Advertisement

ಈ ಯೋಗಿಗೆ ಉಸಿರೇ ಆಹಾರ

09:03 AM Jun 13, 2018 | Harsha Rao |

ಮೆಹ್ಸಾನಾ:ಇವರಿಗೆ ಉಸಿರೇ ನೀರು, ಆಹಾರ! ಅಚ್ಚರಿಯಾದರೂ ಇದು ಸತ್ಯ ಎನ್ನುತ್ತಿದೆ ವರದಿ. ಗುಜರಾತ್‌ನ ಮೆಹ್ಸಾನಾ ಪಟ್ಟಣದ ಚಾರೋಡ್‌ ಹಳ್ಳಿಯ 88 ವರ್ಷದ ಯೋಗಿ ಪ್ರಹ್ಲಾದ್‌ ಜಾನಿ ನೀರು, ಆಹಾರ ಸೇವಿಸದೇ ಬರೋಬ್ಬರಿ 70 ವರ್ಷಗಳೇ ಕಳೆದಿವೆ. ತಮ್ಮ ಮುಪ್ಪಿನಲ್ಲೂ ಹೀಗೇ ಬದುಕು ಸಾಗಿಸುತ್ತಿದ್ದು, ಗಟ್ಟಿ ಮುಟ್ಟಾಗಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

Advertisement

ಇನ್ನೊಂದು ಕುತೂಹಲದ ಅಂಶ ಏನೆಂದರೆ ತಮ್ಮನ್ನು “ಮಾತಾಜಿ’ ಎಂದು ಕರೆಸಿಕೊಳ್ಳಲು ಇಚ್ಛಿಸುವ ಯೋಗಿ ಜಾನಿ, ಕೆಂಪಗಿನ ಉಡುಪು ತೊಟ್ಟು, ಮೂಗುತಿ ತೊಟ್ಟಿರುತ್ತಾರೆ. ತಮ್ಮನ್ನು “ಅಂಬಾ’ ದೇವಿಯ ಇನ್ನೊಂದು ರೂಪ ಎಂದೇ ವಿಶ್ಲೇಷಿಸಿ ಕೊಳ್ಳುತ್ತಾರೆ. ಆಹಾರ ನೀರು ಇಲ್ಲದೇ ಇಂದಿಗೂ ಆರೋಗ್ಯ ಕಾಪಾಡಿಕೊಂಡು ಫಿಟ್‌ ಆಗಿರುವ ಅವರು, ವಿಶ್ವದ ಅದೆಷ್ಟೋ ವಿಜ್ಞಾನಿಗಳ ಕುತೂಹಲಕ್ಕೂ ಕಾರಣರಾಗಿದ್ದಾರೆ.

ಕಲಾಂ ಅಧ್ಯಯನ: ಯೋಗಿ ಜಾನಿ ಜೀವನ ಶೈಲಿ ಬಗ್ಗೆ ಅಚ್ಚರಿಗೊಂಡ ಸಾಕಷ್ಟು ಮಂದಿ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ಅವರ ಆಶ್ರಮವನ್ನೂ ತನಿಖೆಗೊಳಪ ಡಿಸಲಾಗಿತ್ತು. ಅಷ್ಟೇ ಅಲ್ಲ, ವೈದ್ಯಕೀಯ ವರದಿಯನ್ನಾಧರಿಸಿ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್‌ ಕಲಾಂ ಅವರು ಅಧ್ಯಯನವನ್ನೂ ನಡೆಸಿದ್ದಾರೆ. ಡಿಆರ್‌ಡಿಒ ವಿಜ್ಞಾನಿಗಳೂ ಇದರ ಹಿಂದಿನ ಕಾರಣ ಅರಿಯಲು ಯತ್ನಿಸಿದ್ದಾರೆ. ಆದರೆ ವೈದ್ಯರಾಗಲಿ, ವಿಜ್ಞಾನಿಗಳಾಗಲಿ ಇಂದಿಗೂ ಯೋಗಿ ಜಾನಿಯ ಜೀವನ ಶೈಲಿಯ ಬಗ್ಗೆ ನಿಖರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next