Advertisement
ಗ್ಲಾಸ್ ಕುರಿತು ಮಾಹಿತಿ ನೀಡಿದ ಆರ್‌ಡಿಎಲ್ ಟೆಕ್ನಾಲಜಿಯ ಮುಖ್ಯಸ್ಥ ರಾಘವ ಶೆಟ್ಟಿ, ಇದು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಸರಳ ಕನ್ನಡಕ. ಎರಡು ಗಾಜು, ಅವುಗಳನ್ನು ಜೋಡಿಸಿದ ಚೌಕಟ್ಟಿನ ಒಳಗಿರಿಸಿದ ಪುಟ್ಟ ಸಂವೇದಕವನ್ನು ಇದು ಹೊಂದಿದೆ. ಈ ಸಂವೇದಕವನ್ನು ವಿಐ ಎಲ್‌ಆರ್ (ವಿಸಿಬಲ್ ಲೈಟ್ ಇನ್‌ಫ್ರಾರೆಡ್ ರಿಸೀವರ್) ಎನ್ನಲಾಗುತ್ತದೆ. ಇದು ಎಲ್‌ಐಎಫ್‌ಐ ತಂತ್ರಜ್ಞಾನದ ಮೂಲಕ ಬೆಳಕಿನ ಅವಗೆಂಪು ಕಿರಣ ಗಳನ್ನು ಗ್ರಹಿಸಿ, ಕನ್ನಡಕದ ಎಡ -ಬಲದ ಚೌಕಟ್ಟುಗಳಲ್ಲಿ ಅಳವಡಿಸಿದ ಕಂಪನಕಾರಕಗಳ ಮೂಲಕ ಧರಿಸಿದ ವ್ಯಕ್ತಿಗೆ ಎಚ್ಚರಿಕೆ ನೀಡುತ್ತದೆ. ಅಲ್ಲದೆ ಚೌಕಟ್ಟಿನ ಕೊನೆಯಲ್ಲಿ ಅಳವಡಿಸಿರುವ ಇಯರ್ ಫೋನ್ ಮೂಲಕ ಸಂದೇಶಗಳನ್ನು ನೀಡುತ್ತದೆ.
Related Articles
ಈ ಗ್ಲಾಸ್ ಆರ್‌ಡಿಎಲ್‌ನ ವಿಎಲ್‌ಸಿ ಪ್ರಯೋಗಶಾಲೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ತಯಾರಾಗಿದೆ. ರಾಘವ ಶೆಟ್ಟಿ ಅವರೊಂದಿಗೆ ಕನ್ವಲ್ ಕರ್ಕೇರ, ಡಾ| ಅಶ್ವತ್ ರಾವ್, ಡಾ| ಅನೂಶ್ ಬೇಕಲ್, ವಿಶ್ವನಾಥ್ ಆಚಾರ್ಯ, ಗಣೇಶ್ ಐತಾಳ್, ಪ್ರದೀಪ್ ಅವರ ತಂಡ ಈ ಕನ್ನಡಕ ಆವಿಷ್ಕರಿ ಸಿದ್ದಾರೆ. ಆರ್‌ಡಿಎಲ್ ತಂಡದ ಡಾ| ಅಶ್ವತ್ ರಾವ್, ಡಾ| ಅನೂಶ್ ಬೇಕಲ್, ಪ್ರೊ| ಮಂಜಪ್ಪ, ಪ್ರೊ| ರವಿಚಂದ್ರ ಉಪಸ್ಥಿತರಿದ್ದರು.
Advertisement