ಉಳ್ಳಾಲ: ಮೆಡಿಕಲ್ ಸ್ಟೋರ್ ಒಂದರ ಎದುರುಗಡೆ ನಿಲ್ಲಿಸಿದ್ದ ಒಂದೇ ದ್ವಿಚಕ್ರ ವಾಹನಕ್ಕೆ ಪೊಲೀಸರು ದಿನವೊಂದಕ್ಕೆ ಒಂದೇ ತಿಂಗಳಲ್ಲಿ ಸಾವಿರಾರು ದಂಡ ವಿಧಿಸಿರುವ ಘಟನೆ ಮುಡಿಪು ಜಂಕ್ಷನ್ ನಲ್ಲಿನಡೆದಿದೆ.
ಗಣೇಶ್ ಕಾಂಪ್ಲೆಕ್ಸ್ ನಲ್ಲಿರುವ ಸಂಜೀವಿನಿ ಆಯುರ್ವೇದ ಮಡಿಕಲ್ ಎದುರುಗಡೆ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ರೂ. 9,000 ದಷ್ಟು ದಂಡ ವಿಧಿಸಲಾಗಿದೆ. ಎಲ್ಲಿಯು ಇಲ್ಲದ ಕಾನೂನನ್ನು ಮುಡಿಪು ಜಂಕ್ಷನ್ನಿನಲ್ಲಿ ನಾಗುರಿ ಸಂಚಾರಿ ಠಾಣಾ ಪೊಲೀಸರು ಹೇರಿದ್ದಾರೆ ಅನ್ನುವ ಆರೋಪ ವ್ಯಕ್ತವಾಗಿದೆ.
ಮೆಡಿಕಲ್ ಸ್ಟೋರ್ ಮಾಲಕಿ ಶ್ರೀಮತಿ ಅವರನ್ನು ಮುಡಿಪುವಿನಲ್ಲಿ ಕಳೆದ ವರ್ಷದ ಆರಂಭದಲ್ಲಿ ತಡೆದ ಟ್ರಾಫಿಕ್ ಪೊಲೀಸರು ನಿಮ್ಮ ಸ್ಕೂಟರ್ ವಿರುದ್ಧ 5,000 ರೂಪಾಯಿ ದಂಡ ಹಾಕಿದ್ದಾರೆ. ದಂಡ ಪ್ರಯೋಗದ ಮಾಹಿತಿಯೇ ಇಲ್ಲದ ಶ್ರೀಮತಿ ಅವರು ತನಗೇಕೆ ದಂಡ ಎಂದು ಕೇಳಿದಾಗ ನೋ ಪಾರ್ಕಿಂಗ್ ವಿಚಾರವನ್ನು ಟ್ರಾಫಿಕ್ ಪೊಲೀಸರು ಪ್ರಸ್ತಾಪಿಸಿದ್ದಾರೆ.
ತನಗೆ ಅದರ ಬಗ್ಗೆ ಗೊತ್ತಿಲ್ಲ. ಕೇಸ್ ಬಗ್ಗೆ ಯಾವುದೇ ನೋಟೀಸ್ ಬಂದಿಲ್ಲ ಎಂದು ಶ್ರೀಮತಿ ಅವರು ಪೊಲೀಸರಲ್ಲಿ ಹೇಳಿದ್ದಾರೆ. ತಿಂಗಳಿಗೆ 500 ರೂ. ಮತ್ತು 1,000 ರೂಪಾಯಿ ದಂಡ ಪ್ರಯೋಗದ ಎರಡು ನೋಟೀಸುಗಳು ಬರಲಾರಂಭಿಸಿದ್ದು ಈವರೆಗೆ 16 ನೋಟೀಸುಗಳು ಬಂದಿದೆ. ಅವೆಲ್ಲವನ್ನು ಶ್ರೀಮತಿ ಅವರು ತನ್ನ ಮೆಡಿಕಲ್ ಶಾಪ್ ಎದುರುಗಡೆ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದಾರೆ.