Advertisement

Nashedi; ಇಂದ್ರಿಯವೇ ಇಲ್ಲದವರು…: ರಾಹುಲ್ ಗಾಂಧಿ ನಶೆಯ ಹೇಳಿಕೆ ವಿರುದ್ಧ ಮೋದಿ ಕಿಡಿ

05:05 PM Feb 23, 2024 | Team Udayavani |

ವಾರಾಣಸಿ: ‘ಇಂದ್ರಿಯ (ಹೋಶ್) ಇಲ್ಲಿಲ್ಲದವರು ಯುವಕರನ್ನು ಕುಡುಕರು(ನಶೇದಿ)ಎಂದು ಕರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

Advertisement

ತಮ್ಮ ಸಂಸದೀಯ ಕ್ಷೇತ್ರವಾದ ವಾರಾಣಸಿಯಲ್ಲಿ 13,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಪರಿವಾರವಾದ, ಭ್ರಷ್ಟಾಚಾರ ಮತ್ತು ತುಷ್ಟೀಕರಣದ ರಾಜಕೀಯದಿಂದಾಗಿ ಉತ್ತರ ಪ್ರದೇಶವು ದಶಕಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು’ ಎಂದರು.

“ಕಾಂಗ್ರೆಸ್‌ನ ‘ಶಾಹಿ-ಪರಿವಾರ’ ಸದಸ್ಯರು ವಾರಾಣಸಿಯ ಯುವಕರನ್ನು ನಶೆಯಲ್ಲಿ ಇರುವವರು ಎಂದು ಕರೆಯುತ್ತಿದ್ದಾರೆ” ಎಂದು ರಾಹುಲ್ ಗಾಂಧಿಯ ಹೆಸರಿಸರನ್ನು ಉಲ್ಲೇಖಿಸದೆ ಕಿಡಿ ಕಾರಿದರು.

ವಾರಾಣಸಿಯಲ್ಲಿ ಕೆಲವು ಯುವಕರು ಮದ್ಯಪಾನ ಮಾಡುವುದನ್ನು, ಬೀದಿಗಳಲ್ಲಿ ಮಲಗಿ ರಾತ್ರಿ ನೃತ್ಯ ಮಾಡುವುದನ್ನು ನಾನು ಗಮನಿಸಿದ್ದೇನೆ ಎಂದು ಗಾಂಧಿ ಇತ್ತೀಚೆಗೆ ಹೇಳಿದ್ದರು. ಉತ್ತರ ಪ್ರದೇಶದ ಯುವಜನರ ಭವಿಷ್ಯ ನಶೆಯಲ್ಲಿ ಮುಳುಗಿದೆ ಎಂದು ಹೇಳಿದ್ದರು.

ಕಳೆದ 10 ವರ್ಷಗಳಲ್ಲಿ ವಾರಣಾಸಿಯ ಅಭಿವೃದ್ಧಿಯ ವೇಗ ಹೆಚ್ಚಿದೆ ಎಂದ ಮೋದಿ, ಸಂಸದರಾಗಿದ್ದ 10 ವರ್ಷಗಳಲ್ಲಿ ವಾರಾಣಸಿ ಅವರನ್ನು ‘ಬನಾರಸಿ’ಯನ್ನಾಗಿ ಮಾಡಿರುವುದನ್ನು ಗಮನಿಸಿದ್ದು, ಕಾಶಿಯ ಜನರ ಬದುಕನ್ನು ಸುಧಾರಿಸಲು ಬದ್ಧರಾಗಿರುವುದಾಗಿ ಹೇಳಿದರು.

Advertisement

”ರೈತರು ಮತ್ತು ಬಡವರಿಗಾಗಿ ತಮ್ಮ ಸರಕಾರದ ಕೆಲಸ, ಪಶುಸಂಗೋಪನೆಯು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮಾಧ್ಯಮವಾಗಿದೆ ಮತ್ತು ಸಣ್ಣ ಮತ್ತು ಭೂರಹಿತ ರೈತರಿಗೆ ಬೆಂಬಲವಾಗಿದೆ” ಎಂದರು.

“ಸ್ಥಳೀಯರು ಸಣ್ಣ ಕುಶಲಕರ್ಮಿಗಳು ಜಾಹೀರಾತು ಮಾಡಲು ನಾನು ಕಂಠದಾನ ಮಾಡುತ್ತೇನೆ. ಮೋದಿ ಸಣ್ಣ ರೈತರು ಮತ್ತು ಉದ್ಯಮಿಗಳ ರಾಯಭಾರಿ” ಎಂದು ಪ್ರಧಾನಿ ಹೇಳಿದರು.

ಅಭಿವೃದ್ಧಿಯ ಮಾದರಿ
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ‘ಸಂಸದ್ ಸಂಸ್ಕೃತ ಪ್ರತಿಯೋಗಿತಾ’ ವಿಜೇತರೊಂದಿಗೆ ಅವರು ಸಂವಾದ ನಡೆಸಿದ ಪ್ರಧಾನಿ ಮೋದಿ ಮುಂದಿನ ಐದು ವರ್ಷಗಳಲ್ಲಿ ಭಾರತ ಅಭಿವೃದ್ಧಿಯ ಮಾದರಿಯಾಗಲಿದೆ. ಇದು “ಮೋದಿ ಗ್ಯಾರಂಟಿ” ಎಂದರು.

“ಕಾಶಿಯನ್ನು ಈಗ ಪ್ರಪಂಚದಾದ್ಯಂತ ಅಭಿವೃದ್ಧಿ ಮತ್ತು ಪರಂಪರೆಯ ಮಾದರಿಯಾಗಿ ನೋಡಲಾಗುತ್ತಿದೆ. ಸಂಸ್ಕೃತಿ ಮತ್ತು ಸಂಪ್ರದಾಯದ ಸುತ್ತ ಆಧುನಿಕತೆಯು ಹೇಗೆ ಅಭಿವೃದ್ಧಿಗೊಂಡಿದೆ ಎಂಬುದನ್ನು ಜಗತ್ತು ಇಂದು ವೀಕ್ಷಿಸುತ್ತಿದೆ ಎಂದರು.

ಗುರುವಾರ ರಾತ್ರಿ ವಾರಾಣಸಿಬಂದಿರುವ ಮೋದಿ ಅವರು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next