ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಸಸ್ಯಕಾಶಿ ಲಾಲ್ಬಾಗ್‌ನಲ್ಲಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆಬಿದ್ದಿದ್ದು, ವೀಕ್ಷಕರ ಭೇಟಿಯಲ್ಲಿ ದಶಕದ ದಾಖಲೆಯನ್ನು ಮುರಿದಿದೆ.ಈ ಬಾರಿ ವಿಜಯಪುರದ ಗೋಲಗುಂಬಜ್ ಮಾದರಿಯನ್ನು ಹೂವುಗಳಿಂದ ರಚಿಸಲಾಗಿತ್ತು.
ಅಲ್ಲದೆ, ಪ್ರದರ್ಶನಕ್ಕೆ ಆಗಮಿಸುವ ವೀಕ್ಷಕರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿದ್ದರಿಂದ ವೀಕ್ಷಕರು ತೋಟಗಾರಿಕೆ ಇಲಾಖೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಡೆಯ ದಿನವಾದ ಭಾನುವಾರ ಪ್ರದರ್ಶನಕ್ಕೆ ಒಟ್ಟು 37 ಸಾವಿರ ಮಂದಿ ಭೇಟಿ ನೀಡಿದ್ದು 16.86 ಲಕ್ಷ ರೂ. ಟಿಕೆಟ… ಶುಲ್ಕ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ಜಗದೀಶ್ ಹೇಳಿದ್ದಾರೆ.
ಒಟ್ಟು ಹತ್ತು ದಿನಗಳ ಕಾಲ ನಡೆದ ಪ್ರದರ್ಶನವನ್ನು 3.55 ಲಕ್ಷ ಮಂದಿ ವೀಕ್ಷಿಸಿದ್ದು, ಈ ಪೈಕಿ 2.4 ಲಕ್ಷ ವಯಸ್ಕರು, 30 ಸಾವಿರ ಮಕ್ಕಳು, 29 ಸಾವಿರ ಪಾಸುದಾರರು ಹಾಗೂ 55 ಸಾವಿರ ವಿದ್ಯಾರ್ಥಿಗಳು ಇದ್ದರು. ಕಳೆದ ವರ್ಷ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು 2.81 ಲಕ್ಷ ಜನ ಭೇಟಿ ನೀಡಿದ್ದು, 1.31 ಕೋಟಿ ಸಂಗ್ರಹವಾಗಿತ್ತು. ಈ ಬಾರಿ 3.55 ಲಕ್ಷ ಮಂದಿ ಭೇಟಿ ನೀಡಿರುವುದು ಕಳೆದ 10 ವರ್ಷದ ದಾಖಲೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಡಿಮೆ ಕಸ ಉತ್ಪತ್ತಿ: ಈ ಬಾರಿ ಫಲ ಪುಷ್ಪಪ್ರದರ್ಶನದಲ್ಲಿ ಸ್ವತ್ಛತೆಗೆ ತೋಟಗಾರಿಕೆ ಇಲಾಖೆ ಹೆಚ್ಚು ಮಹತ್ವ ನೀಡಿತ್ತು. ಕಳೆದ ವರ್ಷದ ಪ್ರದರ್ಶನದ ವೇಳೆ ಒಂಬತ್ತು ಟ್ರಾಕ್ಟರ್ ಲೋಡಿನಷ್ಟು ಕಸ ಸಂಗ್ರಹವಾಗಿದ್ದರೆ, ಈ ಬಾರಿ ಹತ್ತು ದಿನಗಳಲ್ಲಿ 6 ಟ್ರಾಕ್ಟರ್ ಲೋಡಿನಷ್ಟು ಮಾತ್ರ ಕಸ ಸಂಗ್ರಹವಾಗಿದೆ. ಲಾಲ್ಬಾಗ್ ಸ್ವತ್ಛತೆಗೆ ಹಸಿರುದಳ, ಶಾಲಾ ಕಾಲೇಜುಗಳ 200 ವಿದ್ಯಾರ್ಥಿಗಳು, ಬ್ಯೂಟಿಫುಲ್ಬೆಂಗಳೂರು ಸಂಸ್ಥೆ, ಲಾಲ್ಬಾಗ್ ಸ್ವತ್ಛತಾ ತಂಡ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸಿದ್ದವು ಎಂದು ಜಗದೀಶ್ ಹೇಳಿದ್ದಾರೆ.