Advertisement

ಒಲಿಂಪಿಕ್ಸ್‌  ಉದ್ಘಾಟನೆಗೆ ಸಾವಿರ ಅತಿಥಿಗಳು

10:15 PM Jul 15, 2021 | Team Udayavani |

ಟೋಕಿಯೊ: ಕೋವಿಡ್‌-19 ಸೋಂಕಿನ ಭೀತಿಯ ಕಾರಣದಿಂದ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರೇಕ್ಷಕರನ್ನು ಈಗಾಗಲೇ ನಿರ್ಬಂಧಿಸಲಾಗಿದೆ.

Advertisement

ಪದಕ ಸಮಾರಂಭವನ್ನೂ ರದ್ದುಗೊಳಿಸಲಾಗಿದೆ. ಆದರೆ ಪ್ರಮುಖ ಆಕರ್ಷಣೆಯಾಗಿರುವ ಉದ್ಘಾಟನಾ ಸಮಾರಂಭವೂ ಈಗ ಕಳೆಗುಂದಲಿದ್ದು, ಇದಕ್ಕೆ ಕಠಿನ ನಿರ್ಬಂಧ ಹೇರಲಾಗಿದೆ. ಇದು ಕೂಡ ವೀಕ್ಷಕರ ಗೈರಲ್ಲಿ ನಡೆಯಲಿದ್ದು, ಸಾವಿರಕ್ಕೂ ಕಡಿಮೆ ಅತಿಥಿಗಳಷ್ಟೇ ಭಾಗಿಯಾಗಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಇದಕ್ಕೂ ಮುನ್ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು 10,000 ಮಂದಿಗೆ ಅವಕಾಶ ನೀಡಲು ನಿರ್ಧರಿಸಲಾಗಿತ್ತು. ಆದರೆ ಟೋಕಿಯೊ ದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅತಿಥಿಗಳ ಸಂಖ್ಯೆಯನ್ನು ಸಾವಿರಕ್ಕೆ ಇಳಿಸ ಲಾಗಿದೆ ಎಂದು “ಕೊÂಡೊ ನ್ಯೂಸ್‌’ ವರದಿ ಮಾಡಿದೆ.

ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿರುವ “ನ್ಯಾಶನಲ್‌ ಸ್ಟೇಡಿಯಂ’ನಲ್ಲಿ 68 ಸಾವಿರ ಮಂದಿಗೆ ಸ್ಥಳಾವಕಾಶವಿದೆ. ಆದರೆ ಕೊರೊನಾದಿಂದಾಗಿ ಈ ಸಂಖ್ಯೆಯನ್ನು ಸಾವಿರದೊಳಗೆ ಸೀಮಿತಗೊಳಿ ಸಬೇಕಿದೆ. ಗುರುವಾರ ಟೋಕಿಯೊದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿದ್ದು, ಜನವರಿ 22ರಿಂದಲೇ ಅತ್ಯಧಿಕವೆನಿಸಿದೆ.

ಚಕ್ರವರ್ತಿಯಿಂದ ಉದ್ಘಾಟನೆ : 

Advertisement

ಜಪಾನಿನ ಚಕ್ರವರ್ತಿ ನರುಹಿಟೊ ಸಮಾರಂಭಕ್ಕೆ ಆಗಮಿಸಿ ಒಲಿಂಪಿಕ್ಸ್‌ ಆರಂಭವನ್ನು ಘೋಷಿ ಸಲಿದ್ದಾರೆ. ಅಮೆರಿಕದ “ಫ‌ಸ್ಟ್‌ ಲೇಡಿ’ ಜಿಲ್‌ ಬೈಡೆನ್‌ ಈ ಸಮಾರಂಭಕ್ಕೆ ಆಗಮಿಸುವ ಸಾಧ್ಯತೆ ಇದೆ.

ಗ್ರೂಪ್‌ ಫೋಟೊ ಇಲ್ಲ : 

ಪದಕ ಸಮಾರಂಭ ಕೇವಲ ಸಾಂಕೇತಿಕವಾಗಿ ರಲಿದೆ. ಐಒಸಿ ಹಾಗೂ ಇಂಟರ್‌ನ್ಯಾಶನಲ್‌ ಫೆಡರೇಶನ್‌ನ ತಲಾ ಓರ್ವರಷ್ಟೇ ಉಪಸ್ಥಿತರಿ ರುತ್ತಾರೆ. ಆದರೆ ಇವರು ಪದಕ ನೀಡುವುದಿಲ್ಲ. ವಿಜೇತರು ಮತ್ತು ಅಲ್ಲಿ ಉಪಸ್ಥಿತರಿರುವವರಿಗೆ ಮಾಸ್ಕ್ ಹಾಗೂ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಗ್ರೂಪ್‌ ಫೋಟೊ ನಿಷೇಧಿಸಲಾಗಿದೆ.

ಡೋಪ್‌ ನಿಯಮ ಪಾಲಿಸದ ಕೀನ್ಯ ಓಟಗಾರರು :

ಒಂದು ಕಡೆ ಕೊರೊನಾ ಭೀತಿಯಾದರೆ, ಇನ್ನೊಂದು ಕಡೆ ಡೋಪ್‌ ಕಳಂಕ. ಒಲಿಂಪಿಕ್ಸ್‌ ನಲ್ಲಿ ಭಾಗವಹಿಸಲಿರುವ ಕೀನ್ಯದ ಇಬ್ಬರು ಓಟಗಾರರು ಡೋಪ್‌ ಟೆಸ್ಟ್‌ ಪ್ರಕ್ರಿಯೆಯನ್ನು ಕ್ರಮಬದ್ಧವಾಗಿ ನಡೆಸದೆ ಕೂಟದಿಂದಲೇ ಬೇರ್ಪಟ್ಟಿದ್ದಾರೆ. ಇವರೆಂದರೆ 18 ವರ್ಷದ ಕಮರ್‌ ಎಟಿಯಾಂಗ್‌ ಮತ್ತು ಮೊಟಾಲೆಲ್‌ ಎಂಪೋಕೆ ನಾಡೊಕಿಲ.

ಇಲ್ಲಿನ ಒಂದು ಸ್ಥಾನಕ್ಕೆ 1,500 ಮೀ. ವಿಶ್ವ ಚಾಂಪಿಯನ್‌ ಟಿಮೋತಿ ಶೆರುಯಿಯೋಟ್‌ ಆಯ್ಕೆಯಾಗಿದ್ದಾರೆ. ಸ್ಟೀಪಲ್‌ಚೇಸ್‌ ಹಾಗೂ ಒಲಿಂಪಿಕ್‌ ಚಾಂಪಿಯನ್‌ ಕೊನ್ಸೆಲುಸ್‌ ಕಿಪ್ರುಟೊ ಸೇರ್ಪಡೆಯನ್ನು ಮುಂದೆ ನಿರ್ಧರಿಸಲಾಗುವುದು. ಅವರು ಫಾರ್ಮ್ನಲ್ಲಿಲ್ಲ ಹಾಗೂ ಇತ್ತೀಚೆಗೆ ರೇಪ್‌ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದು ಜೈಲುಪಾಲಾಗಿದ್ದರು. ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಆ್ಯಟ್ಲೀಟ್‌ಗಳಿಗೂ ತಗುಲಿತು ಕೊರೊನಾ :

ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಟೋಕಿಯೊಗೆ ಆಗಮಿಸಿದ ಕ್ರೀಡಾಪಟುಗಳಿಗೆ ಕೊರೊನಾ ಅಂಟಿಕೊಳ್ಳುವುದರೊಂದಿಗೆ ಈ ಪ್ರತಿಷ್ಠಿತ ಕ್ರೀಡಾಕೂಟದ ಆತಂಕ ಹೆಚ್ಚತೊಡಗಿದೆ. ಗುರುವಾರ ಓರ್ವ ಆ್ಯತ್ಲೀಟ್‌ ಮತ್ತು 5 ಮಂದಿ ಸಿಬಂದಿಯ ಫ‌ಲಿತಾಂಶ ಪಾಸಿಟಿವ್‌ ಬಂದಿದೆ ಎಂದು ವರದಿಯಾಗಿದೆ.

ಜಪಾನ್‌ ಹೊಟೇಲ್‌ನಲ್ಲಿ ತಂಗಿರುವ ಬ್ರಝಿಲ್‌ನ ಜ್ಯೂಡೋ ತಂಡದ ಸದಸ್ಯರೊಬ್ಬರಿಗೆ ಕೊರೊನಾ ದೃಢಪಟ್ಟಿದೆ. ಜತೆಗೆ ರಶ್ಯದ ರಗಿº ಸೆವೆನ್ಸ್‌ ತಂಡದ ಸಿಬಂದಿ ಹಾಗೂ ಒಲಿಂಪಿಕ್ಸ್‌ ಕಾಂಟ್ರಾಕ್ಟರ್‌ಗಳ ಫ‌ಲಿತಾಂಶವೂ ಪಾಸಿಟಿವ್‌ ಬಂದಿದೆ. ಇವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಯಾವುದೇ ವಿವರ ಲಭ್ಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next