Advertisement
ಸುಮಾರು 4 ಕಿ.ಮೀ. ಉದ್ದದ ರಸ್ತೆಗೆ ಹಾಕಲಾದ ಡಾಂಬರು ಕಿತ್ತು ಹೋಗಿ ಅಲ್ಲಲ್ಲಿ ಬೃಹತ್ ಹೊಂಡ- ಗುಂಡಿಗಳು ಸೃಷ್ಟಿಯಾಗಿವೆ. ಮಳೆಗಾದಲ್ಲಿ ನೀರು ನಿಂತು ವಾಹನ ಸವಾರರು, ಪಾದಚಾರಿಗಳೂ ಸಂಚರಿಸುವುದು ಕಷ್ಟಕರವಾಗಿದೆ. 20 ವರ್ಷದಿಂದ ಡಾಮರೇ ಹಾಕಿಲ್ಲ
ನಾಡಾಗುಡ್ಡೆಯಂಗಡಿ ಪೇಟೆಯ ಪ್ರಾರಂಭದಲ್ಲಿ ಸ್ವಲ್ಪ ದೂರದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ಅದು ಬಿಟ್ಟರೆ ಈ ಬಡಾಕೆರೆ- ನಾಡಾ ರಸ್ತೆಗೆ ಕಳೆದ 20 ವರ್ಷದಿಂದ ಡಾಂಬರೇ ಹಾಕಿಲ್ಲ. ಆಳುವ ವರ್ಗದಿಂದ ಈ ರಸ್ತೆ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿದೆ ಎನ್ನುವುದು ಸ್ಥಳೀಯರ ಆರೋಪ.
ನಾಡಾದಿಂದ ಬಡಾಕೆರೆ ಮಾರ್ಗವಾಗಿ ಹೆದ್ದಾರಿಗೆ ಕಲ್ಲು, ಜಲ್ಲಿ, ಮರಳು ತುಂಬಿದ ಘನ ಲಾರಿಗಳು, ಟಿಪ್ಪರ್‌ಗಳು ಹೆಚ್ಚಾಗಿ ಸಂಚರಿಸುತ್ತಿದ್ದು, ಇದರಿಂದ ಈ ರಸ್ತೆ ಮತ್ತಷ್ಟು ಹದಗೆಟ್ಟು ಹೋಗಿದೆ. ಅದರಲ್ಲೂ ರಾತ್ರಿ ವೇಳೆಯೇ ಹೆಚ್ಚಾಗಿ ಈ ರಸ್ತೆಯ ಮೂಲಕ ಘನ ವಾಹನಗಳು ಸಂಚರಿಸುತ್ತಿದ್ದು, ಇದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕಿದೆ ಎನ್ನುವುದಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
ಈ ಹೊಂಡ- ಗುಂಡಿಗಳ ರಸ್ತೆ ಯಿಂದಾಗಿ ದಿನಾಲೂ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ಬಾರಿ ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಈ ರಸ್ತೆಯನ್ನು ದುರಸ್ತಿಪಡಿಸಲು ಪ್ರಯತ್ನಿಸಲಿ.
– ಸುಚಿತಾ ಎಂ. ಕಾಮತ್,
ನಾಡಾ ನಿವಾಸಿ
Advertisement
ಅನುದಾನ ಬೇಕಿದೆಕಳೆದ ವರ್ಷ ಜಿ.ಪಂ.ನಿಂದ ಬಿಡುಗಡೆಯಾದ 3.50 ಲಕ್ಷ ರೂ. ಅನುದಾನದಲ್ಲಿ ಈ ರಸ್ತೆ ಸುಮಾರು 2 ಲಕ್ಷ ರೂ. ಬಳಕೆ ಮಾಡಲಾಗಿದೆ. ಇದು ದೊಡ್ಡ ರಸ್ತೆಯಾಗಿರುವುದರಿಂದ ಜಿ.ಪಂ. ಅನುದಾನದಲ್ಲಿ ಡಾಂಬರೀಕರಣ ಮಾಡಲು ಆಗಲ್ಲ. ಕೇವಲ ಪ್ಯಾಚ್‌ವರ್ಕ್ ಅಷ್ಟೇ ಮಾಡಬಹುದು. ಇದಕ್ಕೆ ರಾಜ್ಯ ಸರಕಾರದ ಅನುದಾನದ ಅಗತ್ಯವಿದೆ.
– ಬಾಬು ಶೆಟ್ಟಿ ತಗ್ಗರ್ಸೆ,
ಸ್ಥಳೀಯ ಜಿ.ಪಂ. ಸದಸ್ಯರು – ಪ್ರಶಾಂತ್ ಪಾದೆ