ಇತ್ತೀಚೆಗೆ ನಮ್ಮನ್ನಗಲಿದ ಖ್ಯಾತ ವ್ಯಂಗ್ಯಚಿತ್ರಕಾರ ಸುಧೀರ್ ದರ್ ಅವರ ಕೃತಿಗಳ “ದಿಸ್ ವಾಸ್ ಇಟ್’ ಪ್ರದರ್ಶನವು, ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ನಡೆಯುತ್ತಲಿದೆ. ಪ್ರಯಾಗ್‌ರಾಜ್‌ನವರಾದ ಸುಧೀರ್ ಕಾರ್ಟೂನಿಸ್ಟ್ ಅಷ್ಟೇ ಅಲ್ಲದೆ, ಆಕಾಶವಾಣಿ, ಏರ್ ಇಂಡಿಯಾದಲ್ಲೂ ಕೆಲಸ ನಿರ್ವಹಿಸಿದ್ದರು. ಮುಂದೆ, ಅವರ ವ್ಯಂಗ್ಯ ರೇಖೆಗಳು ಹಿಂದೂಸ್ತಾನ ಟೈಮ್ಸ್, ಪಯೋನಿರ್ ಮತ್ತು ಡೆಲ್ಲಿ ಟೈಮ್ಸ್‌ಗಳ ಮೂಲಕ ಮನೆಮಾತಾದವು.
ಸುಧೀರ್ ಅವರ ವ್ಯಂಗ್ಯಚಿತ್ರಗಳ ಮೂಲ ಪ್ರತಿಗಳು ಎಲಿಜಬೆತ್ ರಾಣಿ-2 , ಲಾರ್ಡ್ ರಿಚರ್ಡ್ ಅಟೆನ್‌ಬರೋ, ಹೆನ್ರಿ ಕಿಸಿಂಜರ್, ಯಹೂದಿ ಮೆನುಹಿನ್‌ರಂಥ ಪ್ರತಿಷ್ಠಿತರ ಖಾಸಗಿ ಸಂಗ್ರಹದಲ್ಲಿ ಸೇರ್ಪಡೆಯಾಗಿವೆ. ಸಾಮಾಜಿಕ, ರಾಜಕೀಯದ ಪ್ರಚಲಿತ ವಿದ್ಯಮಾನಗಳನ್ನು ಸೂಚ್ಯವಾಗಿ ತಿಳಿಸುವ ಮೊನಚು ಚಿತ್ರಗಳು ಪ್ರದರ್ಶನದಲ್ಲಿ ಇರಲಿವೆ. ಈ ಪ್ರದರ್ಶನವು ಜನವರಿ 25ರವರೆಗೂ ನಡೆಯಲಿದೆ.
ಎಲ್ಲಿ?: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಮಿಡ್ ಫೋರ್ಡ್ ಗಾರ್ಡನ್, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ
ಯಾವಾಗ?: ಜ. 18-25, ಬೆಳಗ್ಗೆ 10- ಸಂಜೆ 6