ಸಹಾಯಕ ಮಾತ್ರ; ಅದೇ ಕೌಶಲವಲ್ಲ.
Advertisement
ಯಾವುದೇ ಕೌಶಲವನ್ನು ಬೆಳೆಸಿಕೊಂಡರೂ ಅದರಿಂದ ಜೀವನಾ ಧಾರ ಹೊಂದಲು ಸಾಧ್ಯ. ಕೃಷಿ, ವ್ಯಾಪಾರ, ಉದ್ಯಮ, ಹೈನುಗಾರಿಕೆ, ಬಡಗಿ ಕೆಲಸ, ಕಮ್ಮಾರಿಕೆ, ಮರ ಹತ್ತುವ ಕೆಲಸ, ದೋಣಿ ನಡೆಸುವುದು, ವಾಹನ ಚಲಾಯಿಸುವುದು, ಗಾರೆ ಕೆಲಸ ಇತ್ಯಾದಿ ಕೌಶಲ ಬೇಡುವ ವೃತ್ತಿಗಳು. ಇವುಗಳಲ್ಲಿ ಬಹಳಷ್ಟು ವೃತ್ತಿಗಳು ವಿದ್ಯಾಭ್ಯಾಸವಿಲ್ಲದಿದ್ದರೂ ಬೆಳೆಸಬಹುದಾದುವುಗಳು! ಬಡಗಿ, ಕಮ್ಮಾರಿಕೆ, ವ್ಯಾಪಾರದಂತಹ ಕೌಶಲಗಳು ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರಗೊಳ್ಳುತ್ತಿದ್ದುವು. ಕೆಲವು ವೃತ್ತಿಗಳಿಗೂ ಜಾತಿಗೂ ನಂಟು ಕೂಡ ಇತ್ತು. ಜಾಗತೀಕರಣದ ಕಾರಣದಿಂದ ಬಹಳಷ್ಟು ವೃತ್ತಿಗಳು ಸಾರ್ವತ್ರಿಕಗೊಂಡಿವೆ.
ನಂಟಿರುವ ಕಲ್ಲು-ಇಟ್ಟಿಗೆ ಕೆಲಸ, ಗಾರೆಕೆಲಸ, ಬಡಗಿ, ವೆಲ್ಡಿಂಗ್, ಪೈಂಟಿಂಗ್, ಪ್ಲಂಬಿಂಗ್, ಎಲೆಕ್ಟ್ರೀಶಿಯನ್ ಮೊದಲಾದ ಕೌಶಲಗಳೂ ಹೆಚ್ಚಿನ ಬೇಡಿಕೆ ಕಂಡುಕೊಂಡಿವೆ.
Related Articles
Advertisement
ಉದ್ಯಮ ರಂಗದ ಕಡೆಗೆ ಗಮನಿಸಿದರೆ, ಉತ್ಪನ್ನಗಳ ಉತ್ಪಾದನೆಯ ಜತೆಗೆ ಮಾರುವ ಕಲೆ (ಮಾರ್ಕೆಟಿಂಗ್) ಒಂದು ಕೌಶಲವಾಗಿ ನೆಲೆ ನಿಂತಿದೆ. ವ್ಯವಹಾರಕ್ಕೆ ಅಗತ್ಯವಾದ ಮಾತುಗಾರಿಕೆ (ಸಂವಹನ), ಶಿಷ್ಟಾಚಾರಗಳು (ಎಟಿಕೆಟ್ಸ್), ಗ್ರಾಹಕ ಸಂಬಂಧಗಳ ನಿರ್ವಹಣೆ (ಕಸ್ಟಮರ್ ರಿಲೇಶನ್‌ಶಿಪ್ ಮೇನೇಜೆ¾ಂಟ್) ಮೊದಲಾದುವುಗಳು ಮೃದು ಕೌಶಲಗಳು (ಸೋಪ್ಟ್ ಸ್ಕಿಲ್ಸ್) ಎಂದು ವಿಶೇಷವಾಗಿ ಕರೆಸಿಕೊಂಡು ಮುನ್ನೆಲೆಗೆ ಬಂದಿವೆ.
ಕೆಲವು ಉದ್ಯೋಗಗಳಂತೂ ಬಹು ಕೌಶಲಗಳನ್ನು (ಮಲ್ಟಿ ಸ್ಕಿಲ್ಸ್) ಬೇಡುತ್ತವೆ. ಉದಾಹರಣೆಗೆ ಬಿಕರಿ ವೃತ್ತಿಯವರು ಉತ್ತಮ ಮಾತುಗಾರಿಕೆ, ಶಿಷ್ಟಾಚಾರ, ಗ್ರಾಹಕ ಸಂಬಂಧಗಳಂಥ ವಿವಿಧ ಕೌಶಲಗಳನ್ನು ಹೊಂದಿರಬೇಕಾಗುತ್ತದೆ. ಇದಲ್ಲದೆ ತಂತ್ರಜ್ಞಾನ, ವಾಹನ ಚಲಾುಸುವ ಕೌಶಲ ಮೊದಲಾದುವುಗಳನ್ನು ಹೊಂದಿರಬೇಕಾಗುತ್ತದೆ. ಇವೆಲ್ಲವೂ ಇಂದಿನ ಉದ್ಯಮಗಳು ಬೇಡುವ ಕೌಶಲಗಳು.
ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುವ ನವ ಪದವೀಧರ ಯುವಕ ಯುವತಿಯರು ಸಾಕಷ್ಟು ಉದ್ಯೋಗಾರ್ಹ ಕೌಶಲಗಳನ್ನು ಬೆಳೆಸಿಕೊಳ್ಳದಿರುವುದು ಉದ್ಯೋಗ ಒದಗಿಸುವವರ ಕೊರಗು. ಪದವಿ ಕಲಿಕೆ ಜತೆಗೆ ಉದ್ಯೋಗಗಳು ಬೇಡುವ ಮೃದು ಕೌಶಲಗಳನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತಾಗಿದೆ. ಈ ಬೇಡಿಕೆ ಪೂರೈಸಲು “ನಿಶಿಂಗ್ ಸ್ಕೂಲ್’ಗಳು ತಲೆಯೆತ್ತಿರುವುದು ಉದ್ಯಮ ರಂಗ ಬೇಡುವ ವಿಶೇಷ ಕೌಶಲಗಳನ್ನು ಬೆಳೆಸುವು ದಕ್ಕಾಗಿಯೇ ಆಗಿದೆ. ವಿವಿಧ ಭಾಷೆಗಳಲ್ಲಿ ಮಾತನಾಡುವ ಕಲೆ, ಆಯಾ ಗ್ರಾಹಕರ ಮಾತನಾಡುವ ಉಚ್ಛಾರಣೆ ವಿಧಾನ, ಗ್ರಾಹಕರೊಂದಿಗೆ ಒಡನಾಡುವ ವಿಧಾನ ಮೊದಲಾದುವು ಈ ಸ್ಕೂಲುಗಳು ಕಲಿಸುವ ಕೌಶಲಗಳು.
ಇಂದಿನದು ಕೌಶಲಗಳನ್ನು ಬೇಡುವ ಕಾಲ. ಇದನ್ನು ಗಮನದಲ್ಲಿಟ್ಟು ಹೆತ್ತವರು ತಮ್ಮ ಮಕ್ಕಳಿಗೆ ಮುಂದಿನ ಕಲಿಕೆ ಬಗ್ಗೆ ಮಾರ್ಗದರ್ಶನ ನೀಡಬೇಕು. ಬರೇ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಕೆಲಸ ಪಡೆಯುವ ಕಾಲ ಮುಗಿದಿದೆ. ಈಗ ಏನಿದ್ದರೂ ಅಭ್ಯರ್ಥಿಯ ಕೌಶಲಗಳ ಆಧಾರದಲ್ಲಿ ನೇಮಕಾತಿ ನಡೆಯುತ್ತದೆ. ಆದ್ದರಿಂದ ಕಲಿಕೆಯ ಜತೆಗೆ ಸಕಾರಾತ್ಮಕ ಮನೋಧರ್ಮ, ಮಾತುಗಾರಿಕೆ, ಮುಂದಾಳುತನ, ಕ್ರೀಡಾ ಮನೋಭಾವ, ಗೆಲ್ಲುವ ಹುಮ್ಮಸ್ಸು ಮೊದಲಾದ ಅತೀ ಅಗತ್ಯದ ಕೌಶಲಗಳತ್ತ ಹೆತ್ತವರು ತಮ್ಮ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು.
ಡಾ| ಕೊಳ್ಚಪ್ಪೆ ಗೋವಿಂದ ಭಟ್ಲೇಖಕ