Advertisement

ಮೂರು ಉತ್ಸವಗಳಿಗೆ ರಾಷ್ಟ್ರೀಯ ಮಾನ್ಯತೆ ನೀಡಲು ಚಿಂತನೆ : ಸಚಿವ ಸಿ.ಟಿ.ರವಿ

09:49 AM Mar 07, 2020 | Team Udayavani |

ಬೆಂಗಳೂರು : ನಾಡಹಬ್ಬ ದಸರಾ, ಹಂಪಿ ಉತ್ಸವ ಹಾಗೂ ಬೆಂಗಳೂರು ಹಬ್ಬವನ್ನು ರಾಷ್ಟ್ರೀಯ ಉತ್ಸವದ ಮಾದರಿಯಲ್ಲಿ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಹಂಪಿ ಉತ್ಸವಕ್ಕೆ ಸಂಬಂಧಿಸಿದಂತೆ ಸದಸ್ಯ ಅಲ್ಲಂ ವೀರಭದ್ರಪ್ಪ ಅವರು ಕೇಳಿದ ಚುಕ್ಕಿಗುರುತಿನ ಪ್ರಶ್ನೆ ಉತ್ತರಿಸಿದ ಸಚಿವರು, ಮೈಸೂರು ದಸರಾ, ಹಂಪಿ ಉತ್ಸವ ಹಾಗೂ ಬೆಂಗಳೂರು ಹಬ್ಬವನ್ನು ರಾಷ್ಟ್ರೀಯ ಉತ್ಸವದ ರೀತಿಯಲ್ಲಿ ನಡೆಸಲು ಮುಂದಾಗಿದ್ದೇವೆ. ಹಂಪಿ ಉತ್ಸವ ಅನೇಕ ವರ್ಷದಿಂದ ನಡೆಯುತ್ತಿದೆಯಾದರೂ ನಿಗದಿತ ದಿನಾಂಕದಂದು ನಡೆಯುತ್ತಿರಲಿಲ್ಲ. ಕೆಲವು ವರ್ಷ ನಡೆಯದ ನಿದರ್ಶನವೂ ಇದೆ. ಹೀಗಾಗಿ ಪ್ರತಿ ವರ್ಷ ಕೃಷ್ಣದೇವರಾಯನ ಪಟ್ಟಾಭಿಷೇಕವಾದ ದಿನ ಜ.10ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ನಿರ್ಧರ ಮಾಡಿದ್ದೇವೆ ಎಂದರು.

ಹಾಗೆಯೇ ರಾಜ್ಯದ ಪ್ರಮುಖ ಮಹಾರಾಜ ಸಂಸ್ಥಾನಗಳಾದ ಕಲ್ಯಾಣ ಚಾಲುಕ್ಯರು, ಬದಾಮಿ ಚಾಲುಕ್ಯರು, ಕದಂಬರು, ಚಿತ್ರದುರ್ಗ ನಾಯಕರು ಸೇರಿದಂತೆ 9 ರಾಜ್ಯ ಉತ್ಸವ ನಡೆಸಲು ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಹಂಪಿಯಲ್ಲಿ ರೋಪ್‌ ವೇ ಅಥವಾ ಇತರೆ ಅಭಿವೃದ್ಧಿ ಕಾರ್ಯಕ್ಕೆ ಜಾಗತಿಕ ಮಟ್ಟದ ಅನುಮತಿ ಅಗತ್ಯವಿರುವುದರಿಂದ ವಿಶ್ವ ಪ್ರಸಿದ್ಧ ತಾಣವಾಗಿದ್ದರಿಂದ ಅನುಮತಿ ಸಿಕ್ಕ ನಂತರ ಈ ಬಗ್ಗೆ ಚಿಂತನೆ ನಡೆಸಲಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next