Advertisement

ಸೌರವ್ಯವಸ್ಥೆಯಾಚೆಗಿನ ನಿಗೂಢ ಜಗತ್ತಿನತ್ತ ಪಯಣ?

07:35 PM Jan 04, 2022 | Team Udayavani |

ನ್ಯೂಯಾರ್ಕ್‌: ಲಕ್ಷಕೋಟಿಗೂ ಹೆಚ್ಚು ನಕ್ಷತ್ರಗಳು, ಕೋಟ್ಯಂತರ ಗ್ರಹಗಳು, ಅಸಂಖ್ಯಾತ ಸಾಧ್ಯತೆಗಳು ತುಂಬಿರುವ ಬ್ರಹ್ಮಾಂಡದಲ್ಲಿ ಮಾನವ ವಾಸಯೋಗ್ಯವಾದ ಮತ್ತೊಂದು ಜಗತ್ತಿದೆಯೇ, ಇನ್ನೊಂದು ನಾಗರಿಕತೆಯಿದೆಯೇ ಎಂಬ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಈಗ ಇಂಥ ನಿಗೂಢ ಲೋಕದ ರಹಸ್ಯವನ್ನು ಭೇದಿಸಲು ಖಗೋಳವಿಜ್ಞಾನಿಗಳು ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿದ್ದಾರೆ.

Advertisement

ಇದು ಸೌರ ವ್ಯವಸ್ಥೆಯ ಹೊರಗಿನ ಜಗತ್ತಿನತ್ತ ಸಂಚರಿಸಿ, ತಾರಾಂತರೀಯ ಪ್ರದೇಶಕ್ಕೆ ಪ್ರವೇಶಿಸುವ ಯೋಜನೆಯಾಗಿದೆ.

ಸೂರ್ಯನ ಪ್ರಭಾವಲಯವನ್ನು ದಾಟಿ ನಕ್ಷತ್ರಗಳತ್ತ ಪ್ರಯಾಣಿಸುವ ಈ ಯೋಜನೆ ಕುರಿತು ಜಾನ್ಸ್‌ ಹಾಪ್‌ಕಿನ್ಸ್‌ ವಿವಿಯ ಅನ್ವಯಿಕ ಭೌತಶಾಸ್ತ್ರ ಪ್ರಯೋಗಾಲಯದ ಖಗೋಳವಿಜ್ಞಾನಿಗಳು ವರದಿಯೊಂದನ್ನು ಪ್ರಕಟಿಸಿದ್ದಾರೆ. ಬಹಳಷ್ಟು ದೂರ ಮತ್ತು ಬಹಳಷ್ಟು ಕ್ಷಿಪ್ರವಾಗಿ ಸಂಚರಿಸಿ, ನಾವು ಮತ್ತು ನಮ್ಮ ನೆರೆಯ ನಕ್ಷತ್ರಗಳ ನಡುವಿನ ಅಂತರ, ಅಲ್ಲಿರುವ ನಿಗೂಢ ಪ್ರದೇಶಗಳ ಕುರಿತು ಅಧ್ಯಯನ ನಡೆಸುವುದೇ ಈ ಯೋಜನೆಯ ಉದ್ದೇಶ.

ಇದನ್ನೂ ಓದಿ:ಖಾಲಿ ಜಾಗದಲ್ಲಿ ಬಂಗಾರದಂಥ ಬೆಳೆ : ಕೃಷಿಯಲ್ಲಿ ಯಶಸ್ಸು ಕಂಡ ಮಲೆನಾಡಿನ ರೈತನ ಕಥೆ

ಯಾವ ಪ್ರದೇಶದ ಅಧ್ಯಯನ?
ಸೂರ್ಯನಿಂದ ಹೊರಕ್ಕೆ ತಳ್ಳಲ್ಪಟ್ಟ(ಸೌರ ಮಾರುತ) ವಿದ್ಯುದಾವೇಶಪೂರಿತ ಕಣಗಳಿಗೆ ಸೂರ್ಯ ಮತ್ತು ಪ್ಲುಟೊದ ಅಂತರವೆಷ್ಟಿದೆಯೋ ಅದರ ಮೂರು ಪಟ್ಟು ದೂರಕ್ಕೆ ತಲುಪುವ ಸಾಮರ್ಥ್ಯವಿರುತ್ತವೆ. ಇದರಾಚೆಗೆ, ಈ ಕಣಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಅಲ್ಲಿಂದ ಆರಂಭವಾಗುವುದೇ ಅಂತರತಾರಾ ಮಾಧ್ಯಮ.  ಈ ಸೂರ್ಯಗೋಳವು ನಮ್ಮ ಸೌರ ವ್ಯವಸ್ಥೆಯ ಸುತ್ತಲಿನ ಹೊದಿಕೆಯಂತಿರುತ್ತದೆ. ಈಗ ಖಗೋಳವಿಜ್ಞಾನಿಗಳು ಅಧ್ಯಯನ ನಡೆಸಲು ಉದ್ದೇಶಿಸಿರುವುದು ಇದೇ ಪ್ರದೇಶವನ್ನು.

Advertisement

2036-2042ರ ಅವಧಿಯಲ್ಲಿ ಈ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ. ಪ್ರಸ್ತಾವಿತ ಬಾಹ್ಯಾಕಾಶ ನೌಕೆಯ ಜೀವಿತಾವಧಿ 50 ವರ್ಷಗಳಾಗಿರಲಿವೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next