Advertisement

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

04:43 PM Apr 27, 2024 | Team Udayavani |

ಹುಬ್ಬಳ್ಳಿ: ಅಭಿವೃದ್ಧಿ ಕಾರ್ಯಗಳ ಮೇಲೆ ಜನರ ಮತಯಾಚನೆ ಮಾಡಬೇಕು. ಅದು ಬಿಟ್ಟು ಮಣ್ಣಿಗೆ ಬನ್ನಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಜನರನ್ನು ಭಾವನಾತ್ಮಕವಾಗಿ ಬ್ಲಾಕ್‌ಮೇಲ್ ಮಾಡುವುದಾಗಿದೆ. ಇಂತಹ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐವತ್ತು ವರ್ಷದ ಸುದೀರ್ಘ ರಾಜಕಾರಣದಲ್ಲಿ 10 ವರ್ಷ ಬಿಟ್ಟರೆ ಉಳಿದ 40 ವರ್ಷ ಆಡಳಿತ ಹಾಗೂ ವಿರೋಧ ಪಕ್ಷದಲ್ಲಿದ್ದರೂ ಉತ್ತಮ ಸ್ಥಾನದಲ್ಲಿದ್ದರು. ಅತಿ ಹೆಚ್ಚು ಅನುದಾನವನ್ನು ಆ ಭಾಗಗಳಿಗೆ ಕೊಟ್ಟಿದ್ದೇವೆ. ಈಗ ಹಿಂದುಳಿದಿದೆ ಎನ್ನುವುದರಲ್ಲಿ ಏನು ಅರ್ಥವಿಲ್ಲ.  ಅವರ ಆಡಳಿತ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿಲ್ಲ ಹೀಗಾಗಿ ಈ ಭಾವನಾತ್ಮಕ ದಾಳವನ್ನು ಬಳಸುತ್ತಿದ್ದಾರೆ. ಇದಕ್ಕೆ ಜನರು ಮರುಳಾಗುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತವನ್ನು ಜನರು ನೇರವಾಗಿ ನೋಡಿದ್ದಾರೆ. ಆಧಾರದ ಮೇಲೆ ಅಲ್ಲಿ ನಮ್ಮ ಅಭ್ಯರ್ಥಿ ಜಾಧವವರು ಗೆಲ್ಲುತ್ತಾರೆ ಎಂದರು.

ಆಸ್ತಿ ಮರು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ಸಿಗೆ ಪ್ರಶ್ನೆ ಮಾಡುತ್ತೇನೆ. ಎಲ್ಲ ಮುಸ್ಲಿಂ ಜಾತಿಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದರೆ ಸಾಮಾನ್ಯವಾಗಿ ಎಲ್ಲಾ ಸೌಲಭ್ಯಗಳು ಇವರಿಗೆ ಸೇರುತ್ತವೆ. ನಿಮ್ಮ ಪ್ರಕಾರ ಇದು ಆಸ್ತಿ ಹಂಚಿಕೆ ಅಲ್ಲವೇ? ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳಿಗೆ ಬಹುದೊಡ್ಡ ಅನ್ಯಾಯವನ್ನು ಮಾಡುತ್ತಿದೆ. ಹೀಗಾಗಿ ರಾಷ್ಟ್ರೀಯ ಹಿಂದುಳಿದ ಆಯೋಗ ಇವರಿಗೆ ನೋಟಿಸ್ ಕೊಟ್ಟಿದೆ ಎಂದರು.

ಬರ ಪರಿಹಾರವನ್ನು ಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರಲಿಲ್ಲ. ಆದರೆ ಇವರು ಕೋರ್ಟ್ ಗೆ ಹೋಗಿದ್ದು ಅವರ ರಾಜಕೀಯ ಹಿತಾಸಕ್ತಿಗೋಸ್ಕರ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕೂಡ ಕೇಂದ್ರದಿಂದ ಪರಿಹಾರ ವಿಳಂಬವಾಗಿತ್ತು. ಆದರೆ ಅಂದಿನ ರಾಜ್ಯ ಸರ್ಕಾರ ಜನರಿಗೆ ಪರಿಹಾರ ವಿತರಣೆ ಮಾಡಿತ್ತು. ಕೇಂದ್ರದ ವಿರುದ್ಧ ಕೋರ್ಟ್‌ಗೆ ಹೋಗುವುದು ಇಂಡಿ ಒಕ್ಕೂಟದ ಮಿತ್ರ ಪಕ್ಷಗಳಿಗೆ ಒಂದು ಕೆಲಸವಾಗಿಬಿಟ್ಟಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next