Advertisement

ಗುಡ್‌ ಫ್ರೈಡೇ ಗಮನಸೆಳೆದ ಆ ಮೂರು ಚಿತ್ರಗಳು

10:50 AM Jul 10, 2017 | |

ವಾರಕ್ಕೆ ಐದು ಸಿನಿಮಾಗಳು ಬಿಡುಗಡೆಯಾಗುವುದು ಹೊಸದಲ್ಲ. ಕೆಲವೊಮ್ಮೆ ಐದಕ್ಕೆ ಐದು ಚಿತ್ರಗಳು ಸಹ ಸೋಲುವುದುಂಟು. ಆದರೆ, ಈ ವಾರ ಬಿಡುಗಡೆಯಾದ ಐದು ಚಿತ್ರಗಳಲ್ಲಿ ಎಷ್ಟು ಗೆಲ್ಲುತ್ತವೋ ಮತ್ತು ಎಷ್ಟು ಸೋಲುತ್ತವೋ ಗೊತ್ತಿಲ್ಲ. ಆದರೆ, ಮೂರು ಚಿತ್ರಗಳಂತೂ ಪ್ರೇಕ್ಷಕರ ಗಮನಸೆಳೆದಿವೆ. ಹೌದು, ಕಳೆದ ಶುಕ್ರವಾರ ಬಿಡುಗಡೆಯಾದ ಐದು ಚಿತ್ರಗಳಲ್ಲಿ “ಒಂದು ಮೊಟ್ಟೆಯ ಕಥೆ’ ಮತ್ತು “ಹೊಂಬಣ್ಣ’ ಚಿತ್ರಗಳ ಬಗ್ಗೆ ಸ್ವಲ್ಪ ಟಾಕ್‌ ಇತ್ತು.

Advertisement

ಎರಡೂ ಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮತ್ತು ನಿರೀಕ್ಷೆ ಇತ್ತು. ಈ ಎರಡೂ ಚಿತ್ರಗಳ ಜೊತೆಗೆ ಸರ್‌ಪ್ರ„ಸ್‌ ಎಂಬಂತೆ ಗಮನಸೆಳೆದಿದ್ದು “ಕಥಾ ವಿಚಿತ್ರ’. ವಿಶೇಷವೆಂದರೆ, ಮೂರೂ ಚಿತ್ರಗಳು ಹೊಸಬರ ಚಿತ್ರಗಳು ಮತ್ತು ಮೂರೂ ಚಿತ್ರಗಳು ಮೂರು ವಿಭಿನ್ನ ಜಾನರ್‌ಗಳಿಗೆ ಸೇರಿದಂತಹ ಚಿತ್ರಗಳಾಗಿವೆ. ಈ ಚಿತ್ರಗಳ ಪೈಕಿ ಒಂದಿಷ್ಟು ಕಲಾವಿದರು ಮತ್ತು ತಂತ್ರಜ್ಞರು ಹಳಬರು ಎನ್ನುವುದು ಬಿಟ್ಟರೆ, ಮಿಕ್ಕಂತೆ ಎಲ್ಲರೂ ಹೊಸಬರೇ.

ಮೂರೂ ಚಿತ್ರಗಳ ನಿರ್ದೇಶಕರು, ನಿರ್ಮಾಪಕರು ಇದೇ ಮೊದಲ ಬಾರಿಗೆ ಚಿತ್ರ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಸಿಕ್ಸರ್‌ ಎಂದು ಹೇಳುವುದಕ್ಕೆ ಸಾಧ್ಯವಿಲ್ಲದಿದ್ದರೂ, ಮೂರು ತಂಡದವರು ತಮ್ಮ ಶಕ್ತಿ ಮೀರಿ ದುಡಿಯುವುದರ ಜೊತೆಗೆ ತಮ್ಮ ವಿಭಿನ್ನ ಪ್ರಯತ್ನದಿಂದಾಗಿ ಪ್ರೇಕ್ಷಕರು ಮತ್ತು ವಿಮರ್ಶಕರ ಗಮನಸೆಳೆದಿದ್ದಾರೆ ಎಂದರೆ ತಪ್ಪಿಲ್ಲ. ಮೊದಲ ಚಿತ್ರದಲ್ಲೇ ಗಮನಸೆಳೆದರೂ, ಚಿತ್ರಗಳು ಹಿಟ್‌ ಆಗುತ್ತವೆ ಎಂದು ಹೇಳುವುದು ಕಷ್ಟ.

ಅದರಲ್ಲೂ “ಹೊಂಬಣ್ಣ’ ಮತ್ತು “ಕಥಾ ವಿಚಿತ್ರ’ ಚಿತ್ರಗಳು ಹೆಚ್ಚು ದಿನಗಳ ಕಾಲ ಚಿತ್ರಮಂದಿರದಲ್ಲಿ ನಿಲ್ಲುವುದು ಸಂಶಯ ಎನ್ನುವಂತಾಗಿದೆ. ಅದಕ್ಕೆ ಕಾರಣ, ಕ್ಯೂನಲ್ಲಿರುವ ಚಿತ್ರಗಳು. ಈಗಾಗಲೇ “ಹೊಂಬಣ್ಣ’ ಪ್ರದರ್ಶನವಾಗುತ್ತಿರುವ ಅನುಪಮ ಚಿತ್ರಮಂದಿರದಲ್ಲಿ, ಮುಂದಿನ ವಾರ “ಶಮಂತಕಮಣಿ’ ಎಂಬ ತೆಲುಗು ಚಿತ್ರ ಪ್ರದರ್ಶನವಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಮುಂದಿನ ವಾರ ಮೂರು, ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ, “ತ್ರಿವೇಣಿ’ ಚಿತ್ರಮಂದಿರದಿಂದ “ಕಥಾ ವಿಚಿತ್ರ’ ಹೋದರೆ ಆಶ್ಚರ್ಯವಿಲ್ಲ.

ಇನ್ನು “ಒಂದು ಮೊಟ್ಟೆಯ ಕಥೆ’ ಚಿತ್ರ ಹೆಚ್ಚಾಗಿ ಮಲ್ಟಿಪ್ಲೆಕ್ಸ್‌ನಲ್ಲಿ ಬಿಡುಗಡೆಯಾಗಿರುವುದರಿಂದ ಮತ್ತು ಚಿತ್ರ ಹೌಸ್‌ಫ‌ುಲ್‌ ಪ್ರದರ್ಶನಗಳನ್ನು ಕಾಣುತ್ತಿರುವುದರಿಂದ, ಆ ಚಿತ್ರಕ್ಕೆ ಅಷ್ಟು ಅಪಾಯವಿಲ್ಲ. ಅಪಾಯವಿರುವುದು “ಹೊಂಬಣ್ಣ’ ಮತ್ತು “ಕಥಾ ವಿಚಿತ್ರ’ ಚಿತ್ರಗಳಿಗೆ ಮಾತ್ರ. ಎರಡರ ಬಗ್ಗೆಯೂ ಒಳ್ಳೆಯ ಮಾತುಗಳು ಕೇಳಿ ಬರುತ್ತಿರುವುದರಿಂದ, ಪ್ರದರ್ಶನಕ್ಕೆ ಇನ್ನಷ್ಟು ಅವಕಾಶ ಸಿಕ್ಕರೆ, ಆಗ ಎರಡೂ ಚಿತ್ರಗಳಿಗೆ ಅನುಕೂಲವಾಗಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next