Advertisement

Emergency ಹೇರಿದವರು ಪ್ರಜಾಪ್ರಭುತ್ವ ಬಗ್ಗೆ ಬುದ್ದಿ ಹೇಳುತ್ತಾರೆ: ಪ್ರಹ್ಲಾದ ಜೋಶಿ

03:21 PM Feb 26, 2024 | Team Udayavani |

ಹುಬ್ಬಳ್ಳಿ: ನರೇಂದ್ರ ಮೋದಿಯವರು ಸರ್ವಾಧಿಕಾರಿ, ಇನ್ನೇನೋ ಆಗುತ್ತಾರೆಂದು ಟೀಕೆ ಮಾಡಲಿ. ಮೂರನೇ ಬಾರಿ ಮೋದಿಯವರು ಪ್ರಧಾನಿಯಾಗುವುದು ಶತಸಿದ್ದ. ವಿಪಕ್ಷದವರು ಇಂತಹ ಅಸಂಬದ್ದ ಟೀಕೆಗಳೊಂದಿಗೆ ಅಳುತ್ತಲೇ ಇರಬೇಕಾಗುವುದು ಅಷ್ಟೇ ಸತ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದರು.

Advertisement

ಅಣ್ಣಿಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗಿನಿಂದ ಹಿಡಿದು ಇಂದಿನವರೆಗೆ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷ ನಾಯಕರು ಇದೇ ರೀತಿ ಆರೋಪಿಸುತ್ತಾ ಬಂದಿದ್ದು, ಅದಕ್ಕೆ ಯಾವ ಅರ್ಥವಿಲ್ಲ. ದೇಶದಲ್ಲಿ 94 ರಾಜ್ಯ ಸರ್ಕಾರಗಳನ್ನು ಅಸಂವಿಧಾನಿಕ ರೀತಿಯಲ್ಲಿ ವಜಾಗೊಳಿಸಿದವರು, ದೇಶಕ್ಕೆ ತುರ್ತುಪರಿಸ್ಥಿತಿ ಹೇರಿದವರು ಪ್ರಜಾಪ್ರಭುತ್ವ ಬಗ್ಗೆ ನಮಗೆ ಬುದ್ದಿ ಹೇಳುತ್ತಾರಾ ಎಂದು ಪ್ರಶ್ನಿಸಿದರಲ್ಲದೆ, ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಗೊಂಡಿದೆ. ದೇಶದ ವರ್ಚಸ್ಸು ಹೆಚ್ಚಿದೆ ಇದನ್ನು ದೇಶದ ಜನತೆ ಮನಗಂಡಿದ್ದಾರೆ ಎಂದರು.

ಕಳಸಾ-ಬಂಡೂರಿ ನಾಲಾ ಯೋಜನೆಗೆ ವನ್ಯಜೀವಿ ಮಂಡಳಿಯಿಂದ ಕೆಲ ಮಾಹಿತಿ ಅಗತ್ಯವಿದೆ. ರಾಜ್ಯ ಸರ್ಕಾರ ಮಾಹಿತಿ ನೀಡಿದರೆ, ಕೇಂದ್ರದಿಂದ ಅಗತ್ಯ ಅನುಮೋದನೆಗೆ ಪ್ರಾಮಾಣಿಕ ಯತ್ನ ಮಾಡುತ್ತೇವೆ ಎಂದರು.

ಒಂದಂತು ಸ್ಪಷ್ಟ ಮೋದಿ ಅಧಿಕಾರಾವಧಿಯಲ್ಲೇ ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನ ಆಗುವುದು ಖಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next