Advertisement

ಎಸ್‌ಡಿಪಿಐ-ಪಿಎಫ್‌ಐ ಶಾಶ್ವತ ನಿಷೇಧಕ್ಕೆ ಚಿಂತನೆ

10:54 PM Jan 18, 2020 | Lakshmi GovindaRaj |

ಶಿವಮೊಗ್ಗ: ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಯ ಶಾಶ್ವತ ನಿಷೇಧಕ್ಕೆ ಮೊದಲಿನಿಂದಲೂ ಚಿಂತನೆ ನಡೆದಿದೆ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು. ಶಿಕಾರಿಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಎಸ್‌ಡಿಪಿಐ ಮತ್ತು ಪಿಎಫ್‌ಐ ದೇಶದ್ರೋಹಿ ಸಂಘಟನೆಗಳು ಎಂದು ಮತ್ತೂಮ್ಮೆ ರುಜುವಾತಾಗಿದೆ ಎಂದರು.

Advertisement

ಈ ಸಂಘಟನೆಗಳಿಗೆ ಸೇರಿದವರು ಸಂಸದ ತೇಜಸ್ವಿ ಸೂರ್ಯ ಮತ್ತು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಕೊಲೆಗೆ ಸಂಚು ರೂಪಿಸಿದ್ದರು. ಮಡಿಕೇರಿಯಲ್ಲಿ ಕುಟ್ಟಪ್ಪನವರ ಕೊಲೆಯಾದಾಗಿನಿಂದ ಈ ಸಂಘಟನೆಗಳನ್ನು ಬಿಜೆಪಿ ವಿರೋ ಧಿಸುತ್ತಾ ಬಂದಿದೆ. ಬೆಂಗಳೂರಿನಲ್ಲಿ ರುದ್ರೇಶ್‌ ಕೊಲೆಯಾದಾಗಲೂ ಎಸ್‌ಡಿಪಿಐ ಕೈವಾಡವಿದೆ ಎಂದು ಹೇಳಲಾಗಿತ್ತು.

ಈಗ ಇದು ಮತ್ತೂಮ್ಮೆ ರುಜುವಾತಾಗಿದೆ. ಹಾಗಾಗಿ ದೇಶದ್ರೋಹಿ ಸಂಘಟನೆಗಳನ್ನು ಶಾಶ್ವತವಾಗಿ ನಿಷೇಧಿ ಸುವ ಅಗತ್ಯವಿದೆ ಎಂದು ಹೇಳಿದರು. ಪಠ್ಯ-ಪುಸ್ತಕದಿಂದ ಟಿಪ್ಪು ವಿಷಯ ಕೈಬಿಡುವ ಕುರಿತು ಡಿಎಸ್‌ಇಆರ್‌ಟಿ ಮತ್ತು ಇತಿಹಾಸ ತಜ್ಞರ ಸಮಿತಿ ವರದಿ ನೀಡಿದೆ. ಭಾನುವಾರ ಈ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಪ್ರತಿ ವರ್ಷ ಆಗಸ್ಟ್‌-ಸೆಪ್ಟಂಬರ್‌ ಹೊತ್ತಿಗೆ ಶಾಲೆಗಳಲ್ಲಿ ಪಠ್ಯ ಪುಸ್ತಕ ಲಭಿಸುವಂತಾಗುತ್ತಿತ್ತು. ಆದರೆ ಈ ಬಾರಿ ಈಗಾಗಲೇ ಪಠ್ಯಪುಸ್ತಕ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. 2020-21ನೇ ಸಾಲಿನ ಪಠ್ಯಪುಸ್ತಕ ತಯಾರಿಕೆಗೆ ಟೆಂಡರ್‌ ಕರೆದಾಗಿದೆ. ಶೈಕ್ಷಣಿಕ ವರ್ಷದ ಶಾಲಾರಂಭದ ಮೊದಲ ದಿನ ಮಕ್ಕಳು ಶಾಲೆಗೆ ಬಂದಾಗ ಅವರಿಗೆ ಪಠ್ಯಪುಸ್ತಕ ಮತ್ತು ಯೂನಿಫಾರಂ ಅನ್ನು ನೀಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next