ಬೆಳ್ತಂಗಡಿ: ಪ್ರಸ್ತುತ ಜಗತ್ತಿನೆಲ್ಲೆಡೆ ಭಾರತದ ಶ್ರೇಷ್ಠತೆಯ ಗುಣಗಾನ ನಡೆಯುತ್ತಿದ್ದು, ಜ್ಞಾನದ ಸಂಕೇತ ಶ್ರೀ ಶಾರದೆಯ ಆರಾಧನೆಯಿಂದ ಭಾರತ ಇನ್ನಷ್ಟು ಶ್ರೇಷ್ಠವಾಗಲು ಸಾಧ್ಯ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ತೋಟತ್ತಾಡಿಯ ಎಸ್‌ಎನ್ ಡಿಪಿ ಶಾಖೆಯಲ್ಲಿ ತೋಟತ್ತಾಡಿ-ಬೆಂದ್ರಾಳ ಧರ್ಮರಕ್ಷಾ ವೇದಿಕೆಯ ವತಿಯಿಂದ ನಡೆದ 2ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೆಯ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಧಾರ್ಮಿಕ ಉಪನ್ಯಾಸ ನೀಡಿ, ಶಾರದೋತ್ಸವದಂತಹ ಧಾರ್ಮಿಕ ಕಾರ್ಯಗಳು ಹಿಂದೂಗಳ ಧರ್ಮ ಜಾಗೃತಿಗೆ ಪೂರಕವಾಗಿದೆ ಎಂದರು.
ಜ್ಞಾನರತ್ನ ಎಜುಕೇಶನ್ ಚಾರಿಟೆಬಲ್ ಟ್ರಸ್ಟ್‌ನ ಭಾಸ್ಕರ ದೇವಸ್ಯ, ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಕಾಶ್ ಹೊಸಮಠ, ಮಿಯ್ನಾರು ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ನಿತ್ಯಾನಂದ ಗೌಡ, ತೋಟತ್ತಾಡಿ ಎಸ್‌ಎನ್ ಡಿಪಿಯ ಅಧ್ಯಕ್ಷ ಮುರಳಿ ಕೆ.ಜೆ., ಕಲ್ಲಗುಂಡ ಬಂಟ ಯಾನೆ ಇಷ್ಟದೇವತಾ ದೇವಸ್ಥಾನದ ಕಾರ್ಯದರ್ಶಿ ಧನಂಜಯ ಬಂಗೇರ, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ತೋಟತ್ತಾಡಿ ಸೇವಾ ಪ್ರತಿನಿಧಿ ಬೊಮ್ಮಣ್ಣ ಗೌಡ ಎಂ., ವೇದಿಕೆ ಅಧ್ಯಕ್ಷ ಶಿವಪ್ರಸಾದ್ ಮಡಿಯೂರು ಉಪಸ್ಥಿತರಿದ್ದರು. ವೇದಿಕೆಯ ಕಾರ್ಯದರ್ಶಿ ಗಣೇಶ ಬೆಂದ್ರಾಳ ವರದಿ ವಾಚಿಸಿದರು. ಸಂಚಾಲಕ ಹರಿಕೃಷ್ಣ ಇರ್ವತ್ರಾಯ ಬೆಂದ್ರಾಳ ಸ್ವಾಗತಿಸಿ, ಸುಧೀರ್ ಮೂರ್ಜೆ ವಂದಿಸಿದರು. ಪ್ರಾಧ್ಯಾಪಕ ಸಂಪತ್‌ಕುಮಾರ್ ಜೈನ್ ನಿರೂಪಿಸಿದರು. ಧಾರ್ಮಿಕ ವಿಧಿ ವಿಧಾನಗಳು, ಯಕ್ಷಗಾನ, ತುಳುನಾಟಕ ಮಾಜಂದಿ ಕುಂಕುಮ ಪ್ರದರ್ಶನಗೊಂಡು ಬಳಿಕ ಶೋಭಾಯಾತ್ರೆ ನಡೆಯಿತು.
ಶ್ರೀರಾಮನ ಆದರ್ಶ ಮೈಗೂಡಿಸಿಕೊಳ್ಳಿ
ಸ್ವಾಮಿ ವಿವೇಕಾನಂದರ ಕಲ್ಪನೆಯ ಭಾರತ ನಿರ್ಮಾಣದ ಕಾರ್ಯ ಸಾಕಾರಗೊಳ್ಳುತ್ತಿದ್ದು, ಇದಕ್ಕೆ ಯುವಜನಾಂಗದ ಕೊಡುಗೆ ಅಗತ್ಯವಿದೆ. ತೋಟತ್ತಾಡಿಯ ಧರ್ಮರಕ್ಷಾ ವೇದಿಕೆ ಶಾರದೆಯ ಆರಾಧನೆ ಮೂಲಕ ಪುಣ್ಯ ಕಾರ್ಯ ನಡೆಸುತ್ತಿದ್ದು, ಈ ಮೂಲಕ ಎಲ್ಲರೂ ಶ್ರೀರಾಮನ ಆದರ್ಶಗಳನ್ನು ಮೈಗೂಡಿಸಿಕೊಳ್ಳಲಿ.
–
ನಳಿನ್‌ಕುಮಾರ್ ಕಟೀಲು ಸಂಸದರು