Advertisement

ಹೀಗೂ ಉಂಟು.! : ಪುತ್ತೂರಲ್ಲಿ ಶಾಸಕರು –ಉಡುಪಿಗೆ ಸಂಸದರು!

10:56 PM Mar 16, 2023 | Team Udayavani |

ಉಡುಪಿ-ಪುತ್ತೂರು ಹತ್ತಿರದಲ್ಲಿಲ್ಲ. ಆದರೂ ಒಂದು ನಂಟಿದೆ. ಪುತ್ತೂರು ಶಾಸಕರಾದವರು ಉಡುಪಿಯಲ್ಲಿ ಮುಂದೆ ಸಂಸದರಾಗುತ್ತಾರೆ ಎಂದು ಹೇಳಬಹುದು. ಯಾಕೆಂದರೆ ಎರಡು ಬಾರಿ ಪುತ್ತೂರಿನವರು ಉಡುಪಿಯಲ್ಲಿ ಗೆಲುವು ಸಾಧಿಸಿರುವ ದಾಖಲೆಗಳಿವೆ.

Advertisement

ಇವರಲ್ಲಿ ಮೊದಲಿಗರು ವಿನಯ ಕುಮಾರ್‌ ಸೊರಕೆ. 1985ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಪುತ್ತೂನಿಂದ ಸ್ಪರ್ಧಿಸಿ ಜಯಿಸಿದರು. 1989ರಲ್ಲೂ ಗೆಲುವು ಅವರದ್ದೇ. ಆದರೆ 1994ರಲ್ಲಿ ಮಾತ್ರ ಬಿಜೆಪಿಯ ಡಿ.ವಿ. ಸದಾನಂದ ಗೌಡ ವಿರುದ್ಧ ಸೋತರು. ಆ ಬಳಿಕ ಉಡುಪಿಯಿಂದ 1999ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದರು. ಅಚ್ಚರಿ ಎಂದರೆ ಡಿ.ವಿ. ಅವರೂ ಪುತ್ತೂರಲ್ಲಿ ಮೊದಲು ಸೊರಕೆ ವಿರುದ್ಧ ಸೋತವರು. 1994ರಲ್ಲಿ ಅವರನ್ನೇ ಸೋಲಿಸಿದರು. ಮುಂದೆ ಅವರು ಸಂಸತ್‌ ಚುನಾವಣೆಗೆ ಮಂಗಳೂರಿನಿಂದ ಸ್ಪರ್ಧಿಸಿ ಗೆದ್ದರು. 2009ರಲ್ಲಿ ಪಕ್ಷ ಮಂಗಳೂರಿನಿಂದ ಹೊಸಮುಖವಾಗಿ ನಳಿನ್‌ ಕುಮಾರ್‌ ಕಟೀಲು ಅವರನ್ನು ಇಳಿಸಿದರೆ ಡಿ.ವಿ. ನೆರೆಯ ಉಡುಪಿಗೆ ಹೋಗಿ ಗೆದ್ದರು. ಹೀಗೆ ಪುತ್ತೂರಿನಲ್ಲಿ ಶಾಸಕರಾದ ಇಬ್ಬರು ಉಡುಪಿಯಲ್ಲಿ ಸಂಸದರಾದರು. ಇಷ್ಟಕ್ಕೇ ನಿಲ್ಲುವುದಿಲ್ಲ, ಹಾಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯೂ ಮೂಲತಃ ಚಾರ್ವಾಕದವರು. ಇವರು ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ 2008ರಲ್ಲಿ ಸ್ಪರ್ಧಿಸಿ ಶಾಸಕಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next