ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಸೋಂಕುಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಪ್ರಧಾನಿನರೇಂದ್ರ ಮೋದಿ ಅವರು ಜಿಲ್ಲಾ ಉಸ್ತುವಾರಿಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿನಡೆದ ವಿಡಿಯೋ ಸಂವಾದದಲ್ಲಿ ಸಚಿವಕೆ.ಸಿ.ನಾರಾಯಣಗೌಡ, ಜಿಲ್ಲಾಧಿಕಾರಿ ಎಸ್.ಅಶ್ವಥಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ,ಜಿಪಂ ಸಿಇಒ ದಿವ್ಯಾಪ್ರಭು, ಜಿಲ್ಲಾ ಆರೋಗ್ಯಾಧಿಕಾರಿಡಾ.ಎಚ್.ಪಿ.ಮಂಚೇಗೌಡ, ಮಿಮ್ಸ್ ನಿರ್ದೇಶಕಡಾ.ಎಂ.ಆರ್.ಹರೀಶ್ ಸೇರಿದಂತೆ ಮತ್ತಿತರರಿದ್ದರು.
ವಿಡಿಯೋ ಸಂವಾದದಲ್ಲಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕೊರೊನಾ ಸೋಂಕು ನಿಯಂತ್ರಿಸಲುಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಂತೆ ಹಾಗೂ ಕೆಲವುಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಂಪೂರ್ಣ ಲಾಕ್‌ಡೌನ್ ಮಾಡಲು ಕ್ರಮ:ಸಂವಾದದ ನಂತರ ಸುದ್ದಿಗಾರರೊಂದಿಗೆಮಾತನಾಡಿದ ಸಚಿವ ಕೆ.ಸಿ.ನಾರಾಯಣಗೌಡ,ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೆಹೆಚ್ಚುತ್ತಿದೆ. ನಿಯಂತ್ರಿಸಲು ಮಂಡ್ಯವನ್ನು ಸಂಪೂರ್ಣಲಾಕ್‌ಡೌನ್ ಮಾಡುವುದು ಅನಿವಾರ್ಯವಾಗಿದೆಎಂದು ತಿಳಿಸಿದರು.
ಇದರ ಬಗ್ಗೆ ಚರ್ಚಿಸಿ ತೀರ್ಮಾನಕೈಗೊಳ್ಳಲಾಗುವುದು. ಎಲ್ಲ ಅಧಿಕಾರಿಗಳು, ಶಾಸಕರಒಮ್ಮತದ ಅಭಿಪ್ರಾಯ ಪಡೆದು ಕ್ರಮವಹಿಸಲಾಗುವುದು. ಪ್ರಧಾನಿ ನರೇಂದ್ರಮೋದಿಅವರು ಸಂವಾದದಲ್ಲಿ ಕೊರೊನಾ ನಿಯಂತ್ರಿಸಲುಉತ್ತಮ ಸಲಹೆ, ಸೂಚನೆ ನೀಡಿದ್ದು, ಪಾಲಿಸಿದರೆಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲಿದೆ.ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮಾಡುವಂತೆ ಸಲಹೆನೀಡಿದ್ದಾರೆ. ಅದರಂತೆ ಈಗಾಗಲೇ ಸಮಿತಿರಚಿಸಲಾಗಿದೆ. ಆ ಸಮಿತಿಗೆ ಹೆಚ್ಚಿನ ಜವಾಬ್ದಾರಿನೀಡಲಾಗುವುದು ಎಂದು ತಿಳಿಸಿದರು.
ನಗರ ಪ್ರದೇಶಗಳಲ್ಲಿ ನಗರಸಭೆ, ಪುರಸಭೆವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳಿಗೆ ಜವಾಬ್ದಾರಿನೀಡುವಂತೆ, ಹಾಲಿ ಶಾಸಕರೊಂದಿಗೆ ಮಾಜಿಶಾಸಕರನ್ನೊಳಗೊಂಡಂತೆ ಕೆಲಸ ನಿರ್ವಹಿಸುವಮೂಲಕಕೊರೊನಾನಿಯಂತ್ರಿಸುವಂತೆಸೂಚಿಸಿದ್ದಾರೆ.ಅಲ್ಲದೆ, ಶಿಕ್ಷಕರನ್ನು ಬಳಸಿಕೊಳ್ಳುವಂತೆ ತಿಳಿಸಿದ್ದು,ಅದರಂತೆ ಕ್ರಮ ವಹಿಸಲಾಗುವುದು ಎಂದುಹೇಳಿದರು.