Advertisement
ನೀರಿನಲ್ಲಿ ಹೋಗುತ್ತಿದೆ ಜಲ್ಲಿಹುಡಿತೊಕ್ಕೊಟ್ಟು ಜಂಕ್ಷನ್‌ನಲ್ಲಿ ಹೆದ್ದಾರಿ ಕಾಮಗಾರಿ ಮಾಡುವ ಸಂಸ್ಥೆಯ ಸಿಬಂದಿ ಜಲ್ಲಿ ಹುಡಿ ಹಾಕಿ ಹೊಂಡ ಮುಚ್ಚಿದರೆ ಸಂಜೆ ವೇಳೆಗೆ ಒಂದೇ ಮಳೆಗೆ ಜಲ್ಲಿಹುಡಿ ನೀರಿನಲ್ಲಿ ಹರಿದು ಹೊಂಡ ಪುನರ್ ನಿರ್ಮಾಣವಾಗುತ್ತಿದೆ.
ಶುಕ್ರವಾರ ರಸ್ತೆಯ ಗುಂಡಿಯನ್ನು ಸ್ಥಳೀಯರು ಮತ್ತು ಸಂಚಾರಿ ಪೊಲೀಸರು ಕಲ್ಲುಗಳನ್ನು ಹಾಕುವ ಮೂಲಕ ಮುಚ್ಚಿದರು. ಬಳಿಕ ಹೆದ್ದಾರಿ ಕಾಮಗಾರಿ ನಡೆಸುವ ಕಾರ್ಮಿಕರು ಆಗಮಿಸಿ ಕೆಲವು ಗುಂಡಿಗಳಿಗೆ ಕಲ್ಲು ಹಾಕಿದರು. ಸಂಚಾರ ವ್ಯತ್ಯಯ
ನಾಲ್ಕು ದಿನಗಳಿಂದ ಕಲ್ಲಾಪುವಿನಿಂದ ತೊಕ್ಕೊಟ್ಟು ಓವರ್‌ಬ್ರಿಡ್ಜ್ ವರೆಗೆ ವಾಹನಗಳು ಸರತಿಯಲ್ಲಿ ನಿಂತು ಸಂಚರಿಸುತ್ತಿದ್ದು ಒಂದು ಕಿ.ಮೀ. ವ್ಯಾಪ್ತಿ ಸಂಚರಿಸಲು ಅರ್ಧಗಂಟೆ ತಗಲುತ್ತಿದ್ದು, ಕೆಲವು ಬಸ್‌ಗಳು ಅರ್ಧದಲ್ಲೇ ಸಂಚಾರ ಮೊಟಕುಗೊಳಿಸಿದ್ದವು.