ಮುಂಬಯಿ: ವಾಹನಗಳ ಪಾರ್ಕಿಂಗ್ ಸಮಸ್ಯೆಯಿರುವ ವಸತಿ ಸಮುಚ್ಛಯಗಳಲ್ಲಿ ವಾಸಿಸುವ ಯಾವುದೇ ಕುಟುಂಬ, ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದದಂತೆ ಕಟ್ಟುನಿಟ್ಟಾದ ಬಿಗಿ ನಿಯಮವೊಂದನ್ನು ರೂಪಿಸಬೇಕು ಎಂದು ಬಾಂಬೆ ಹೈಕೋರ್ಟ್, ಮಹಾರಾಷ್ಟ್ರದ ಅಧಿಕಾರಿಗಳಿಗೆ ತಾಕೀತು ಮಾಡಿದೆ.
ಕಾರ್ ಪಾರ್ಕಿಂಗ್‌ಗಾಗಿ ಮೀಸಲಿಡುವ ಸ್ಥಳದ ಅಳತೆಯನ್ನು ಇಳಿಸುವಂತೆ ಮಹಾರಾಷ್ಟ್ರ ಸರ್ಕಾರ, ಈ ಹಿಂದಿನ ನಿಯಮಗಳಿಗೆ ತಿದ್ದುಪಡಿ ತಂದಿದೆ.ಅದರ ವಿರುದ್ಧ ನವೀ ಮುಂಬೈನ ಸಂದೀಪ್ ಠಾಕೂರ್ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಕಾರು ಖರೀದಿಸುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕೆ ಒಂದು ಕುಟುಂಬ 4-5 ಕಾರುಗಳನ್ನು ಖರೀಸಲು ಅನುಮತಿ ನೀಡಬಾರದು.ತಾನು ಹೊಂದಿರುವ ವಾಹನಗಳ ಪಾರ್ಕಿಂಗ್ ಗೆ ಕುಟುಂಬಕ್ಕೆ ಅಗತ್ಯ ಸ್ಥಳಾವಕಾಶ ಇದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ಎಂದು ನ್ಯಾಯಪೀಠ ಹೇಳಿತು.
ಇದನ್ನೂ ಓದಿ:ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು !
ಶುಕ್ರವಾರ, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಜಿ.ಎಸ್. ಕುಲಕರ್ಣಿ ಅವರುಳ್ಳ ಪೀಠ, ಒಂದು ಫ್ಲ್ಯಾಟ್ ಹೊಂದಿರುವವರಿಗೆ ಒಂದೇ ಕಾರು ಎಂಬ ನಿಯಮ ಜಾರಿಗೊಳಿಸಬೇಕು ಎಂದು ಸೂಚಿಸಿತು.