Advertisement

ಹಾವು, ಹಲ್ಲಿ, ಓತಿಕ್ಯಾತಗಳಿಗೇ ಇದೆ ಒಂದು ಕೆಫೆ!

07:53 PM Feb 27, 2023 | Team Udayavani |

ಕೌಲಾಲಂಪುರ:ನೀವು ಸುಂದರ ನಾಯಿಗಳು, ಬೆಕ್ಕುಗಳು ಇವನ್ನೆಲ್ಲ ಮನೆಯಲ್ಲೇ ಸಾಕುವುದು, ಅದಕ್ಕೊಂದು ವಿಶೇಷ ಜಾಗ ಮಾಡುವುದನ್ನು ನೋಡಿರುತ್ತೀರಿ. ಆದರೆ ಹಾವುಗಳು, ಹಲ್ಲಿಗಳು, ಓತಿಕ್ಯಾತಗಳು ಇವುಗಳನ್ನೇ ಪ್ರೀತಿಯಿಂದ ಸಾಕುತ್ತಾ, ಅಲ್ಲೊಂದು ಕೆಫೆಯನ್ನೇ ಮಾಡಿಕೊಂಡಿರುವ ವ್ಯಕ್ತಿಗಳನ್ನು ನೋಡಿದ್ದೀರಾ?

Advertisement

ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಹೊರವಲಯದಲ್ಲಿ ಯಪ್‌ ಮಿಂಗ್‌ ಯಾಂಗ್‌ ಎಂಬ ವ್ಯಕ್ತಿ ಒಂದು ಕೆಫೆ ಮಾಡಿದ್ದಾರೆ. ಅಲ್ಲಿ ವಿಧವಿಧದ ಹಾವುಗಳು, ಓತಿಕ್ಯಾತಗಳು, ಹಲ್ಲಿಗಳನ್ನೇ ಗಾಜಿನ ಟ್ಯಾಂಕುಗಳಲ್ಲಿಟ್ಟು ಸಾಕಲಾಗುತ್ತದೆ. ಅತಿಥಿಗಳು ಈ ಸರೀಸೃಪಗಳನ್ನು ಕೈಯಲ್ಲಿ ಹಿಡಿದುಕೊಂಡೇ ತಮಗೆ ಬೇಕಾದ ಪಾನೀಯಗಳನ್ನು ಕುಡಿಯಬಹುದು. ಅವಕ್ಕೂ ಆಹಾರ ಹಾಕಬಹುದು!

ಪರಿಸರ ವಿಜ್ಞಾನದಲ್ಲಿ ಪದವಿ ಪಡೆದಿರುವ ಯಪ್‌, ಮಲೇಷ್ಯಾ ಸರೀಸೃಪ ಅಧ್ಯಯನ ಸೊಸೈಟಿಯ ಸದಸ್ಯರೂ ಹೌದು. ಮನುಷ್ಯರು ಕೇವಲ ನಾಯಿ, ಬೆಕ್ಕು, ಕುರಿಗಳಂತಹ ಪ್ರಾಣಿಗಳ ಮೇಲೆ ಪ್ರೀತಿ ತೋರುತ್ತಾರೆ. ಇಂತಹ ಸರೀಸೃಪಗಳನ್ನೂ ಸಾಕಬಹುದು, ಅವುಗಳ ಜೊತೆಗೂ ಆತ್ಮೀಯ ಬಾಂಧವ್ಯ ಬೆಳೆಸಿಕೊಳ್ಳಬಹುದು ಎಂದು ತೋರಿಸುವುದೇ ಯಪ್‌ ಉದ್ದೇಶ. ಅದರಲ್ಲವರು ಯಶಸ್ಸನ್ನೂ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next