Advertisement

200 ಕೃಷಿ ವಿವಿ ಇದ್ದರೂ, ಕೃಷಿಕರನ್ನು ರೂಪಿಸಲಾಗಲಿಲ್ಲ!

12:30 PM Jul 14, 2018 | Team Udayavani |

ಬೆಳಂದೂರು : ಭಾರತದಲ್ಲಿ ಸುಮಾರು 200ರಷ್ಟು ಕೃಷಿ ವಿಶ್ವವಿದ್ಯಾಲಯಗಳಿವೆ. ಆ ವಿವಿಗಳು ಕೇವಲ ಕೃಷಿ ತಜ್ಞರನ್ನು ರೂಪಿಸಿವೆಯೇ ಹೊರತು ಕೃಷಿಕರನ್ನಲ್ಲ. ಹಣದ ದಾರಿಯ ಬದಲು ಅನ್ನದ ದಾರಿಯಲ್ಲಿ ಸಾಗಿದರೆ ಮಾತ್ರ ನೆಮ್ಮದಿ ಬದುಕು ಕಾಣಲು ಸಾಧ್ಯ ಎಂದು ಕೃಷಿ ಅಂಕಣಕಾರ, ಪುತ್ತೂರು ಸ.ಪ್ರ.ದ. ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕ, ಡಾ| ನರೇಂದ್ರ ರೈ ದೇರ್ಲ ಅವರು ಹೇಳಿದರು.

Advertisement

ಜು. 13ರಂದು ಬೆಳಂದೂರು ಸರಕಾರಿ ಪ್ರ. ದರ್ಜೆ ಕಾಲೇಜಿನ ದಿ| ಮಂಜುನಾಥ ಶೆಟ್ಟಿ ಮಲಾರಬೀಡು ಸಭಾಭವನದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಭಾಗಿತ್ವದಲ್ಲಿ ನಡೆದ ಸಿ.ಪಿ. ಜಯರಾಮ ಗೌಡ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಕರಾವಳಿ ಹೊಸತನಗಳ ತವರು
ಹಿರಿಯರು ಕೃಷಿಯಲ್ಲಿ ನೈಪುಣ್ಯತೆ, ಕಲಾತ್ಮಕತೆ ಹೊಂದಿದ್ದರು. ಕೃಷಿ ಸಂಬಂಧಿಸಿದ ಕೆಲವೊಂದು ಆಚರಣೆಗಳು ನಮಗೆ ಸಂಪ್ರದಾಯವಾಗಿ ಕಂಡುಬಂದರೂ, ಅಲ್ಲೊಂದು ವೈಜ್ಞಾನಿಕ ಸತ್ಯವಿತ್ತು. ಕರಾವಳಿಯು ಕೃಷಿ ಕುರಿತಾದ ಅನೇಕ ಹೊಸತನಗಳನ್ನು ರೂಪಿಸಿಕೊಡುವ ತವರೂರು ಎಂದು ನರೇಂದ್ರ ರೈ ತಿಳಿಸಿದರು. 

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಟಿ.ಎಸ್‌. ಆಚಾರ್‌ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಪದ್ಮನಾಭ ಕೆ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಹಿರಿಯ ಸದಸ್ಯ ಶ್ರೀಧರ್‌ ರೈ ಮಾದೋಡಿ, ಪತ್ರಕರ್ತ ಡಾ|ಯು.ಪಿ. ಶಿವಾನಂದ, ಸಿಡಿಸಿ ಸದಸ್ಯರಾದ ಅರುವಗುತ್ತು ಚಂದ್ರಕಲಾ ಜಯರಾಮ, ಸೀತಾರಾಮ ಗೌಡ ಮುಂಡಾಳ, ಸಂಪತ್‌ ಕುಮಾರ್‌ ರೈ ಪಾತಾಜೆ, ನ್ಯಾಯವಾದಿ ಶೀನಪ್ಪ ಗೌಡ ಬೈತ್ತಡ್ಕ, ಶುಭಾ ಆರ್‌. ನೋಂಡಾ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸದಸ್ಯರಾದ ಶತ್ರುಂಜಯ ಆರಿಗ, ಅಬ್ದುಲ್‌ ರಹಿಮಾನ್‌, ಕಾಲೇಜಿಗೆ ಸಭಾಭವನ ಕೊಡುಗೆ ನೀಡಿರುವ ರತಿ ಮಂಜುನಾಥ ಶೆಟ್ಟಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮಾರ್ಕಾಜೆ, ಪಿ.ಡಿ. ಗಂಗಾಧರ ರೈ ಉಪಸ್ಥಿತರಿದ್ದರು. 

ಕಾಲೇಜು ಆಂತರಿಕ ಗುಣಮಟ್ಟ ಭರವಸಾ ಕೋಶದ ಸದಸ್ಯ ಪ್ರವೀಣ್‌ ಕುಮಾರ್‌ ಕೆಡೆಂಜಿಗುತ್ತು ಪ್ರಸ್ತಾವನೆಗೈದರು. ಪ್ರಾಧ್ಯಾಪಕ ವೆಂಕಟೇಶ್‌ ಪ್ರಸನ್ನ ಸ್ವಾಗತಿಸಿದರು. ಸ್ವಾಮಿ ಎಸ್‌. ಕಾರ್ಯಕ್ರಮ ನಿರೂಪಿಸಿದರು. ಹನುಮಂತ ಗೌಡ ಎಚ್‌. ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next