Advertisement

ಥಾಮಸ್‌ ಕಪ್‌: ಪುರುಷರ ತಂಡ ನಾಕೌಟ್‌ ಹಂತಕ್ಕೆ

10:53 PM May 09, 2022 | Team Udayavani |

ಬ್ಯಾಂಕಾಕ್‌: ಭಾರತೀಯ ಪುರುಷರ ಬ್ಯಾಡ್ಮಿಂಟನ್‌ ತಂಡವು ಸತತ ಎರಡನೇ 5-0 ಗೆಲುವಿನೊಂದಿಗೆ ಥಾಮಸ್‌ ಕಪ್‌ ಕೂಟದ ನಾಕೌಟ್‌ ಹಂತಕ್ಕೇರಿದೆ.

Advertisement

“ಸಿ’ ಬಣದಲ್ಲಿ ಆಡುತ್ತಿರುವ ಭಾರತವು ಕೆನಡ ತಂಡದೆದುರು 5-0 ಅಂತರದ ಜಯ ಸಾಧಿಸಿದೆ.

ಭಾರತ ರವಿವಾರ ಜರ್ಮನಿಯನ್ನು 5-0 ಅಂತರದಿಂದ ಉರುಳಿಸಿತ್ತು. ಈ ಮೂಲಕ ಭಾರತ ಬಣದಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಮೂಲಕ ನಾಕೌಟ್‌ ಹಂತಕ್ಕೇರಲಿದೆ.

ವನಿತೆಯರ ತಂಡವು ಉಬೆರ್‌ ಕಪ್‌ ಕೂಟದ ಮೊದಲ ಪಂದ್ಯದಲ್ಲಿ ಕೆನಡ ವಿರುದ್ಧ 4-1 ಅಂತರದ ಜಯ ಸಾಧಿಸಿ ಶುಭಾರಂಭ ಮಾಡಿದೆ. ಲೀಗ್‌ ಹಂತದ ಮುಂದಿನ ಹೋರಾಟದಲ್ಲಿ ಭಾರತವು ಅಮೆರಿಕವನ್ನು ಮಂಗಳವಾರ ಮತ್ತು ಕೊರಿಯವನ್ನು ಬುಧವಾರ ಎದುರಿಸಲಿದೆ.

ಶ್ರೀಕಾಂತ್‌ಗೆ ಜಯ
ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ವಿಜೇತ ಕಿದಂಬಿ ಶ್ರೀಕಾಂತ್‌ ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಕೆನಡದ ಬ್ರಿಯಾನ್‌ ಯಾಂಗ್‌ ಅವರನ್ನು ಸೋಲಿಸಿ ಭಾರತಕ್ಕೆ ಮುನ್ನಡೆ ದೊರಕಿಸಿಕೊಟ್ಟರು. 52 ನಿಮಿಷಗಳ ಈ ಹೋರಾಟದಲ್ಲಿ ಶ್ರೀಕಾಂತ್‌ 20-22, 21-11, 21-15 ಗೇಮ್‌ಗಳಿಂದ ಗೆದ್ದು ಬಂದರು.

Advertisement

ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಕೇವಲ 29 ನಿಮಿಷಗಳಲ್ಲಿ ಜಾಸನ್‌ ಅಂತೋನಿ ಹೊ-ಶ್ಯುಯಿ ಮತ್ತು ಕೆವಿನ್‌ ಲೀ ಅವರನ್ನು ಮಣಿಸಿದರು. ಎಚ್‌. ಎಸ್‌. ಪ್ರಣಯ್‌ ಇನ್ನೊಂದು ಸಿಂಗಲ್ಸ್‌ನಲ್ಲಿ ಸಂಕೀರ್ತ್‌ ಅವರನ್ನು 21-15, 21-12 ಗೇಮ್‌ಗಳಿಂದ ಸುಲಭವಾಗಿ ಉರುಳಿಸಿದರು.

ಭಾರತೀಯ ತಂಡವು ಥಾಮಸ್‌ ಕಪ್‌ನಲ್ಲಿ ಚೊಚ್ಚಲ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಭಾರತವು ಇಷ್ಟರವರೆಗೆ ಥಾಮಸ್‌ ಕಪ್‌ನಲ್ಲಿ ಸೆಮಿಫೈನಲ್‌ ಹಂತಕ್ಕೂ ತೇರ್ಗಡೆಯಾಗಿಲ್ಲ. ಭಾರತವು ಬಣದ ಇನ್ನೊಂದು ಪಂದ್ಯದಲ್ಲಿ ಬುಧವಾರ ಚೈನೀಸ್‌ ತೈಪೆಯನ್ನು ಎದುರಿಸಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next