Advertisement
ಈ ಕ್ರಮದ ಮೂಲಕ ಪರಿಣಾಮಕಾರಿ ಮತ್ತು ರಚನಾತ್ಮಕ ಚಟುವಟಿಕೆಗಳನ್ನು ಸಂಘಟಿಸುವುದಕ್ಕಾಗಿ ಇಲಾಖೆ ಈ ಬಾರಿ 230 ಪುಟಗಳ ವಿಶೇಷ ವಾರ್ಷಿಕ ಮಾರ್ಗಸೂಚಿ ಪುಸ್ತಕವನ್ನು ಸಿದ್ಧಪಡಿಸಿದೆ. ಜತೆಗೆ ರಾಜ್ಯಾ ದ್ಯಂತ ಏಕರೂಪದ ಬೋಧನಾ-ಕಲಿಕಾ ಚಟುವಟಿಕೆಗಳ ನಿರ್ವಹಣೆಗಾಗಿ ಸೂಕ್ತ ಕ್ರಿಯಾಯೋಜನೆ ರೂಪಿಸಿದ್ದು, ಶೈಕ್ಷಣಿಕ ಮಾರ್ಗಸೂಚಿ ಪುಸ್ತಕವು ಕಲಿಕಾ ಬಲವರ್ಧನೆಗಾಗಿ ಚಟುವಟಿಕೆಯ ಖಜಾನೆಯಂತೆ ರೂಪಿತಗೊಂಡಿದೆ.
ಶಾಲಾ ಚಟುವಟಿಕೆಗಳಲ್ಲಿ ಅಗತ್ಯ-ಅವಕಾಶ- ಸಾಧ್ಯತೆ ಗಳನ್ನು ಅನುಲಕ್ಷಿಸಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದ ಮಕ್ಕಳ ದೇಹ-ಮನೋ-ಬುದ್ಧಿ ವಿಕಾಸಗಳಿಗೆ ಸಂಬಂಧಿಸಿ ಸೂಕ್ತ ಮಾಹಿತಿಗಳನ್ನು ಸಂಪನ್ಮೂಲ ತಂಡ ಮಾರ್ಗಸೂಚಿಯಲ್ಲಿ ಅಳವಡಿಸಿದೆ. 2023-24ನೇ ಶೈಕ್ಷಣಿಕ ವರ್ಷವು ಎಲ್ಲ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಸಹಕಾರಿ ಯಾಗುವುದ ರೊಂದಿಗೆ ಗುಣಾತ್ಮಕ ಶೈಕ್ಷಣಿಕ ವರ್ಷವನ್ನಾಗಿಸುವ ಸಂಕಲ್ಪ ದೊಂದಿಗೆ ಮಾರ್ಗಸೂಚಿ ರಚಿಸಲಾಗಿದೆ. ಶಾಲಾ ಶಿಕ್ಷಣ ವ್ಯವಸ್ಥೆಯ ಸಮರ್ಪಕ ನಿರ್ವಹಣೆಗೆ ಅನುಕೂಲ ಕರ ವಾದ ಅನೇಕ ಅಂಶಗಳನ್ನು ಮಾರ್ಗದರ್ಶಿಯಲ್ಲಿ ಅಳ ವಡಿಸಲಾಗಿದೆ. ಈ ಪ್ರಯತ್ನವು ಶಿಕ್ಷಕರಿಗೆ, ಉಸ್ತು ವಾರಿ ಅಧಿಕಾರಿಗಳಿಗೆ ಹಾಗೂ ಮಕ್ಕಳ ಅಭಿವೃದ್ಧಿಗೆ ಶ್ರಮಿಸುವ ಎಲ್ಲ ಭಾಗೀ ದಾರರಿಗೆ ಉಪಯುಕ್ತವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
-ಡಾ| ವಿಶಾಲ್ ಆರ್., ಶಾಲಾ ಶಿಕ್ಷಣ ಇಲಾಖೆ ಆಯುಕ್ತ
Related Articles
Advertisement