Advertisement
ಈ ಆಸಾಮಿ 150 ಕೆ.ಜಿ ತೂಕವನ್ನು ಒಂದೇ ಕೈಯಲ್ಲಿ ಎತ್ತುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಉಕ್ರೇನ್ ದೇಶದ ಈತನ ಹೆಸರು ಡಿಮಿಟ್ರೋ ಖಲಾಝಿ.
Advertisement
ಈತ ತನ್ನ ಹೆಗಲ ಮೇಲೆ ಕುದುರೆ, ಎಮ್ಮೆ, ಹಸುಗಳನ್ನು ಸಲೀಸಾಗಿ ಹೊತ್ತುಕೊಂಡು ಹೋಗುತ್ತಾನೆ. ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಸಾಹಸದ ವಿಡಿಯೋಗಳನ್ನು ಹಾಕುತ್ತ ಅಭಿಮಾನಿಗಳನ್ನು ರಂಜಿಸುತ್ತಾನೆ.
ಇದನ್ನೂ ಓದಿ :ಟೂಲ್‌ಕಿಟ್ ಪ್ರಕರಣ : ಮಾ.15ರವರೆಗೆ ನಿಕಿತಾ, ಶಂತನು ಬಂಧನವಿಲ್ಲ
ಡಿಮಿಟ್ರೋ ಖಲಾಝಿ ಮೊದಲು ಸರ್ಕಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಈ ವ್ಯಕ್ತಿಗೆ ಸಾಹಿತ್ಯದ ಮೇಲೂ ಆಸಕ್ತಿ ಇದೆಯಂತೆ. ಕ್ರೀಡಾ ಪಟುಗಳ ಬಗ್ಗೆ ಕೆಲವು ಪುಸ್ತಕಗಳನ್ನೂ ಬರೆದಿದ್ದಾರಂತೆ. ಇವರ ಸಾಧನೆಗೆ ಹಲವು ಪ್ರಶಸ್ತಿಗಳು ಸಂದಿದ್ದು, 2010ರಲ್ಲಿ ಗೋಲ್ಡನ್ ಪೆನ್ ಆಫ್ ರಷ್ಯಾ ಪ್ರಶಸ್ತಿ ಸಿಕ್ಕಿದೆ.