Advertisement
ಈ ಬಗ್ಗೆ ಸ್ವತಃ ಬೆಂಗಳೂರು ಬುಲ್ಸ್ ತಂಡದ ಮೂಲಗಳು ಉದಯವಾಣಿಗೆ ಮಾಹಿತಿ ನೀಡಿವೆ. 5ನೇ ಆವೃತ್ತಿ ಪ್ರೊ ಕಬಡ್ಡಿ ವೇಳೆ ಕ್ರೀಡಾಂಗಣ ಸಿಗದಿದ್ದುದರಿಂದ ಬೆಂಗಳೂರು ಬುಲ್ಸ್ ತಂಡದ ಎಲ್ಲ ಪಂದ್ಯಗಳು ನಾಗ್ಪುರಕ್ಕೆ ವರ್ಗಾವಣೆಯಾಗಿದ್ದವು. ಇದರಿಂದ ರಾಜ್ಯದ ಕಬಡ್ಡಿ ಅಭಿಮಾನಿಗಳಿಗೆ ಭಾರೀ ನಿರಾಶೆಯಾಗಿತ್ತು. ಆದರೆ ಈ ಸಲ ಹಾಗೆ ಆಗುವುದಿಲ್ಲ. ರಾಜ್ಯ ಕ್ರೀಡಾ ಇಲಾಖೆ ಕಬಡ್ಡಿ ಅಭಿ ಮಾನಿಗಳ ತುಡಿತವನ್ನು ಅರ್ಥ ಮಾಡಿ ಕೊಂಡುಪಂದ್ಯದ ಆತಿಥ್ಯಕ್ಕೆ ಕ್ರೀಡಾಂಗಣ ಬಿಟ್ಟುಕೊಡಲಿದೆ ಎನ್ನುವ ವಿಶ್ವಾಸವನ್ನು ಬೆಂಗಳೂರು ಬುಲ್ಸ್ ಮೂಲಗಳು ವ್ಯಕ್ತಪಡಿಸಿವೆ.
ಪ್ರಸ್ತುತ ಆವೃತ್ತಿ ಪ್ರೊಕಬಡ್ಡಿ ವೇಳಾಪಟ್ಟಿ ಇನ್ನಷ್ಟೆ ಪ್ರಕಟವಾಗಬೇಕಿದೆ. ಬೆಂಗಳೂರು ಆವೃತ್ತಿಯ ಪಂದ್ಯಗಳ ದಿನಾಂಕ ನೋಡಿಕೊಂಡು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಆತಿಥ್ಯಕ್ಕೆ ಸ್ಥಳಾವಕಾಶ ನೀಡುವಂತೆ ಕೋರಿ ಮನವಿ ಮಾಡುತ್ತೇವೆ. ಕ್ರೀಡಾ ಇಲಾಖೆ ಕಬಡ್ಡಿಗೆ ಪ್ರೋತ್ಸಾಹ ಮಾಡುತ್ತದೆ ಎನ್ನುವ ವಿಶ್ವಾಸ ನಮಗಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಮಗೆ ಪಂದ್ಯವನ್ನು ಆಯೋಜಿಸುವ ಅವಕಾಶ ಸಿಗಲಿಲ್ಲ. ಇದರಿಂದಾಗಿ ನಮ್ಮ ತವರಿನ ಅಭಿಮಾನಿಗಳನ್ನು ಕಳೆದುಕೊಳ್ಳ ಬೇಕಾಯಿತು. ಜತೆಗೆ ತಂಡದ ಒಟ್ಟಾರೆ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮವನ್ನೂ ಬೀರಿತು ಎಂದು ಬುಲ್ಸ್ ಮೂಲಗಳು ತಿಳಿಸಿವೆ. ಕಳೆದ ವರ್ಷ ಬೆಂಗಳೂರಿಗೆ ಆತಿಥ್ಯ ತಪ್ಪಿದ್ದೇಕೆ?:
2017ರಲ್ಲಿ ಬೆಂಗಳೂರು ಬುಲ್ಸ್ 5ನೇ ಬಾರಿಗೆ ತವರಿನಲ್ಲಿ ಪಂದ್ಯಗಳ ಆತಿಥ್ಯಕ್ಕಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮನವಿ ಸಲ್ಲಿಸಿತ್ತು. ಆದರೆ ಕ್ರೀಡಾ ಇಲಾಖೆ ಅದನ್ನು ತಿರಸ್ಕರಿಸಿತ್ತು. ಕ್ರೀಡಾಂಗಣವನ್ನು ಉನ್ನತ ದರ್ಜೆಗೆ ಏರಿಸಲಾಗುತ್ತಿದೆ. ಹೀಗಾಗಿ ಇಲ್ಲಿ ಪ್ರೊ ಕಬಡ್ಡಿ ಆತಿಥ್ಯಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿತ್ತು. ಇದರಿಂದಾಗಿ ಬೆಂಗಳೂರು ಬುಲ್ಸ್ ಪಂದ್ಯಗಳನ್ನು ಎಲ್ಲಿ ನಡೆಸು ವುದು? ಎನ್ನುವ ತಲೆ ನೋವು ಫ್ರಾಂಚೈಸಿಯನ್ನು ಕಾಡಿತ್ತು. ಕಂಠೀರವದಲ್ಲಿ ಪಂದ್ಯಕ್ಕೆ ಅವಕಾಶ ಸಿಗದಿದ್ದಾಗ ಬೆಂಗಳೂರಿನ ಕೋರಮಂಗಲದಲ್ಲಿ ಪಂದ್ಯ ಗಳನ್ನು ನಡೆಸುವ
ಕುರಿತ ಚಿಂತನೆ ನಡೆಯಿತಾದರೂ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೆಂಗಳೂರು ತಂಡದ ಎಲ್ಲ ಪಂದ್ಯಗಳನ್ನು ನಾಗ್ಪುರಕ್ಕೆ ವರ್ಗಾವಣೆ ಮಾಡಲಾಗಿತ್ತು.
Related Articles
● ಬಿ.ಸಿ.ರಮೇಶ್, ಬುಲ್ಸ್ ಕೋಚ್
Advertisement
ಹೇಮಂತ್ ಸಂಪಾಜೆ