Advertisement
ಥಾಮಸ್ ಅಲ್ವಾ ಎಡಿಸನ್ ಅವರ ಕೆಲವು ಪ್ರಮುಖ ಸಾಧನೆಗಳು:
- ದೂರಸಂಪರ್ಕ ಅಭಿವೃದ್ಧಿ: ಟೆಲಿಗ್ರಾಫ್ ಅಥವಾ, ದೂರವಾಣಿ ಮತ್ತು ಇತರ ಆವಿಷ್ಕಾರಗಳ ಸುಧಾರಣೆಯು ನಂತರದ ವಿಜ್ಞಾನಿಗಳಿಗೆ ವಹಿಸಿಕೊಳ್ಳಲು ದಾರಿಮಾಡಿಕೊಟ್ಟಿತು ಎನ್ನುತ್ತಾರೆ.
- ಬ್ಯಾಟರಿ ಸುಧಾರಣೆಗಳು: ಬ್ಯಾಟರಿಗಳನ್ನು ಆವಿಷ್ಕರಿಸದಿದ್ದರೂ, ಅವುಗಳನ್ನು ಪರಿಪರ‍್ಣಗೊಳಿಸಿದ್ದಾರೆ. ಬ್ಯಾಟರಿಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಅವುಗಳ ಜೀವಿತಾವಧಿಯನ್ನು ವಿಸ್ತರಿಸಲು ಇವರ ಸಂಶೋಧನೆಗಳಿಂದ ಸಾಧ್ಯವಾಯಿತು. ಎನ್ನುತ್ತಾರೆ.
- ಬಲ್ಬ್‌ಗಳು: ಬಲ್ಬ್‌ಗಳನ್ನು ಆವಿಷ್ಕರಿಸದಿದ್ದರೂ, ಬ್ಯಾಟರಿ ಬಳಸಿ ದೀರ್ಘ ಕಾಲ ಉರಿಯಬಲ್ಲ ಬಲ್ಬಗಳ ಅವಿಷ್ಕಾರ ಮತ್ತು ಅಭಿವೃದ್ಧಿ ಮಾಡಿ ಆರ್ಥಿಕವಾಗಿ ಎಲ್ಲಾ ಸ್ತರದ ಜನರೂ ವಿದ್ಯುತ್ ಬಲ್ಬ್ ಬಳಸುವಂತೆ ಮಾಡಿದರು.
- ವಿದ್ಯುತ್ ಸ್ಥಾವರ: ವಿದ್ಯುತ್ ಸ್ಥಾವರಗಳನ್ನು ರಚಿಸುವುದು ಮತ್ತು ಅದನ್ನು ಇಡೀ ಜಗತ್ತಿಗೆ ತಲುಪುವಂತೆ ಮಾಡುವುದು ಅವರ ಕನಸಾಗಿತ್ತು. ಅದು ಅದರ ಕಾಲದಲ್ಲಿ ಒಂದು ಕ್ರಾಂತಿಕಾರಿ ಕಲ್ಪನೆಯಾಗಿತ್ತು.
Related Articles
Advertisement
ಇತ್ತೀಚೆಗೆ ಅಮೇರಿಕಾದ ಅಧ್ಯಕ್ಷ ಅಭ್ರ‍್ಥಿಯಾಗಿದ್ದಾಗ ಜೋ ಬೈಡನ್ ಈ ಸಂಶೋಧನೆಯ ಕುರಿತು ಒಂದು ಹೇಳಿಕೆ ನೀಡಿದ್ದರು. “ವಿದ್ಯುತ್ ಬಲ್ಬ್ ಸಂಶೋಧನೆ ಮಾಡಿದ್ದು ಥಾಮಸ್ ಅಲ್ವಾ ಎಡಿಸನ್ ಎಂದು ನಾವೆಲ್ಲ ಓದುತ್ತಾ ಬೆಳೆದಿದ್ದೇವೆ. ಆದರೆ, ನಿಜ ಸಂಗತಿ ಅದಲ್ಲ, ಎಡಿಸನ್ ವಿದ್ಯುತ್ ಬಲ್ಬ್ ಕಂಡುಹಿಡಿದಿಲ್ಲ..!” ಎಂದಿದ್ದರು. ಅಂದು ಜೋ ಬೈಡನ್ ವಿಸ್ಕೋನ್‌ಸಿನ್ ರಾಜ್ಯದ ಕೆನೊಶಾದಲ್ಲಿ ಪೊಲೀಸರಿಂದ ಗುಂಡಿನ ದಾಳಿಗೆ ಒಳಗಾಗಿದ್ದ ಕಪ್ಪು ರ‍್ಣೀಯ ಜಾಕೋಬ್ ಬ್ಲೇಕ್ ಹಾಗು ಆತನ ಕುಟುಂಬಕ್ಕೆ ಸಾತ್ವಾನ ಹೇಳಿದ ನಂತರ ಈ ಹೇಳಿಕೆ ನೀಡಿದ್ದ ಕಾರಣ ಬೈಡನ್ ಆಫ್ರಿಕನ್ ಅಮೆರಿಕನ್ ಮತ ಸೆಳೆಯಲು ವಿವಾದ ಹುಟ್ಟುಹಾಕಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು.
ಭೂಮಿ ಮತ್ತು ಸೂರ್ಯನ ಮಧ್ಯದ ದೂರವನ್ನು ಮೊದಲು ನಿಖರವಾಗಿ ಕಂಡುಹಿಡಿದು ಹೇಳಿದ್ದು ಯಾರು? ಜಗತ್ತಿಗೆ ಮೊಟ್ಟ ಮೊದಲ ಪ್ಲಾಸ್ಟಿಕ್ ಸರ್ಜರಿ ಕಲಿಸಿಕೊಟ್ಟದ್ದು ಯಾರು? ಸೂರ್ಯ ಭೂಮಿಯ ಸುತ್ತ ತಿರುಗುತ್ತಿಲ್ಲ, ಭೂಮಿ ಸೇರಿದಂತೆ ಎಲ್ಲಾ ಗ್ರಹಗಳೂ ಸೂರ್ಯನ ಸುತ್ತ ಸುತ್ತುತ್ತಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಂಡವರು ಯಾರು? ಈ ಎಲ್ಲಾ ಪ್ರಶ್ನೆಗಳಿಗೂ ಪಠ್ಯ ಪುಸ್ತಕಗಳು ಯುರೋಪಿಯನ್ ವಿಜ್ಞಾನಿಗಳ ಹೆಸರು ಹೇಳುತ್ತವೆ. ಆದರೆ, ಇವರಿಗಿಂತ ಸಹಸ್ರಾರು ವರ್ಷಗಳ ಹಿಂದೆ ಭಾರತೀಯರು ಇದನ್ನು ಕಂಡುಹಿಡಿದಿದ್ದರು. ವರಹಾವತಾರ ತನ್ನ ಕೋರೆ ಹಲ್ಲುಗಳಲ್ಲಿ ದುಂಡಗಿನ ಭೂಮಿಯನ್ನು ಎತ್ತಿ ಹಿಡಿದಿರುವ ಬಗ್ಗೆ ಉಲ್ಲೇಖಗಳಿವೆ. ಬೆಳಕಿನ ವೇಗದ ಬಗ್ಗೆ ಹೇಳಿದ್ದು ಡಚ್ಚ್ ವಿಜ್ಞಾನಿ ಕ್ರಿಸ್ಟಿಯಾನ್ ಹುಗೆನ್ಸ್ ಅಂತ ಪಠ್ಯಗಳು ಹೇಳುತ್ತವೆಯಾದ್ರೂ, ಅದಕ್ಕೂ ಮೊದಲು ಇದನ್ನು ಹೇಳಿದವರು ನಮ್ಮ ಕರ್ಣಾಟಕದ ವಿಜಯ ನಗರ ಸಾಮ್ರಾಜ್ಯದ ಪಂಡಿತ ಶಯನ ಅನ್ನೋ ಮೇಧಾವಿ.
ಗುರುತ್ವಾಕರ್ಷಣೆ ಅನ್ನುವ ಶಕ್ತಿ ಭೂಮಿಗಿರುವ ಬಗ್ಗೆ ತಿಳಿಸಿದ್ದು ಮತ್ತು ಅದನ್ನು ಕಂಡುಹಿಡಿದದ್ದು ನ್ಯೂಟನ್ ಎಂದು ನಾವು ಓದಿದ್ದೇವೆ. ಆದರೆ ನ್ಯೂಟನ್ ಹೇಳಿದ್ದು 16ನೇ ಶತಮಾನದಲ್ಲಿ, ಇದಕ್ಕಿಂತ 4 ಶತಮಾನಗಳ ಮೊದಲೇ ಭಾರತೀಯ ಗಣಿತಶಾಸ್ತçಜ್ಞ ಭಾಸ್ಕರಾಚಾರ್ಯರು ಇದನ್ನು ಹೇಳಿದ್ದರು. ಸೂರ್ಯ ಸಿದ್ಧಾಂತ ಮತ್ತು ಸಿದ್ಧಾಂತ ಶಿರೋಮಣಿ ಎಂಬ ಇವರ ಗ್ರಂಥಗಳಲ್ಲಿ ಇದರ ಉಲ್ಲೇಖಗಳಿವೆ ಎಂದು ನಾವು ವಾದಿಸುವಂತೆ ಅಮೆರಿಕಾದಲ್ಲಿ ಮಾತ್ರವಲ್ಲ ಅನೇಕ ಕಡೆ ಥಾಮಸ್ ಆಲ್ವ ಎಡಿಸನ್ ಸಂಶೋಧನೆಗಳ ಕುರಿತು ಬಿನ್ನಾಭಿಪ್ರಾಯಗಳಿವೆ.