ಮಂಗಳೂರು: ಸಂವಿಧಾನದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರಿಂದ ಸಂವಿಧಾನದ ಆಶಯಗಳನ್ನು ನಾಶಪಡಿಸಿ ಸೌಹಾರ್ದಕ್ಕೆ ಧಕ್ಕೆ ತರುವ ಯತ್ನ ನಡೆಯುತ್ತಿದೆ ಎಂದು ಸಿಪಿಐಎಂ ಪಾಲಿಟ್ ಬ್ಯುರೋ ಸದಸ್ಯೆ ಹಾಗೂ ಮಾಜಿ ರಾಜ್ಯಸಭಾ ಸದಸ್ಯೆ ಬೃಂದಾ ಕಾರಟ್ ಆರೋಪಿಸಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.
ವಿಭಜನೆ ಮತ್ತು ದ್ವೇಷದ ರಾಜ ಕಾರಣ ವಿರೋಧಿಸಿ ಹಾಗೂ ಸೌಹಾರ್ದ ಕರಾವಳಿಯ ನಿರ್ಮಾಣ ವನ್ನು ಮುಂದಿಟ್ಟು ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸೋಮವಾರ ಪುರಭವನದಲ್ಲಿ ಏರ್ಪಡಿಸಿದ್ದ ಸೌಹಾರ್ದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಹೈಕೋರ್ಟ್‌ನ ತೀರ್ಪು ದುರದೃಷ್ಟಕರ. ಕೆಲವು ಸಂಘಟನೆಗಳು ಹಿಜಾಬ್ ಧರಿಸುವಂತೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ತಂದಿರುವ ಕ್ರಮ ಖಂಡನೀಯ ಎಂದು ಬೃಂದಾ ಕಾರಟ್ ಹೇಳಿದರು.
ಕಾಶ್ಮೀರಿ ಫೈಲ್ಸ್ ವನ್ ಸೈಡ್ ಶೋ: ಬೃಂದಾ
ಮಂಗಳೂರು: “ಕಾಶ್ಮೀರಿ ಫೈಲ್ಸ್’ ಚಲನಚಿತ್ರದಲ್ಲಿ ಭತೋತ್ಪಾದಕರಿಂದ ಕಾಶ್ಮೀರಿ ಪಂಡಿತರ ಮೇಲೆ ನಡೆದ ದಬ್ಟಾಳಿಕೆಯನ್ನು ಮಾತ್ರ ತೋರಿಸಲಾಗಿದೆ; ಅದು ವನ್ ಸೈಡೆಡ್ ಶೋ, ರಿಯಾಲಿಟಿ ಇಲ್ಲ ಎಂದು ಬೃಂದಾ ಕಾರಟ್ ಆರೋಪಿಸಿದ್ದಾರೆ.
ಕಾಶ್ಮೀರದಲ್ಲಿ ಪಾಕ್ ಭಯೋತ್ಪಾದಕರು ತಮ್ಮ ವಿರುದ್ಧ ಧ್ವನಿ ಎತ್ತಿದ ಎಲ್ಲರ ಮೇಲೂ ದೌರ್ಜನ್ಯ ನಡೆಸಿದ್ದಾರೆ. ಕಾಶ್ಮೀರಿ ಪಂಡಿತರು ಮಾತ್ರವಲ್ಲದೆ ಅನೇಕ ಮಂದಿ ಕಾಶ್ಮೀರಿ ಮುಸ್ಲಿಮರು ಕೂಡ ಭಯೋತ್ಪಾದಕರ ವಿರುದ್ಧ ಧ್ವನಿ ಎತ್ತಿದ್ದರು. ಅವರೆಲ್ಲರ ಮೇಲೆ ದಬ್ಟಾಳಿಕೆ ನಡೆದಿದೆ. ಪಾಕ್ ಭಯೋತ್ಪಾದಕರಿಂದ ಸಂತ್ರಸ್ತರಾದ ಎಲ್ಲರ ವಿಷಯಗಳನ್ನು ಚಲನ ಚಿತ್ರದಲ್ಲಿ ತೋರಿಸಬೇಕಾಗಿತ್ತು ಎಂದು ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸ್ವಾತಂತ್ರೊéàತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಬಿಜೆಪಿ ಹೈಜಾಕ್ ಮಾಡಿದೆ ಎಂದು ಟೀಕಿಸಿದರು.