರ್ಮಿಕರು ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಆದರೆ ರೈಲ್ವೇ ಸಿಬ್ಬಂದಿ‌‌ ಯಾವುದೇ ರೈಲು ವ್ಯವಸ್ಥೆ ಮಾಡಿಲ್ಲ ಎಂದು ಹೇಳಿ ಸೇರಿದ ವಲಸೆ ಕಾರ್ಮಿಕರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ.

ಆದರೆ ಇದರಿಂದ ಆಕ್ರೋಶಗೊಂಡ ವಲಸೆ ಕಾರ್ಮಿಕರು ಹಿಂದುರುಗದೆ ‘We want to go home’ ಪೋಸ್ಟರ್ ಹಿಡಿದು ಪ್ರತಿಭಟನೆಗೆ ನಡೆಸಿದ್ದಾರೆ. ಈ ವೇಳೆ ಸ್ಥಳದಿಂದ ಹೋಗುವಂತೆ ಪೊಲೀಸರು ಮನವೊಲಿಸಲು ಪ್ರಯತ್ನ ಪಟ್ಟರೂ ಕಾರ್ಮಿಕರು ಪೊಲೀಸರ ಮಾತನ್ನು ಕೇಳದೆ, ನಾವು ಉಪವಾಸವಿದ್ದರೂ ಪರವಾಗಿಲ್ಲ ಜಾಗ ಬಿಟ್ಟು ಕದಲಲ್ಲ ಎಂದು ಪಟ್ಟು‌‌ ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next