Advertisement

Politics: ಅಪ್ಪ-ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಎನ್ನುತ್ತಾರೆ: ಅನಂತಕುಮಾರ್‌  ಹೆಗಡೆ

12:40 AM Jan 19, 2024 | Team Udayavani |

ಬೆಳಗಾವಿ: ಕೆಲವರು ಜಾತ್ಯತೀತ ಎಂದು ಹೇಳುತ್ತಾರೆ. ಅಪ್ಪ-ಅಮ್ಮ ಯಾರೆಂದು ಗೊತ್ತಿಲ್ಲದವರು ಮಾತ್ರ ಹೀಗೆ ಹೇಳಲು ಸಾಧ್ಯ ಎಂದು ಕೆನರಾ ಸಂಸದ ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ.

Advertisement

ಖಾನಾಪುರ ನಗರದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಹಿಂದೂಗಳೆಂದು ಮರೆತೇ ಹೋಗಿತ್ತು. ಈಗಲೂ ತತ್‌ಕ್ಷಣ ಕೇಳಿದರೆ ಅನೇಕರು ತಮ್ಮ ಜಾತಿ ಹೆಸರು ಹೇಳುತ್ತಾರೆ. ಲಿಂಗಾಯತ, ಮರಾಠ, ಭಟ್‌, ಶೆಟ್ಟಿ ಎಂಬುದಾಗಿ ಪರಿಚಯಿಸಿಕೊಳ್ಳುತ್ತಾರೆ. ಹಿಂದೂ ಎಂಬುದಾಗಿ ನೆನಪಿಸಿಕೊಂಡು ಹೇಳುವ ಸ್ಥಿತಿ ಇದೆ. ಸಂಸ್ಕಾರ ಇದ್ದರೆ ಹಿಂದೂ ಎನ್ನುತ್ತಾರೆ ಎಂದರು.

ಇಷ್ಟು ವರ್ಷಗಳ ಕಾಲ ಜಾತಿ-ಭಾಷೆ ಹೆಸರಲ್ಲಿ ನಮ್ಮನ್ನು ಒಡೆದಿದ್ದಾರೆ. ಮರಾಠಿ-ಕನ್ನಡ ಒಂದಾಗುತ್ತಾರೆ ಎಂದರೆ ಕತ್ತಿ ತಗೊಂಡು ಬರುತ್ತಾರೆ. ಈ ರೀತಿ ಒಡೆದರೆ ಅವರ ರಾಜಕಾರಣ ನಡೆಯುವುದು. ಸ್ವಾತಂತ್ರ್ಯ ಬಳಿಕ ಮರಾಠಿ-ಕನ್ನಡ ಜಗಳ ಆರಂಭವಾಯಿತು. ನಮ್ಮನ್ನು ಒಡೆದು ಆಳಿದರು. ಇದರ ಹೊರತಾಗಿ ನಾವೆಲ್ಲರೂ ಒಂದಾಗಿ ಹಿಂದೂ ಹೆಸರಲ್ಲಿ ಎದ್ದು ನಿಂತೆವು. ರಣಭೈರವ ರೀತಿಯಲ್ಲಿ ಏಳುತ್ತಿದ್ದೇವೆ ಎಂದರು. 500 ವರ್ಷಗಳ ಪಾಪವನ್ನು ತೊಳೆದುಕೊಂಡು ಶ್ರೀರಾಮ ಮಂದಿರ ಕಟ್ಟುತ್ತಿದ್ದೇವೆ. ಇನ್ನು ಕಾಶಿ, ಮಥುರಾ ಬಾಕಿ ಇದೆ. ಹಳ್ಳಿ ಹಳ್ಳಿಗಳಲ್ಲಿ ಅವಮಾನಗೊಂಡ ಅನೇಕ ದೇವಸ್ಥಾನಗಳಿವೆ. ಹಳ್ಳಿ ಹಳ್ಳಿಯಲ್ಲಿ ಆಗಿರುವ ಅಪಮಾನದ ಸೇಡು ತೀರಿಸಿಕೊಳ್ಳುತ್ತೇವೆ ಎಂದರು.

ಹೆಗಡೆ ವಿರುದ್ಧ ಅಸಮಾಧಾನ
ಖಾನಾಪುರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯ ಕರ್ತರ ಸಭೆಯಲ್ಲಿ ಅನಂತಕುಮಾರ್‌ ಹೆಗಡೆ ವಿರುದ್ಧ ಕೆಲವು ಕಾರ್ಯಕರ್ತರು ಅಸಮಾಧಾನ ಹೊರಹಾಕಿದರು. ಹಲವು ವರ್ಷಗಳಿಂದ ನೀವು ಕಾರ್ಯಕರ್ತರ ಕೈಗೆ ಸಿಕ್ಕಿಲ್ಲ. ಅಭಿವೃದ್ಧಿ ಕೆಲಸಗಳೂ ಕುಂಠಿತಗೊಂಡಿವೆ. ಸಂಸದರ ಕಾರ್ಯಾಲಯವಿಲ್ಲದೆ ಪರದಾಡುತ್ತಿದ್ದೇವೆ. ಖಾನಾಪುರದ ಜನರು ಬೆಳಗಾವಿಗೆ ಹೋದರೆ ಕಾರವಾರಕ್ಕೆ ಕಳುಹಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next