Advertisement

ಈ ಬಾರಿ ಐಪಿಎಲ್‌ ಉದ್ಘಾಟನ ಸಮಾರಂಭ ಇಲ್ಲ

12:30 AM Feb 23, 2019 | Team Udayavani |

ಹೊಸದಿಲ್ಲಿ: ಈ ಬಾರಿಯ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಯಾವುದೇ ಉದ್ಘಾಟನ ಸಮಾರಂಭವಿಲ್ಲದೆ ಸರಳ ರೀತಿಯಲ್ಲಿ ಆರಂಭಗೊಳ್ಳಲಿದೆ. ಈ ಸಮಾರಂಭಕ್ಕೆ ತಗಲುವ ವೆಚ್ಚವನ್ನು ಪುಲ್ವಾಮಾ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಬಿಸಿಸಿಐ ಆಡಳಿತ ಸಮಿತಿ (ಸಿಒಎ) ತಿಳಿಸಿದೆ.

Advertisement

“ಈ ಸಲದ ಐಪಿಎಲ್‌ ಪಂದ್ಯಾವಳಿ ಯಾವುದೇ ಉದ್ಘಾಟನಾ ಸಮಾರಂಭವಿಲ್ಲದೆ ಮೊದಲ್ಗೊಳ್ಳಲಿದೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವುದು ಇದೆ ಉದ್ದೇಶ. ಉದ್ಘಾಟನ ಸಮಾರಂಭಕ್ಕೆ ತಗಲುವ ಅಷ್ಟೂ ಮೊತ್ತವನ್ನು ಉಗ್ರರ ದಾಳಿಗೆ ಸಿಲುಕಿ ಮಡಿದವರ ಕುಟುಂಬದವರಿಗೆ ನೀಡಲು ನಿರ್ಧರಿಸಿದ್ದೇವೆ’ ಎಂದು ಸಿಒಎ ಅಧ್ಯಕ್ಷ ವಿನೋದ್‌ ರಾಯ್‌ ಶುಕ್ರವಾರ ನಡೆದ ಸಭೆಯ ಬಳಿಕ ಹೇಳಿದರು.

ಇಷ್ಟು ವರ್ಷ ಬಾಲಿವುಡ್‌ ತಾರೆಗಳನ್ನೊಳಗೊಂಡ ರಂಗುರಂಗಿನ ಕಾರ್ಯಕ್ರಮಗಳ ಮೂಲಕ ಐಪಿಎಲ್‌ಗೆ ಗ್ಲಾಮರಸ್‌ ಆರಂಭ ಲಭಿಸುತ್ತಿತ್ತು. ಸಿಒಎ ಕೈಗೊಂಡ ಈ ನಿರ್ಧಾರವನ್ನು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಸ್ವಾಗತಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ 2018ರ ಐಪಿಎಲ್‌ ಉದ್ಘಾಟನಾ ಸಮಾರಂಭಕ್ಕೆ 15 ಕೋಟಿ ರೂ. ವೆಚ್ಚವಾಗಿತ್ತು. ಇಷ್ಟೇ ದೊಡ್ಡ ಮೊತ್ತ ಯೋಧರ ಕುಟುಂಬಕ್ಕೆ ಲಭಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next