Advertisement

ಚಿದಂಬರಂಗೆ ಸುಳ್ಳು ಪತ್ತೆ ಪರೀಕ್ಷೆಗೆ ಚಿಂತನೆ

11:19 AM Aug 29, 2019 | sudhir |

ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ ಸಂಬಂಧ ತನ್ನ ವಶ ದಲ್ಲಿರುವ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿಬಿಐ ಚಿಂತನೆ ನಡೆಸಿದೆ.

Advertisement

ತನಿಖೆ ವೇಳೆ ಚಿದಂಬರಂ ಅವರು ನೀಡುತ್ತಿರುವ ಉತ್ತರವು ತೃಪ್ತಿಕರವಾಗಿಲ್ಲ. ಪ್ರಶ್ನೆಗಳಿಗೆಲ್ಲ ಅವರು, ನನಗೆ ನೆನಪಾಗುತ್ತಿಲ್ಲ, ನನಗೆ ಗೊತ್ತಿಲ್ಲ’ ಎಂದೇ ಉತ್ತರಿಸುತ್ತಿದ್ದಾರೆ. ಹೀಗಾಗಿ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಸಿಬಿಐ ಚಿಂತನೆ ನಡೆಸಿದೆ.

ಬಂಧನದಿಂದ ರಕ್ಷಣೆ
ಅತ್ತ ಚಿದಂಬರಂ ಅವರನ್ನು ಬಂಧಿಸ ದಂತೆ ಜಾರಿ ನಿರ್ದೇಶ ನಾಲಯಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಜತೆಗೆ ಚಿದು ಸಲ್ಲಿಸಿರುವ 2 ಅರ್ಜಿ ಗಳ ವಿಚಾರಣೆಯನ್ನೂ ಬುಧವಾರ ನಡೆಸುವು ದಾಗಿ ತಿಳಿಸಿದೆ.

ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ವಾದ ಮಂಡಿಸಿ, 2018ರ ಡಿ.19, ಈ ವರ್ಷದ ಜನವರಿ 1, 21ರಂದು ನಡೆಸಿದ ವಿಚಾ ರಣೆಯ ಮುದ್ರಿತ ಪ್ರತಿ ಹಾಜರು ಪಡಿಸುವಂತೆ ನ್ಯಾಯ ಪೀಠಕ್ಕೆ ಅರಿಕೆ ಮಾಡಿ ದರು. ಅದರಲ್ಲಿ ಚಿದಂಬರಂ ತನಿಖಾ ಸಂಸ್ಥೆಯ ಜತೆಗೆ ವಿಚಾರಣೆ ವೇಳೆ ಸೂಕ್ತ ರೀತಿಯಲ್ಲಿ ಸಹಕರಿ  ಸಿದ್ದರೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ದೊರೆಯಲಿದೆ.

ಚಿದಂಬರಂ ಅವರನ್ನು ಕಸ‚rಡಿಗೆ ಪಡೆಯಲೇ ಬೇಕು ಎಂಬ ಕಾರಣಕ್ಕಾಗಿ ಯಾವುದೋ ದಾಖಲೆ ಗಳನ್ನು ಇ.ಡಿ. ಕೋರ್ಟ್‌ಗೆ ಸಲ್ಲಿಸು ವಂತಿಲ್ಲ ಎಂದರು ಸಿಬಲ್‌. ಅದಕ್ಕೆ ಉತ್ತರಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಈ ಬಗ್ಗೆ ಪ್ರಕರಣದ ವಿಚಾರಣೆಯ ಮುಂದಿನ ಹಂತಗಳಲ್ಲಿ ಉತ್ತರಿಸುವುದಾಗಿ ಹೇಳಿದ್ದಾರೆ.

Advertisement

ಈ ನಡುವೆ, ಸುಖಾಸುಮ್ಮನೆ ಕೇಂದ್ರ ಸರಕಾರ ನಮ್ಮನ್ನು ಹೆದರಿಸಲು ಹೊರಟಿದೆ ಎಂದು ಚಿದು ಕುಟುಂಬ ಆರೋಪಿಸಿದೆ. ಹಲವು ದೇಶಗಳಲ್ಲಿ ಚಿದಂಬರಂ ಆಸ್ತಿಪಾಸ್ತಿ ಹೊಂದಿದ್ದಾರೆ ಹಾಗೂ ಹಲವು ಶೆಲ್‌ ಕಂಪೆನಿಗಳನ್ನು ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಸೂಕ್ತ ಪುರಾವೆಗಳನ್ನು ಒದಗಿಸಬೇಕು ಎಂದೂ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next