ಮುಂಬಯಿ: ನಮೀಬಿಯಾದಿಂದ ತಂದ ಚೀತಾಗಳನ್ನು ನೈಜಿರಿಯಾದಿಂದ ತಂದದ್ದು ಎಂದು ಹೇಳುವ ಮೂಲಕ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಟೀಕೆಗೆ ಗುರಿಯಾಗಿದ್ದಾರೆ.
“ನೈಜೀರಿಯಾದಲ್ಲಿ ಲಂಪಿ (ಚರ್ಮಗಂಟು) ವೈರಸ್ ಬಹಳ ಹಿಂದಿನಿಂದಲೂ ಹರಡುತ್ತಿದೆ. ಅಲ್ಲಿಂದ ಚೀತಾಗಳನ್ನು ತರಲಾಗಿದೆ. ರೈತರ ನಷ್ಟಕ್ಕಾಗಿ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಇದನ್ನು ಮಾಡಿದೆ” ಎಂದು ನಾನಾ ಪಟೋಲೆ ಸರಕಾರವನ್ನು ಟೀಕಿಸಿದ್ದರು.
ಮಹಾರಾಷ್ಟ್ರ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಮತ್ತು ದೇಶದಲ್ಲಿ ಕಾಂಗ್ರೆಸ್‌ನ ಸ್ಥಿತಿಗತಿಯನ್ನು ನೋಡಿ ದೇಶದ ಎಲ್ಲರೂ ನಗುತ್ತಿದ್ದಾರೆ. ಚೀತಾಗಳನ್ನು ನಮೀಬಿಯಾದಿಂದ ತರಲಾಗಿದೆಯೇ ಹೊರತು ನೈಜೀರಿಯಾದಿಂದಲ್ಲ. ಇಂತಹ ಅವಲೋಕನ ಉಲ್ಲಾಸದಾಯಕ ಎಂದು ಲೇವಡಿ ಮಾಡಿದ್ದಾರೆ.