Advertisement

ಹೆಣ್ಮಕ್ಕಳಿಗೆ ಪ್ರಿಯ ಈ ಸ್ಕಾರ್ಫ್

12:13 AM Feb 21, 2020 | Sriram |

ಆಯ್ಕೆ ಹೀಗಿರಲಿ
ಹೆಚ್ಚಾಗಿ ಸ್ಕಾರ್ಫ್ ಗಳು ಗಾಢ ಬಣ್ಣವಾಗಿದ್ದರೆ ಒಳಿತು. ಬಿಳಿ, ಕಪ್ಪು,ಕಂದು,ಗ್ರೇ ಮೊದಲಾದ ಬಣ್ಣಗಳಲ್ಲಿ ಸ್ಕಾರ್ಫ್ಇರಬಹುದು. ಇವುಗಳನ್ನು ಲೆಂಥೀ ಕೋಟ್‌ಗಳ ಜತೆಗೆ ಧರಿಸಬಹುದು. ಯಾವುದೇ ಉಡುಗೆಧರಿಸಿದ ಮೇಲೆ ಅನ್‌ಕಂಫ‌ರ್ಟ್‌ ಅನ್ನಿಸಿದರೆ ಕುತ್ತಿಗೆಯ ಸುತ್ತ ಸಿಲ್ಕ್ ಸ್ಕಾರ್ಫ್ ಧರಿಸಬಹುದು. ಸಿಲ್ಕ್ ಎಲ್ಲ ಕಾಲಘಟ್ಟಕ್ಕೂ ಹೊಂದಬಲ್ಲದು.

Advertisement

ದೇಶಿ ಜತೆಗೆ ವಿದೇಶಿ
ಪಾಶ್ಚಾತ್ಯ ಮತ್ತು ಸಾಂಪ್ರದಾಯಿಕ ಉಡುಗೆ ಎರಡನ್ನೂ ಜತೆಗೆ ಕೊಂಡೊಯ್ಯಲು ಇಚ್ಛಿಸುವವರಿಗೆ ಸ್ಕಾರ್ಫ್ ತುಂಬಾ ಉಪಯುಕ್ತ. ಜೀನ್ಸ್‌ ಮತ್ತು ಕುರ್ತಾ ಧರಿಸಿ ಅದರ ಜತೆಗೆ ಒಂದು ಸ್ಕಾರ್ಫ್ ಇದ್ದರೆ ಜೀನ್ಸ್‌ನಲ್ಲೂ ಸಾಂಪ್ರದಾಯಿಕ ಮೆರುಗು ನೀಡುತ್ತದೆ. ಪ್ರಿಂಟೆಡ್‌ ಅಥವಾ ಡಿಸೈನರ್‌ ಸ್ಕಾರ್ಫ್ ನ್ನು ಧರಿಸಬಹುದು.

ಪ್ರವಾಸಕ್ಕೆ ಸೂಕ್ತ
ಚಳಿಗಾಲದಲ್ಲಿ ಅಥವಾ ಯಾವುದೇ ಕಾಲದಲ್ಲಿ ಪ್ರವಾಸ ತೆರಳುವ ಸಂದರ್ಭದಲ್ಲಿ ಸ್ಕಾರ್ಫ್  ಹೆಣ್ಮಕ್ಕಳ ಪ್ರಿಯ ಸಂಗಾತಿ. ಇವುಗಳಿಂದ ಚರ್ಮಕ್ಕೆ ರಕ್ಷಣೆಯ ಜತೆಗೆ ಖುಷಿ ನೀಡುತ್ತದೆ. ಸ್ಕಿನ್‌ಫಿಟ್‌ ಜೀನ್ಸ್‌ ಹಾಗೂ ಲೆಂಥೀ ಕೋಟ್‌ ಮತ್ತು ಕಾಟನ್‌ ಸ್ಕಾಫ್ìನದ್ದು ಅಂದವಾದ ಜತೆಗಾತಿ.

ಉದ್ದವಾದ ಜರಿಜರಿಯ ದುಪ್ಪಟ್ಟವನ್ನು ಹೆಣ್ಮಕ್ಕಳು ಧರಿಸುತ್ತಿದ್ದ ಕಾಲವೊಂದಿತ್ತು. ಅದು ಭಾರತೀಯ ಸಂಸ್ಕೃತಿ. ಸೀರೆಯ ಜತೆ ಕಾಶ್ಮೀರಿ ಶಾಲ್‌ಗ‌ಳನ್ನು ತೊಟ್ಟು ಮಿಂಚಿದರು. ಬರಬರುತ್ತಾ ಸಂಪ್ರದಾಯಕ್ಕೆ ಫ್ಯಾಷನ್‌ ಸೆಡ್ಡು ಹೊಡೆದು ನಿಂತಾಗ ದುಪ್ಪಟ್ಟಗಳ‌ ಜಾಗವನ್ನು ಸ್ಕಾರ್ಫ್ ಗಳು ಆಕ್ರಮಿಸಿದವು. ಯಾವುದೇ ಕುರ್ತಾ ಟಾಪ್‌, ಜೀನ್ಸ್‌ ಟಾಪ್‌ ಅಥವಾ ವೆಸ್ಟರ್ನ್ ಉಡುಗೆಗಳ ಜತೆಗೆ ಇದನ್ನು ಧರಿಸಬಹುದಾದದ್ದೇ ಇದರ ವಿಶೇಷ. ಪ್ರವಾಸದ ಸಂದರ್ಭಗಳಲ್ಲಿ ಇವುಗಳು ಹೆಚ್ಚಾಗಿ ಬಳಕೆಗೆ ಬರುತ್ತವೆ.
ಸ್ಕಾರ್ಫ್ ಗಳನ್ನು ಯಾವ ರೀತಿ ಬಳಸಬಹುದು ಎಂಬುದು ಇಂದಿನ ವಿಶೇಷ. ಕೆಲವರು ಮಳೆಗಾಲ ಮತ್ತು ಚಳಿಗಾಲದಲ್ಲಿ ಮಾತ್ರ ಸ್ಕಾರ್ಫ್ ಗಳನ್ನು ಧರಿಸುವುದಾದರೆ ಇನ್ನು ಕೆಲವರು ಎಲ್ಲ ಕಾಲಗಳಲ್ಲೂ ಅವುಗಳನ್ನು ಧರಿಸುತ್ತಾರೆ. ಇವರಿಗೆ ಟ್ರೆಂಡ್‌ ಅಷ್ಟೇ ಮುಖ್ಯ.

-  ಸುಶ್ಮಿತಾ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next