Advertisement

Delhi; ಪ್ರಜಾಪ್ರಭುತ್ವ,ಸಂವಿಧಾನ ಉಳಿಸಲು ಇದು ಬಹಳ ಮುಖ್ಯ ಚುನಾವಣೆ:ಸೋನಿಯಾ

07:44 PM May 23, 2024 | Team Udayavani |

ಹೊಸದಿಲ್ಲಿ: ”ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಇದು ಬಹಳ ಮುಖ್ಯವಾದ ಚುನಾವಣೆ. ಹೋರಾಟದಲ್ಲಿ ನಿಮ್ಮ ಪಾತ್ರವನ್ನು ವಹಿಸಿ ಮತ್ತು ಎಲ್ಲಾ ಏಳು ಸ್ಥಾನಗಳಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಮನವಿ ಮಾಡಿದ್ದಾರೆ.

Advertisement

ರಾಷ್ಟ್ರ ರಾಜಧಾನಿಯಲ್ಲಿ ಲೋಕಸಭಾ ಮತದಾನಕ್ಕೆ ಎರಡು ದಿನಗಳ ಮೊದಲು ವಿಡಿಯೋ ಹೇಳಿಕೆಯಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿಯಂತಹ ವಿಷಯಗಳ ಮೇಲೆ ಈ ಲೋಕಸಭೆ ಚುನಾವಣೆಯನ್ನು ಎದುರಿಸಲಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಗುರುವಾರ ನಗರದಲ್ಲಿ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ದೆಹಲಿಯಲ್ಲಿ ಮೇ 25 ರಂದು ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next