Advertisement
ಅವರು ಎ. 26ರಂದು ಕೊರವಡಿ ಹೆಗ್ಗೂರುಬೆಟ್ಟು ಶ್ರೀ ನಂದಿಕೇಶ್ವರ ಮತ್ತು ಪರಿವಾರ ದೈವಗಳ ದೈವಸ್ಥಾನ ಇದರ ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡ ದೇಶಸೇವೆಯಲ್ಲಿರುವ ಯೋಧರನ್ನು ಗುರುತಿಸುವ ಸಲುವಾಗಿ ನಡೆದ ಸೇನಾ ಸತ್ಕಾರ -2017 ಉದ್ದೇಶಿಸಿ ಮಾತನಾಡಿದರು.ಸೈನಿಕರಿಗೆ ಸಮ್ಮಾನ ಮಾಡುವ ಸುಯೋಗ ಒದಗಿ ಬಂದಿರುವುದೇ ತನ್ನ ಭಾಗ್ಯ. ಇಲ್ಲಿನ ಯುವಕರು ಬಹಳ ವಿಚಾರವಂತರಾಗಿದ್ದು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷವಾದ ಗೌರವವನ್ನು ತಂದುಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಿ ಸ್ವತ್ಛ ಪರಿಸರ ಹಾಗೂ ಸ್ವಸ್ಥ ಸಮಾಜವಿರುವುದೋ ಅಲ್ಲಿ ನೆಮ್ಮದಿ ಇರುತ್ತದೆ. ಅದರಂತೆ ಯುವಕರಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮೂಲಕ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವದ ಉತ್ತಮ ನಾಗರಿಕರನ್ನು ಸೃಷ್ಟಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ಯುವಕರು ಮಾದಕ ವ್ಯಸನಕ್ಕೆ ಬಲಿ ಬೀಳದಂತೆ ಜಾಗೃತಿ ಮೂಡಿಸಿ ಧಾರ್ಮಿಕ ಮನೋಭಾವನೆ ಬೆಳೆಸಿದಾಗ ಮಾತ್ರ ಆತ್ಮಶುದ್ಧಿ ಹಾಗೂ ಕೆಟ್ಟ ಭಾವನೆಗಳು ದೂರವಾಗುವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Related Articles
Advertisement
ಅಮ್ಮಾ ಕ್ಷಮಿಸು…ತಾನು ಹುಟ್ಟಿ ಬೆಳೆದಿರುವ ಊರಿನಲ್ಲಿ ಸಮ್ಮಾನವಾಗಿರುವುದು ಸಂತೋಷ ತಂದಿದೆ. ಉಡುಪಿ ಜಿಲ್ಲೆಯವರು ಭಾರತೀಯ ಸೈನ್ಯದಲ್ಲಿರುವವರು ವಿರಳ. ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಭಾಗದಲ್ಲಿರುವ ಆಸಕ್ತ ಯುವಕರು ಭಾರತೀಯ ಸೈನ್ಯವನ್ನು ಸೇರಬೇಕು ಎನ್ನುವುದೇ ತನ್ನ ಹಂಬಲ. ನಾವಿಬ್ಬರು ಸಹೋದರರು ಕೂಡ ಭಾರತೀಯ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತೇವೆ ಎನ್ನುವ ಹೆಮ್ಮೆ ನನಗಿದೆ. ಆದರೆ ಹಲವು ದಿನಗಳಿಂದಲೂ ಮನಸ್ಸಿನಲ್ಲಿ ಬೇಸರದ ಭಾವ ಕಾಡುತ್ತಿದೆ. ಇಲ್ಲಿ ನಮ್ಮನ್ನು ಸಾಕಿ ಸಲಹಿದ ಅಮ್ಮನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅಮ್ಮಾ ಕ್ಷಮಿಸು …
– ಪ್ರಭಾಕರ ಹರಪನಕೆರೆ, ಯೋಧರು ಭಾರತೀಯ ಸೇನೆ. ಹೂಡಿಹಾಕದ್ ನೆಲ್ಗಡ್ಲಿ ಗೆದ್ದೆಗ್ ಓಡುದ್
ನಮ್ ಮಿಲಿಟ್ರಿ ಶೆಟ್ರ ಮಾರ್ಗದರ್ಶನದಿಂದ ಆರ್ಮಿಯಲ್ ಸೇವೆ ಮಾಡ್ತಿದ್ದಿ, ಸೈಕಲ್ ತಕಂಡ್ ನಾನು ಪ್ರಭಾಕರ ಅವ್ರ ಮನೀಗ್ ದಿನªಲ್ ಮೂರೂ¾ರ್ ಸಲ್ ಹೋಯಿ ಅಲ್ ಅಷ್ಟ ಹಾರR, ಇಲ್‌ಇಸ್ಟ್ ಕೊಣಿಕ್, ಇಲ್‌ಇಸ್ಟ್ ಓಡ್R ಎಂದ್ ಅವ್ರ ಮಾತ್ ಕೆಂಡ್ಕಂಡ್ ಬಂದ್ ಇಲ್ ಹೂಡಿಹಾಕದ್ ನೆಲ್ಗಡ್ಲಿ ಗೆದ್ದೆಗ್ ಓಡುದ್ … ಇದ್ರ ಫಲವಾಯಿ ಕಾರಾÌರªಗೆ (ಕಾರವಾರ) ನೆಡª ಇಂಟರ್‌ವ್ಯೂ ಅಲ್ ಇಡೀ ಗ್ರೌಂಡಲ್ ಓಡಿ ನಾವ್ ಫಸ್ಟ್ ಬಂದೀತ್ … ಆದ್ರೆ ಓಡಿ ಬಂದ್ ಹಿಂದ್ ತಿರಿY ಕಂಡ್ರೆ ನಮಿØಂದೆ ಯಾರು ಇರ್ಲಿಲ್ಲ.
– ನವೀನ್ ಪೂಜಾರಿ ಹೆಗ್ಗೂರುಬೆಟ್ಟು , ಯೋಧರು ಭಾರತೀಯ ಸೇನೆ