ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸುತ್ತೇವೆ…ನನ್ನ ಪ್ರಕಾರ ಪ್ರತಿಯೊಂದು ಹೆಣ್ಣು ಸಹ ಸಾಧಕಿಯರೇ ಏಕೆಂದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲವನ್ನೂ ಮೆಟ್ಟಿನಿಂತು ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಹೆಣ್ಣು ಮಕ್ಕಳು ಸಾಧನೆಯನ್ನು ಮಾಡುತ್ತಿದ್ದಾರೆ. ಇಂತಹ ಹೆಣ್ಣು ಮಕ್ಕಳಲ್ಲಿ ನನಗೆ ಅತ್ಯಂತ ಇಷ್ಟವಾದ ಸಾಧಕಿ ಅವರೇ ನಮ್ಮ ಸುಧಾಮೂರ್ತಿ…
ಸರಳತೆ…. ಸಜ್ಜನಿಕೆ….. ಆದರ್ಶಮೂರ್ತಿ…. ಸುಧಾಮೂರ್ತಿ;
ಇವರು 1950 ರಲ್ಲಿ ಧಾರವಾಡ ಜಿಲ್ಲೆಯ ಶಿಗ್ಗಾ ವ್ ಗ್ರಾಮದಲ್ಲಿ ಆಗಸ್ಟ್ 19 ರಂದು ಜನಿಸಿದ್ದರು.ಇವರು ಬೆಂಗಳೂರಿನ ಟಾಟಾ ಇನ್ಸ್ಟಟ್ಯೂಟ್ ನಲ್ಲಿ ಎಂ. ಇ (ಕಂಪ್ಯೂಟರ್ ಸೈನ್ಸ್) ಪದವಿ ಗಳಿಸಿ ಚಿನ್ನದ ಪದಕ ಗಳಿಸಿದ ಏಕೈಕ ಮಹಿಳೆ ಆಗಿದ್ದರು. ಟೆಲ್ಕೊ ಕಂಪನಿಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಪ್ರವೇಶ ಇರಲಿಲ್ಲ ಇದನ್ನು ಸುಧಾಮೂರ್ತಿ ಅವರು ಟಾಟಾ ಅವರಿಗೆ ಪತ್ರವನ್ನು ಬರೆದು ಪ್ರಶ್ನಿಸಿದ್ದರು.
ಆಗ ಟಾಟಾ ಅವರು ಇವರ ದಿಟ್ಟತನವನ್ನು ಕಂಡು ಟೆಲ್ಕೊ ಕಂಪನಿಯಲ್ಲಿ ಪ್ರವೇಶ ಕಲ್ಪಿಸಿದ್ದರು. ಈ ಮೂಲಕ ಟೆಲ್ಕೊ ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜಿನಿಯರ್ ಎನ್ನುವ ಹೆಗ್ಗಳಿಕೆ ಇವರದ್ದಾಗಿದೆ. ಇದಾದ ನಂತರ 1996 ರಲ್ಲಿ ತಮ್ಮ ಪತಿ ನಾರಾಯಣ ಮೂರ್ತಿ ಅವರ ಜೊತೆಗೂಡಿ ಇನ್ಫೊಸಿಸ್ ಫೌಂಡೇಶನ್ ಪ್ರಾರಂಭಿಸಿದರು. ಇಷ್ಟೇ ಅಲ್ಲದೆ ಇವರು ಸಾಹಿತ್ಯ, ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ಜನರ ಬದುಕಿನಲ್ಲಿ ದಾರಿದೀಪ ಆಗಿದ್ದಾರೆ.. ಇಷ್ಟೆಲ್ಲಾ ಸಾಧನೆ ತೋರಿದರು ಸಹ ಸರಳತೆ, ದಿಟ್ಟತನ ವನ್ನ ಎಂದಿಗೂ ಬಿಟ್ಟುಕೊಟ್ಟಿಲ್ಲ.
ಆದ್ದರಿಂದ ನಮ್ಮ ಎಲ್ಲ ಹೆಣ್ಣು ಮಕ್ಕಳು ಇವರನ್ನು ಆದರ್ಶವಾಗಿ ತೆಗೆದುಕೊಂಡು ಸಿಕ್ಕ ಅವಕಾಶಗಳಿಂದ ವಂಚಿತ ರಾಗದೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧಿಸುವ ಛಲ ಬೆಳೆಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಲಿ ಎಂಬುದೇ ಆಶಯ.
ಜನನಿದಾತೆ ಹೆಣ್ಣು…
ಮಮತೆಯ ಮಾತೆ ಹೆಣ್ಣು…
ಸಾಧಿಸುವ ಛಲಗಾತಿ ಹೆಣ್ಣು…
ಸಮಾಜದ ಕಣ್ಣು ನಮ್ಮ ಹೆಣ್ಣು…..
ಇಂತಹ ಹೆಣ್ಣಿಗೆ ಜನ್ಮ ನೀಡಿದಾಗ ಎಲ್ಲ ತಂದೆ ತಾಯಿ ಖುಷಿ ಪಡಿ… ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ… ಹೆಣ್ಣೆಂದರೆ ಭಾರ ಎನ್ನುವ ಭ್ರಮೆಯನ್ನು ಬಿಟ್ಟು ಎಲ್ಲಾ ಹೆಣ್ಣಿಗೂ ಸಮಾನ ಅವಕಾಶವನ್ನು ನೀಡಿ ಜನವರಿ 24 ಕ್ಕೇ ಮಾತ್ರ ದಿನ ಸೀಮಿತ ವಾಗದೇ ಪ್ರತಿದಿನ ಹೆಣ್ಣು ಮಕ್ಕಳನ್ನು ಗೌರವಿಸಿ…ಎಲ್ಲರಿಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು…
ರಮ್ಯ ಎಚ್. ಎಂ
ಊರು: ಹಿಂಡಿಗನಾಳ ಗ್ರಾಮ
ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ