Advertisement
1ರಿಂದ 7ನೇ ತರಗತಿ 185 ಮಕ್ಕಳು ದಾಖಲಾತಿ ಹೊಂದಿದ್ದು, ಮುಖ್ಯಶಿಕ್ಷಕಿ ಅನಾರೋಗ್ಯ ನಿಮಿತ್ತ ನ.13ರವರೆಗೆ ರಜೆ ತೆರಳಿದ್ದಾರೆ. ಕಾಯಂ ಶಿಕ್ಷಕರ ಕೊರತೆಯಿಂದ ಧರ್ಮನಾಯ್ಕ ತಾಂಡಾ ಶಾಲೆಯಿಂದ ಕೋತಿಗುಡ್ಡ ಶಾಲೆಗೆ ಮಂಜುಳಾ ಎಂಬ ಶಿಕ್ಷಕಿಯನ್ನು ಎರವಲು ಸೇವೆ ನೀಡಲಾಗಿದೆ. ಒಬ್ಬ ಶಿಕ್ಷಕಿ 1ರಿಂದ 7ನೇ ತರಗತಿ 185 ಮಕ್ಕಳಿಗೆ ಪಾಠ ಪ್ರವಚನ ಮಾಡಬೇಕಿದೆ.
Related Articles
Advertisement
ರಾಜ್ಯ ಸರಕಾರ ಅತಿಥಿ ಶಿಕ್ಷಕರ ನೇಮಕಾತಿ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ. ಕುಡಿವ ನೀರು, ಶೌಚಾಲಯ ಸೇರಿದಂತೆ ಕೊಠಡಿಗಳ ಸಮಸ್ಯೆಯೂ ಎದುರಾಗಿದೆ. ಕೆಲ ಕೋಣೆಗಳು ಶಿಥಿಲಗೊಂಡಿದ್ದು, ಅಂತಹ ಕೋಣೆಯಲ್ಲಿ ಶಿಕ್ಷಕರು ಪಾಠ ಮಾಡಬೇಕಿದೆ. ಅಗತ್ಯ ಮೂಲಸೌಕರ್ಯ ಜತೆ ಶಿಕ್ಷಕರ ಕೊರತೆ ಉಂಟಾಗಿದೆ. ಮಕ್ಕಳಿಗೆ ಬೋಧಿಸಲು ತೊಂದರೆ ಆಗದಂತೆ ಶಿಕ್ಷಕರನ್ನು ಶಾಲೆಗೆ ನಿಯೋಜಿಸಬೇಕೆಂದು ಪಾಲಕರಾದ ದುರುಗಪ್ಪ, ಬಸಲಿಂಗಪ್ಪ ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದ್ದು, ಅಗತ್ಯ ಬೇಕಿರುವಂತ ಶಾಲೆಗಳಿಗೆ ಎರವಲು ನೀಡಲಾಗಿದೆ. ಅತಿಥಿ ಶಿಕ್ಷಕರ ನೇಮಕಾತಿ ಆದೇಶ ಬಂದ ನಂತರ ನಿಯೋಜಿಸಲಾಗುತ್ತದೆ. -ಆರ್.ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ
ಕೋವಿಡ್ ಹಿನ್ನೆಲೆ ಒಂದೂವರೆ ವರ್ಷಗಳ ನಂತರ ಶಾಲೆಗಳು ಆರಂಭವಾಗಿದ್ದು, ಬಹುತೇಕ ಸರ್ಕಾರಿ ಶಾಲೆ ಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಕೂಡಲೇ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಬೇಕು. -ಮಹಾಲಿಂಗ ದೊಡ್ಡಮನೆ, ಎಸ್‌ಎಫ್‌ಐ ಕಾರ್ಯದರ್ಶಿ
-ನಾಗರಾಜ ತೇಲ್ಕೂರ