Advertisement
ಎ. 14ರ ಬಳಿಕ ಲಾಕ್‌ಡೌನ್ ವಿಸ್ತರಣೆ ಇಲ್ಲ ಎಂದು ಕೇಂದ್ರ ಸರಕಾರವೇ ಸ್ಪಷ್ಟಪಡಿಸಿದ್ದರೂ ಜನ ಸಾಮಾನ್ಯರಲ್ಲಿ ಆತಂಕ ದೂರವಾಗಿಲ್ಲ. ಕೆಲವರು ಮೂರು, ಆರು ತಿಂಗಳಿಗೆ ಬೇಕಾದಷ್ಟು ಔಷಧವನ್ನು ಒಮ್ಮೆಲೇ ಪಡೆದುಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಸದ್ಯ ಮಾಸ್ಕ್, ಸ್ಯಾನಿಟೈಸರ್‌ಗಳು ಅಗತ್ಯವಿರುವಷ್ಟು ಪೂರೈಕೆಯಾಗುತ್ತಿವೆ. ಔಷಧಗಳ ಕೊರತೆಯೂ ಇಲ್ಲ. ಆದರೆ ಕೆಲವು ಗ್ರಾಮೀಣ ಭಾಗಗಳಲ್ಲಿ ನಿರ್ದಿಷ್ಟ ಬ್ರ್ಯಾಂಡ್‌ನ ಔಷಧ
ವನ್ನೇ ಕೇಳುತ್ತಿದ್ದಾರೆ. ಇತರ ಬ್ರ್ಯಾಂಡ್‌ನ ಔಷಧ ಕೂಡ ಅದೇ ಔಷಧೀಯ ಗುಣ ಹೊಂದಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಆದಾಗ್ಯೂ ಎಲ್ಲ ವಿಧದ ಔಷಧಗಳ ಪೂರೈಕೆಗೆ ಸಕಲ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯವಾಗಿ ಡಯಾಬಿಟೀಸ್, ಹೈಪರ್ ಟೆನ್ಶನ್ ಮೊದಲಾದವುಗಳ ಔಷಧಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.