ಹೀಗೆ ಮುಸುಕಿನ ಗುದ್ದಾಟ ಬೇಡ. ನನ್ನ ಮೊಬೈಲ್ ನಂಬರ್ ಮರೆತಿದ್ದರೆ ನೆನಪಿರಲಿ ಎಂದು ಮತ್ತೆ ಸಂಖ್ಯೆ ಬರೆದಿರುವೆ. ಸಂದೇಶ ಹಾಕಿದರೆ ಓದುವೆಯೋ ಇಲ್ಲವೋ ಅನ್ನುವ ಗೊಂದಲ. ಅದಕ್ಕೇ, ನಿನ್ನ ಕೈಯಲ್ಲಿ ಮಾತ್ರ ಕೊಡಬೇಕು ಅನ್ನುವ ರೀತಿಯಲ್ಲಿ ಅಂಚೆ ಹಾಕ್ತಿದ್ದೀನಿ.
“ಸುಮಾರು ಹದಿನೈದು ದಿನಗಳಿಂದ ಗಮನಿಸುತ್ತಿದ್ದೇನೆ. ನಮ್ಮ ಕ್ಲಾಸಿಗೆ ಹೊಸ ಅಡ್ಮಿಶನ್, ಆ ಲಂಬೂ, ಬಂದಾಗಿಲಿನಿಂದ ನೀನು ಮೊದಲಿನಂತಿಲ್ಲ. ಸದಾ ಅವನ ಜೊತೇನೆ ಕಾಣಿದ್ದೀಯ; ಫೆವಿಕಾಲ್ ಕಿ ಜೋಡಿ ಹೈ ತರಹ. ಎದುರಿಗೆ ಸಿಕ್ಕರೂ ನನ್ನನ್ನು ಅವಾಯ್ಡ್ ಮಾಡುತ್ತಿರುವೆ. ಲೈಬ್ರರಿಗೆ ನಾನು ಕಾಲಿಡುತ್ತಿರುವಂತೆಯೇ ನೀನು ಹೊರಗೆ ಹೊರಡುವೆ. ಕ್ಯಾಂಟೀನ್ ನಲ್ಲೂ, ಬ್ರೇಕ್ ಟೈಮ್ ನಲ್ಲೂ ಸಿಗ್ತಿಲ್ಲ. ನನ್ನ ಸಂದೇಶಗಳಿಗೂ ಉತ್ತರವಿಲ್ಲ, ಕರೆಯಗಳೂ° ರಿಸೀವ್ ಮಾಡುತ್ತಿಲ್ಲ. ನನ್ನ ಪ್ರತಿಯೊಂದು ಹೆಜ್ಜೆಯ ಲೆಕ್ಕ ಹೇಳಿ ಹಗುರಾಗುತ್ತಿದ್ದ ನನಗೆ ಈ ಹದಿನೈದು ದಿನಗಳಿಂದ ಹೇಳಲಾಗದ ವೇದನೆ.
ನಿನ್ನ ಈ ನಡುವಳಿಕೆಯನ್ನು ನನಗೆ ಅರ್ಥೈಸಲಾಗುತ್ತಿಲ್ಲ. ನನ್ನಿಂದೇನಾದರೂ ತಪ್ಪಾಗಿದೆಯೇ ? ಅರಿತೋ ಅರಿಯದೆಯೋ ನಿನ್ನ ಮನನೋಯಿಸಿರುವೆನಾ ? ಹೇಳಿದರೆ ನಾನು ತಿದ್ದಿಕೊಳ್ಳುವೆ. ಆದರೆ, ಈ ರೀತಿ ಮುಖ ತಿರುಗಿಸುವ ಶಿಕ್ಷೆ ಕೊಡಬೇಡ ಪ್ಲೀಸ್. ನಾಳೆ ಭಾನುವಾರ, ಕಾಲೇಜೂ ಇರೋಲ್ಲ. ಕನಿಷ್ಠ ನಿನ್ನ ದರ್ಶನ ಭಾಗ್ಯವೂ ಇರೋಲ್ಲ. ಹಾಳಾದ್ದು ಈ ಮೋಹದಿಂದ ಹೊರಗೆ ಬರುವುದಕ್ಕೂ ಆಗದೇ ತೊಳಲಾಡ್ತಿದ್ದೀನಿ. ನನ್ನೊಂದಿಗೆ ಇನ್ಮುಂದೆ ಯಾವುದೇ ಸ್ನೇಹ ಬೇಡ ಅನ್ನೋದಾದ್ರೆ ಬೇಡ ಅನ್ನು. ಹೀಗೆ ಮುಸುಕಿನ ಗುದ್ದಾಟ ಬೇಡ. ನನ್ನ ಮೊಬೈಲ್ ನಂಬರ್ ಮರೆತಿದ್ದರೆ ನೆನಪಿರಲಿ ಎಂದು ಮತ್ತೆ ಸಂಖ್ಯೆ ಬರೆದಿರುವೆ. ಸಂದೇಶ ಹಾಕಿದರೆ ಓದುವೆಯೋ ಇಲ್ಲವೋ ಅನ್ನುವ ಗೊಂದಲ. ಅದಕ್ಕೇ, ನಿನ್ನ ಕೈಯಲ್ಲಿ ಮಾತ್ರ ಕೊಡಬೇಕು ಅನ್ನುವ ರೀತಿಯಲ್ಲಿ ಅಂಚೆ ಹಾಕ್ತಿದ್ದೀನಿ. ನಿನ್ನ ಉತ್ತರದ ನಿರೀಕ್ಷೆಯಿದೆ’ ಎಂದು ಪತ್ರಮುಖೇನ ತನ್ನ ಅಳಲನ್ನು ತೋಡಿಕೊಂಡಿದ್ದಳು.
ಅವಳ ಪತ್ರ ತಲುಪುವ ಮೊದಲೇ ಅವನ ಸಂದೇಶ ಬಂತು -“ಕ್ಷಮಿಸಿ ಬಿಡು ಹುಡುಗೀ, ಆ ಲಂಬು ನನ್ನದೇ ಊರಿನವ. ನಿನ್ನೆ ತನಕ ನನ್ನೊಂದಿಗೇ ರೂಮ್ ಶೇರ್ ಮಾಡಿದ್ದ. ಇವತ್ತು ಬೇರೆ ಜಾಗಕ್ಕೆ ಹೋದ. ಪ್ರಭಾವ ಬೀರಿ ಅವನನ್ನು ಬೇರೆ ಸೆಕ್ಷನ್ನಿಗೆ ಹಾಕಿಸಿಯಾಯ್ತು. ನನ್ನ ಚಲನವಲನದ ಮೇಲೆ ಅವನು ನಿಗಾ ಇಟ್ಟಿದ್ದರಿಂದ ನಿನ್ನೊಂದಿಗೆ ಮೊದಲಿನಂತೆ ಇರಲಾಗಲಿಲ್ಲ. ಇನ್ನು ಮುಂದೆ ಹಾಗಾಗೋಲ್ಲ. ಅವನು ಹೇಗೂ ನಮ್ಮ ಕ್ಲಾಸ್‌ನಲ್ಲಿ ಇಲ್ಲ. ಹೀಗಾಗಿ, ನಾಳೆ ಫಸ್ಟ್ ಲೈಬ್ರರೀಲಿ ಸಿಗ್ತಿನಿ, ಸಿಟ್ಟಾಗಬೇಡ್ವೇ ನನ್ನ ಬಂಗಾರಿ… ‘
ಅವಳಿಗೆ, ಹೋದ ಉಸಿರು ಬಂದಂತಾಗಿ
ಕನ್ನಡಿ ಇಲ್ಲದ ಊರಿನಲಿ
ಕಣ್ಣಿಗೆ ಬಿದ್ದವ ನೀನು ಅಂತ ಕಣ್ಣೊರೆಸಿಕೊಳ್ಳುತ್ತಲೇ ಗುನುಗಿದಳು.
-ರಾಜಿ,ಬೆಂಗಳೂರು