ಬೀದರ್: ಹೆಮ್ಮಾರಿ ಕೋವಿಡ್ 19 ಆರ್ಭಟದಿಂದ ಬೀದರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿಯನ್ನು ದಾಟಿದ್ದರೆ ಸಾವಿನ ಪ್ರಮಾಣ ಅರ್ಧ ಶತಕ ದಾಟಿದೆ.
ರವಿವಾರ ಗಡಿ ನಾಡಿನಲ್ಲಿ ಮತ್ತೆ 62 ಕೋವಿಡ್ 19 ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಬೀದರ್ ನಗರ ಒಂದರಲ್ಲೇ 35ಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗಿರುವುದು ಆತಂಕವನ್ನು ಹೆಚ್ಚಿಸಿದೆ. ಬೀದರ್ ತಾಲೂಕಿನಲ್ಲಿ 42, ಭಾಲ್ಕಿ, ಔರಾದ ಮತ್ತು ಹುಮನಾಬಾದ ತಾಲೂಕಿನಲ್ಲಿ ತಲಾ 5 ಮತ್ತು ಬಸವಕಲ್ಯಾಣ ತಾಲೂಕಿನಲ್ಲಿ 4 ಕೇಸ್‌ಗಳು ವರದಿಯಾಗಿವೆ. ಒಟ್ಟಾರೆ ಪ್ರಕರಣಗಳಲ್ಲಿ 15 ವರ್ಷದೊಳಗಿನ 8 ಮಕ್ಕಳು ಇದ್ದಾರೆ.
ಸಿದ್ಧಿ ತಾಲೀಮ್ 8, 100 ಹಾಸಿಗೆ ಕ್ವಾರ್ಟರ್ಸ್ 4, ದರ್ಜಿ ಗಲ್ಲಿ, ಲೇಬರ್ ಕಾಲೋನಿ, ದೇವಿ ಕಾಲೋನಿ, ಬ್ರಿಮ್ಸ್, ದುಲ್ಹನ್ ದರ್ವಾಜಾ ತಲಾ 2, ಚೌಬಾರಾ, ಟ್ರಾಫಿಕ್ ಪೊಲೀಸ ಕ್ವಾರ್ಟರ್ಸ್, ಚಿದ್ರಿ, ಮನಿಯಾರ್ ತಾಲೀಮ್, ಆದರ್ಶ ಕಾಲೋನಿ, ಗಾಂಧಿ ನಗರ, ರೋಹೆಲಿ ಗಲ್ಲಿ, ಸಾತೋಳಿ, ಪೊಲೀಸ್ ಕಾಲೋನಿ, ಡಿಎಂಓ ಕಚೇರಿ, ಜೇಲ್ ಕಾಲೋನಿ, ಓಲ್ಡ್ ಸಿಟಿ, ಹಳೆ ಬಸ್ ನಿಲ್ದಾಣ, ಶಿವನಗರ ಉತ್ತರ ಪ್ರದೇಶಗಳಲ್ಲಿ ತಲಾ ಒಂದು, ಅಷ್ಟೂರ 2, ಗುನ್ನಳ್ಳಿ 1, ಚಿದ್ರಿ 1, ಚಿಕ್ಕಪೇಟ್ 1 ಕೇಸ್ ಪತ್ತೆಯಾಗಿವೆ. ಹುಮನಾಬಾದ ಪಟ್ಟಣ 4, ಮೀನಕೇರಾದಲ್ಲಿ 1, ಭಾಲ್ಕಿ ತಾಲೂಕಿನ ಹಾಲಹಳ್ಳಿ, ಇಂಚೂರ್, ಬ್ಯಾಲಹಳ್ಳಿ, ಧನ್ನೂರ, ನಾವದಗಿಯಲ್ಲಿ ತಲಾ 1 ಕೇಸ್ ಸೇರಿವೆ.
ಇಂದಿನ ಸೋಂಕಿತರು ಸೇರಿ ಜಿಲ್ಲೆಯಲ್ಲಿ ಈವರೆಗೆ 1038 ಪಾಸಿಟಿವ್ ಕೇಸ್‌ಗಳು ಆದಂತಾಗಿದ್ದು, ಅದರಲ್ಲಿ ೫೩ ಜನ ಸಾವನ್ನಪ್ಪಿದ್ದರೆ, 613 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇನ್ನೂ 372 ಕೇಸ್ ಸಕ್ರೀಯವಾಗಿವೆ. ರವಿವಾರದವೆಗೆ 43,180 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 39,304 ಮಂದಿಯದ್ದು ನೆಗೆಟಿವ್ ಇದ್ದರೆ ಇನ್ನೂ 2838 ಜನರ ವರದಿ ಬರುವುದು ಬಾಕಿ ಇದೆ.