ದಿನಕ್ಕೆ 30 ಸಾವಿರ ಲೀ. ನೀರು ಪೂರೈಕೆ ಗುಂಡಿಬೈಲು ವಾರ್ಡ್‌ನಲ್ಲಿ ಕಳೆದ
10 ದಿನಗಳಿಂದಲೂ ವಾರ್ಡ್ ಸದಸ್ಯರು ದಿನವೊಂದಕ್ಕೆ 30 ಸಾವಿರ
ಲೀಟರ್ ನೀರು ಪೂರೈಕೆ ಮಾಡುತ್ತಿ ದ್ದಾರೆ. ಸುಮಾರು 700ರಷ್ಟು ಮನೆ
ಗಳಿದ್ದು, 600 ಮನೆಗಳಿಗೆ ನೀರು ಪೂರೈಕೆಯಾಗಿದೆ. ಬೆಳಗ್ಗೆ 11 ಗಂಟೆ ಯಿಂದ ರಾತ್ರಿ 11 ಗಂಟೆಯವರೆಗೂ ನೀರು ಸರಬರಾಜು ಮಾಡಲಾಗುತ್ತಿದೆ. ನಳ್ಳಿ ನೀರು ಮಂಗಳವಾರ ರಾತ್ರಿ ಬರಲು ಆರಂಭವಾಗಿದೆ. ಉಳಿದಂತೆ ನಗರಸಭೆಯಿಂದ 1 ಬಾರಿ ಟ್ಯಾಂಕರ್ ನೀರು ಪೂರೈಕೆಯಾಗಿದೆ.
Advertisement
ರಾತ್ರಿ 2ಗಂಟೆಯವರೆಗೂ ನೀರು ಪೂರೈಕೆಸುಮಾರು 400ರಿಂದ 500ರಷ್ಟು ಮನೆಗಳಿರುವ ಕುಂಜಿಬೆಟ್ಟು ವಾರ್ಡ್‌ನಲ್ಲೂ ವಾರ್ಡ್ ಸದಸ್ಯರು ನೀರು ಪೂರೈಸುತ್ತಿದ್ದಾರೆ. ದಿನಕ್ಕೆ 4 ಟ್ಯಾಂಕರ್‌ನಲ್ಲಿ 24 ಸಾವಿರ ಲೀ. ನೀರು ಪೂರೈಕೆ ಯಾಗುತ್ತಿದೆ. ಇಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾದರೆ ರಾತ್ರಿ 12ರಿಂದ 2 ಗಂಟೆವರೆಗೆ ನೀರು ಒದಗಿಸಲಾಗುತ್ತಿದೆ. ನಗರಸಭೆಯ ನಳ್ಳಿ ನೀರು ಶನಿವಾರ ಹಾಗೂ ರವಿವಾರ ಬಂದಿದೆ.
ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಮುಖಾಂತರ ಸಾರ್ವಜನಿಕರಿಗೆ ಕುಡಿಯುವ ನೀರು ವಿತರಿಸುವ ಕಾರ್ಯಕ್ರಮ ಮಂಗಳವಾರ ಆರಂಭಗೊಂಡಿದ್ದು, ಬುಧವಾರವೂ ಮುಂದುವರಿಯಿತು. ಅಜ್ಜರಕಾಡು, ಕೊಡಂಕೂರು, ಮಂಚಿಕೋಡಿ ಭಾಗಗಳಿಗೆ ಬುಧವಾರ ನೀರು ಸರಬರಾಜು ಮಾಡಲಾಯಿತು. 5 ಸಾವಿರ ಲೀಟರ್‌ನ 1 ಟ್ಯಾಂಕ್‌ನಲ್ಲಿ 300ರಿಂದ 500ರಷ್ಟು ಮನೆಗಳಿಗೆ ನೀರು ವಿತರಿಸಲಾಯಿತು. ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡು ರಾತ್ರಿ 7 ಗಂಟೆಯವರೆಗೂ ನೀರು ಸರಬರಾಜು ಮಾಡಲಾಯಿತು. ಪ್ರಥಮ ಕರೆ ಬಂದವರಿಗೆ ಆದ್ಯತೆ
ದಿನನಿತ್ಯ ಹಲವು ಕರೆಗಳು ನಮಗೆ ಬರುತ್ತಿವೆ. ಸಮಸ್ಯೆ ಇರುವ ಎಲ್ಲ ವಾರ್ಡ್
ಗಳಿಗೂ ನೀರು ಪೂರೈಸುವ ಇಚ್ಛೆ ಇದೆ. ಮೊದಲು ಕರೆ ಮಾಡಿದ ವಾರ್ಡ್ ಗಳಿಗೆ ತೆರಳಿ ನೀರು ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು.
Related Articles
ಸಗ್ರಿ ವಾರ್ಡ್‌ನಲ್ಲಿ ಫ್ಲ್ಯಾಟ್‌ಗಳನ್ನು ಹೊರತುಪಡಿಸಿ ಸುಮಾರು 1,500 ಮನೆಗಳಿವೆ. ದಿನಕ್ಕೆ 20 ಸಾವಿರ ಲೀ.ನಷ್ಟು ನೀರು ಇಲ್ಲಿನ ವಾರ್ಡ್ ಸದಸ್ಯರು ಪೂರೈಸುತ್ತಾರೆ. ನೀರಿನ ಅಭಾವ ಇದ್ದ ಸಂದರ್ಭದಲ್ಲಿ ದಿನವೊಂದಕ್ಕೆ 30ರಿಂದ 35 ಸಾವಿರ ಲೀ.ನಷ್ಟು ನೀರು ಪೂರೈಸಲಾಗಿದೆ. ಚುನಾವಾಣೆ ಆರಂಭವಾಗುವ 10 ದಿನ ಮೊದಲೇ ಇಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿತ್ತು. ದಿನವೊಂದಕ್ಕೆ 10 ಟ್ರಿಪ್ ಮಾಡಲಾಗುತ್ತದೆ. ಒಂದು ಮನೆಗೆ ಸುಮಾರು 300ರಿಂದ 700 ಲೀ.ನಷ್ಟು ನೀರು ವಿತರಿಸಲಾಗುತ್ತಿದೆ.
Advertisement
ನೀರಿನ ಸಮಸ್ಯೆ ಇದ್ದವರಿಗೆ ಕರೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ವಾರ್ಡ್ ಸದಸ್ಯರ ಮಾಹಿತಿಯುಳ್ಳ ವಿಸಿಟಿಂಗ್ ಕಾರ್ಡ್ ಮಾಡಿ ಇಲ್ಲಿನ ನಿವಾಸಿಗಳಿಗೆ ನೀಡಲಾಗಿದೆ. ಕರೆಮಾಡಿ ತಿಳಿಸಿದ ತತ್‌ಕ್ಷಣ ವಾರ್ಡ್‌ಸದಸ್ಯರು ಸ್ಪಂದಿಸುತ್ತಾರೆ. ವಾರ್ಡ್‌ಗೆ ನೀರು ಪೂರೈಸಲು ಮಂಜುನಾಥ ಕಲ್ಕೂರ ಅವರು ತಮ್ಮ ಮನೆಯ ಬಾವಿಯಿಂದ ಉಚಿತವಾಗಿ ನೀರು ನೀಡುತ್ತಿದ್ದಾರೆ. ಇದರಿಂದ ದಿನವೊಂದಕ್ಕೆ 40 ಸಾವಿರ ಲೀ.ನಷ್ಟು ನೀರು ಕೃಷ್ಣಮಠ ಸಹಿತ ವಿವಿಧ ವಾರ್ಡ್‌ಗಳಿಗೆ ಪೂರೈಕೆಯಾಗುತ್ತಿದೆ.
ಮುಖ್ಯಾಂಶಗಳು– ನೀರಿನ ಸಮಸ್ಯೆಯಿದ್ದಲ್ಲಿ ವಾರ್ಡ್ ಸದಸ್ಯರನ್ನು ಸಂಪರ್ಕಿಸಿ
– ವಾರ್ಡ್ ಸದಸ್ಯರಿಂದ ನೀರಿನ ವ್ಯವಸ್ಥೆ
– ಸದಸ್ಯರ ನಿರ್ಣಯದಿಂದ ನಗರಸಭೆಗೂ ಅನುಕೂಲ
– ನಗರಸಭೆಯಿಂದಲೂ ಕೆಲ ಪ್ರದೇಶಗಳಿಗೆ ನೀರು ಪೂರೈಕೆ ಸಾಮೂಹಿಕ ವರುಣ ಮಂತ್ರ ಜಪ
ಉಡುಪಿಯೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ನೀರಿನ ತೀವ್ರ ಕೊರತೆಯುಂಟಾಗಿದ್ದು ಅತಿ ಶೀಘ್ರ ಮಳೆಯ ಆಗಮನವಾಗಿ ಎÇÉೆಲ್ಲೂ ಸುಭಿಕ್ಷೆ ನೆಲೆಸುವಂತಾಗಲಿ ಎಂಬ ಆಶಯದೊಂದಿಗೆ ‘ವರುಣ ದೀಪ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಸಾಲಿಗ್ರಾಮದ ಡಿವೈನ್ ಪಾರ್ಕ್ ನ ಉಡುಪಿ ಶಾಖೆ ಉಡುಪಿಯ ಅಜ್ಜರಕಾಡಿನಲ್ಲಿ ಹಮ್ಮಿಕೊಂಡಿದೆ. ಬುಧವಾರ ಈ ಕಾರ್ಯಕ್ರಮ ಆರಂಭಗೊಂಡಿದ್ದು, ಮೇ 25ರ ವರೆಗೆ 11 ದಿನಗಳ ಕಾಲ ಮುಂಜಾನೆ 6 ರಿಂದ 6.15 ಹಾಗೂ ಸಂಜೆ 6ರಿಂದ 6.15ರ ವರೆಗೆ ಅಜ್ಜರಕಾಡಿನ ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಎದುರು ಸಾಮೂಹಿಕ ವರುಣ ಮಂತ್ರ ಜಪ ನಡೆಯಲಿದೆ. – ಪುನೀತ್ ಸಾಲ್ಯಾನ್