ಚೆನ್ನೈ: ಮೋದಿ ದೇಗುಲ, ಸೋನಿಯಾ ಗಾಂಧಿ ದೇಗುಲ, ಅಮಿತಾಬ್ ದೇಗುಲ ನಿರ್ಮಾಣವಾಗಿರುವುದನ್ನು ಕೇಳಿರುತ್ತೀರಿ. ತಮಿಳುನಾಡಿನ ಶಿವಗಂಗಾಗ ಜಿಲ್ಲೆಯ ಮಾನಾಮಧುರೈನ 82 ವರ್ಷದ ನಿವೃತ್ತ ಸರ್ಕಾರಿ ನೌಕರ ಮುತ್ತು ಮುದ್ದಿನ ನಾಯಿಗಾಗಿ ದೇಗುಲ ನಿರ್ಮಿಸಿದ್ದಾರೆ.
2010ರಲ್ಲಿ ಲ್ಯಾಬ್ರಡಾರ್ ಬ್ರೀಡ್ ನ ಟಾಮ್ ಹೆಸರಿನ ನಾಯಿ ಮರಿ ಸಾಕಲು ಆರಂಭಿಸಿದ್ದರು. ಅದು ಕಳೆದ ವರ್ಷ ಅನಾರೋಗ್ಯದಿಂದಾಗಿ ಸಾವನ್ನಪ್ಪಿದೆ.
ಇದನ್ನೂ ಓದಿ:ಗೋವಾವನ್ನು ಭಾರತದ ಪ್ರವಾಸಿ ರಾಜಧಾನಿಯನ್ನಾಗಿ ಮಾಡಲು ಸರ್ಕಾರದಿಂದ ಹೆಚ್ಚಿನ ಪ್ರಯತ್ನ: ಸಾವಂತ್
ಟಾಮ್ ಅನ್ನು ಮಗನಿಗಿಂತ ಹೆಚ್ಚಾಗಿ ಹಚ್ಚಿಕೊಂಡಿದ್ದ ಮುತ್ತು ಜನವರಿಯಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ.
80 ಸಾವಿರ ರೂ. ಖರ್ಚಿನಲ್ಲಿ ಅಮೃತಶಿಲೆಯ ಮೂರ್ತಿಯನ್ನೂ ಮಾಡಿಸಿ ಸ್ಥಾಪಿಸಿದ್ದಾರೆ.ಅಷ್ಟೇ ಅಲ್ಲದೆ ಆಗಾಗ ಅದಕ್ಕೆ ಪೂಜೆ, ನೈವೇದ್ಯವನ್ನೂ ಮಾಡುತ್ತಾರಂತೆ.