Advertisement

ಈ ಸಮಯ ಕಳೆದು ಹೋಗುತ್ತದೆ…

11:30 PM Feb 09, 2020 | Sriram |

ಒಮ್ಮೆ ಅರ್ಜುನ ಶ್ರೀ ಕೃಷ್ಣನನ್ನು ಕೇಳಿದ.. ಈ ಗೋಡೆಯ ಮೇಲೆ ಒಂದು ಸಂದೇಶ ಬರಿ, ಅದು ಹೇಗಿರಬೇಕೆಂದರೆ ಖುಷಿಯಲ್ಲಿದ್ದಾಗ ಓದಿದರೆ ದುಃಖವಾಗಬೇಕು, ದುಃಖದಲ್ಲಿದ್ದಾಗ ಓದಿದರೆ ಖುಷಿಯಾಗುವಂತಿರಬೇಕು ಎಂದ. ಆಗ ಶ್ರೀ ಕೃಷ್ಣ ಹೇಳುತ್ತಾನೆ ಈ ಸಮಯ ಕಳೆದು ಹೋಗುತ್ತದೆ… ಕೇವಲ ನಾಲ್ಕು ಪದಗಳಲ್ಲಿ ಸುಂದರವಾದ ಉತ್ತರ ನೀಡುತ್ತಾನೆ ಕೃಷ್ಣ.

Advertisement

ದುಃಖದಲ್ಲಿರುವವರು ಈ ಸಮಯ ಬೇಗ ಕಳೆದುಹೋಗಲಿ ಎಂದು ಬಯಸಿದರೆ ಸಂತೋಷದಲ್ಲಿದ್ದವರು ಸಂತೋಷ ಇಷ್ಟು ಬೇಗ ಮುಗಿದು ಹೋಯಿತೇ ಎಂದು ಬೇಸರಪಡುತ್ತಾರೆ. ಆದರೆ ಸಮಯ ಹೇಗಿದ್ದರೂ ಕಳೆದು ಹೋಗುತ್ತದೆ. ಆದರೆ ಕಳೆದು ಹೋಗುತ್ತಿರುವ ಸಮಯವನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಮಾನವನ ಬುದ್ದಿವಂತಿಕೆಗೆ ಬಿಟ್ಟದ್ದು.

ಮನುಷ್ಯನಿಗಿರುವ ಸಮಯ ಸ್ವಲ್ಪವಷ್ಟೇ. ಅದರಲ್ಲಿ ಬರೀ ಕೋಪ, ದ್ವೇಷ, ಗುರಿ ಹಿಂದೆ ಓಡುವುದರ ಜತೆಗೆ ಜೀವನದ ಸಣ್ಣ ಸಣ್ಣ ಖುಷಿಯನ್ನೂ ಅನುಭವಿಸಿಕೊಳ್ಳಿ. ಯಾಕೆಂದರೆ ಮುಂದೊಂದು ದಿನ ಗುರಿ ತಲುಪಿದ ಮೇಲೆ ಕಳೆದುಕೊಂಡ ಅನುಭವ, ಖುಷಿಯನ್ನು ಪಡೆದುಕೊಳ್ಳಲು ಖಂಡಿತ ಸಾಧ್ಯವಿಲ್ಲ. ಯಾವ ವಯಸ್ಸಿನಲ್ಲಿ ಯಾವ ಅನುಭವ ದೊರೆಯಬೇಕು ಅದು ದೊರೆತರೇನೇ ಚಂದ. ಮನುಷ್ಯನಿಗೆ ವಯಸ್ಸೂ ಹಾಗೆ. ಆದ್ದರಿಂದ ಕಳೆದು ಹೋಗುತ್ತಿರುವ ಸಮಯದ ಕುರಿತು ಚಿಂತೆ ಮಾಡುವ ಬದಲು ಕಳೆದುಹೋಗುತ್ತಿರುವ ಸಮಯವನ್ನು ಸದ್ಭಳಕೆ ಮಾಡಿಕೊಂಡರೆ ಸಮಯಕ್ಕೆ ಅರ್ಥ ದೊರೆಯುತ್ತದೆ.

ಅರ್ಥಪೂರ್ಣವಾಗಿ ಬಳಸಿಕೊಳ್ಳಿ
ಮನುಷ್ಯನಿಗೆ ಎಲ್ಲವನ್ನೂ ಖರೀದಿಸುವ ಶಕ್ತಿಯಿದೆ, ಆದರೆ ಸಮಯವನ್ನಲ್ಲ. ಮನುಷ್ಯನಿಗೆ ಸಮಯವನ್ನಂತೂ ನಿಲ್ಲಿಸಲು ಸಾಧ್ಯವಿಲ್ಲ.ಆದರೆ ಸಿಕ್ಕಿದ ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಸಿಗುವ ಎಲ್ಲವನ್ನು ಅನುಭವಿಸುವುದನ್ನು ಕಲಿಯೋಣ. ಎಲ್ಲರನ್ನೂ ಪ್ರೀತಿಸಲು ಕಲಿಯೋಣ.. ಸಮಯ ಕಳೆದು ಹೋದ ಮೇಲೆ ಅಯ್ಯೋ ಕೋಪದಲ್ಲೇ ಜೀವನದ ಪ್ರಮುಖ ಖುಷಿಗಳನ್ನು ಕಳೆದುಕೊಂಡೆನಾ ಎಂದೂ ದುಃಖ ಪಡುವ ಬದಲು, ಆ ದಿನದ ಪ್ರತಿ ಖುಷಿಯನ್ನು ಅನುಭವಿಸಲು ಕಲಿತರೆ ಸಮಯ ಕಳೆದದ್ದಕ್ಕೂ ದುಃಖ ಪಡುವ ಅಗತ್ಯ ಇರುವುದಿಲ್ಲ.

-ರಂಜಿನಿ ಮಿತ್ತಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next