ಗೊಂಡ ಬೆನ್ನಲ್ಲೇ ಅಲ್ಲಿ ಕನ್ನಡದ ಶಿಲಾಶಾಸನ ಕೂಡ ಪತ್ತೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಈಗ ಅದು ನಿಜ ಎಂದು ಸಾಬೀತಾ ಗಿದ್ದು, ಕನ್ನಡ ಶಾಸನದ ಚಿತ್ರ ಶನಿವಾರ ಬಿಡುಗಡೆಯಾಗಿದೆ.
Advertisement
ಮಸೀದಿಯಲ್ಲಿ ನಡೆದ ವೈಜ್ಞಾನಿಕ ಸಮೀಕ್ಷೆ ವೇಳೆ ದೇವ-ದೇವತೆಗಳ ಮೂರ್ತಿಗಳು, ಹಿಂದೂ ದೇವಾ ಲಯಕ್ಕೆ ಸಂಬಂಧಿಸಿದ ಹಲವು ವಸ್ತುಗಳು, ಕುರುಹುಗಳು ಪತ್ತೆಯಾಗುವುದರ ಜತೆಗೆ 34 ಶಿಲಾಶಾಸನಗಳು ಕೂಡ ಸಿಕ್ಕಿದ್ದವು. 2 ದಿನಗಳ ಹಿಂದಷ್ಟೇ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಈ ಪೈಕಿ ಕನ್ನಡ, ತೆಲುಗು, ಗ್ರಂಥ, ದೇವನಾಗರಿ ಭಾಷೆಯ ಶಾಸನ ಗಳೂ ಇದ್ದವು ಎಂದೂ ಅವರು ತಿಳಿಸಿದ್ದಾರೆ.
ಶನಿವಾರ ಈ ಕನ್ನಡ ಶಾಸನದ ಫೋಟೋ ಬಿಡುಗಡೆಯಾಗಿದ್ದು, ಅದರಲ್ಲಿ “ದೊಡರಸಯ್ಯನ ನರಸಂಣನಭಿಂನಹ’ ಎಂದು ಕೆತ್ತಿರುವುದು ಕಾಣಿಸುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇತಿಹಾಸ ತಜ್ಞ ಡಾ| ತಲಕಾಡು ಚಿಕ್ಕರಂಗೇಗೌಡ ಅವರು, “ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಕನ್ನಡ ಶಾಸನ ಸಿಕ್ಕಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ವಿಚಾರ. 16ನೇ ಶತಮಾನಕ್ಕೆ ಸೇರಿದ ಎರಡು ಸಾಲುಗಳ ಶಾಸನ ಇದಾಗಿದೆ. ಅಕ್ಷರಗಳ ಆಧಾರದ ಮೇಲೆ ಅದನ್ನು 16ನೇ ಶತಮಾನದ್ದು ಎಂದು ಹೇಳಬಹುದು. ಈ ಹಿಂದೆ ಕನ್ನಡದ ರಾಜರು ಉತ್ತರದ ಪ್ರಸಿದ್ಧ ದೇವಾಲಯಗಳಿಗೆ ದತ್ತಿ ಕೊಡುತ್ತಿದ್ದರು. ಆ ರೀತಿ ದತ್ತಿ ಕೊಟ್ಟಿರುವರಲ್ಲಿ ದೊಡ್ಡರಸಯ್ಯನ ಮಗ ನರಸಂಣ ಕೂಡ ಸೇರಿದ್ದಾನೆ. ಆತ ಸಾಧಾರಣ ವ್ಯಕ್ತಿಯಾಗಿರದೆ, ಕರ್ನಾಟಕದ ಯಾವುದಾದರೂ ಜಿಲ್ಲೆಯ ಪ್ರಸಿದ್ಧ ರಾಜ, ಪಾಳೆಗಾರ ಅಥವಾ ಸೇನಾಧಿಪತಿಯೇ ಆಗಿರುತ್ತಾನೆ. ದತ್ತಿ ಕೊಟ್ಟ ಕಾರಣಕ್ಕೆ ಅವರ ಹೆಸರನ್ನು ಉಲ್ಲೇಖೀಸಿದ್ದಾರೆ. ಈ ಶಾಸನ ಸರ್ವೇಗೆಪೂರಕವಾಗಲಿದೆ. ಮತ್ತಷ್ಟು ಕನ್ನಡದ ಶಾಸನಗಳು ಪತ್ತೆಯಾದರೂ ಅಚ್ಚರಿ ಇಲ್ಲ. ಈ ಬಗ್ಗೆ ರಾಜ್ಯ ಸರಕಾರ ಕಾಶಿಗೆ ವಿದ್ವಾಂಸರ ತಂಡವನ್ನು ಕಳುಹಿಸಿ ಮತ್ತಷ್ಟು ಸಂಶೋಧನೆಗೆ ಅವಕಾಶ ಕಲ್ಪಿಸಬೇಕು’ ಎಂದಿದ್ದಾರೆ.