Advertisement
ಮಂಗಳೂರು: ಈ ಡ್ರಗ್ಸ್ ಪೆಡ್ಲರ್‌ಗಳ ಜಾಲ ವಿಸ್ತರಣೆಗೆ ವಿದ್ಯಾರ್ಥಿಗಳ ಹಣ ಗಳಿಕೆಯ ಆಸೆ ಹಾಗೂ ಮೋಜು ಮಸ್ತಿಯ ಆಸೆಯೂ ಕಾರಣವಾಗುತ್ತಿದೆಯೇ?
Related Articles
Advertisement
ಟೂರಿಸ್ಟ್ ವೀಸಾ, ವಿದ್ಯಾಭ್ಯಾಸ ನೆಪ
ಮಂಗಳೂರಿನಲ್ಲಿ 2021ರಲ್ಲಿ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹೊಟೇಲ್ ಒಂದರಲ್ಲಿ ಒಮಾನ್ ರಾಷ್ಟ್ರದ ಮುಹಮ್ಮದ್ ಮುಸಾಬಾ ಎಂಬಾತನನ್ನು ಬಂಧಿಸಿದ್ದರು. ಆತ ಟೂರಿಸ್ಟ್ ವೀಸಾದಲ್ಲಿ ಗೋವಾಕ್ಕೆ ಬಂದು ಅಲ್ಲಿಂದ ಮಂಗಳೂರಿಗೆ ಆಗಮಿಸಿ ಮಾದಕ ವಸ್ತುಗಳನ್ನು ಮಾರುತ್ತಿದ್ದ. ಈ ವರ್ಷದ ಜನವರಿಯಲ್ಲಿ ವೈದ್ಯ ವಿದ್ಯಾರ್ಥಿಗಳು ಮತ್ತು ವೈದ್ಯರ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಬಿಡಿಎಸ್ ವಿದ್ಯಾರ್ಥಿ ನೀಲ್ ಕಿಶೋರಿಲಾಲ್ ಬ್ರಿಟನ್‌ನ ಪ್ರಜೆಯಾಗಿದ್ದು, 15 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದ.
ಈತ ತನ್ನ ಬಿಡಿಎಸ್ ಕೋರ್ಸ್ ಪೂರ್ಣಗೊಳಿಸಿರಲಿಲ್ಲ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿತ್ತು. ಕಳೆದ ವರ್ಷ ಮಂಗಳೂರು ವಿ.ವಿ. ಗೇಟ್ ಬಳಿಯಲ್ಲೇ ಸಿಂಥೆಟಿಕ್ ಡ್ರಗ್ಸ್ ಮಾರಾಟ ಪ್ರಕರಣ ಭೇದಿಸಲಾಗಿತ್ತು. ಕೇರಳ ಸಂಪರ್ಕ
ಕೇರಳದಿಂದ ಮಾದಕ ವಸ್ತು ಗಳು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಇದರ ಜತೆ ಆಂಧ್ರಪ್ರದೇಶ, ಒಡಿಶಾ, ಮುಂಬಯಿ ಯಿಂದಲೂ ಮಾದಕ ವಸ್ತುಗಳು ಬೆಂಗಳೂರು ಮಾರ್ಗವಾಗಿ ಮಂಗಳೂರನ್ನು ತಲುಪುತ್ತಿವೆ.
ಅಲ್ಲಿಂದ ಮಣಿಪಾಲ ಮತ್ತಿತರ ಕಡೆ ರವಾನೆ ಯಾಗುತ್ತವೆ. ಗಡಿಯಲ್ಲಿ ನಡೆಸುವ ಸಾಮಾನ್ಯ ತಪಾಸಣೆಯಲ್ಲಿ ಇದನ್ನು ಪತ್ತೆ ಹಚ್ಚದಿರುವುದು ಡ್ರಗ್ಸ್ ಪೆಡ್ಲರ್‌ಗಳಿಗೆ ಅನುಕೂಲವಾಗಿದೆ. ಹೆತ್ತವರಿಗೆ ತಿಳಿಯದು
ಡ್ರಗ್ಸ್ ಸೇವನೆ ಮತ್ತು ಅದನ್ನು ಮಾರುವುದು ಹಲವು ಸಂದರ್ಭಗಳಲ್ಲಿ ಹೆತ್ತವರ ಗಮನಕ್ಕೆ ಬರುವುದೇ ಇಲ್ಲ. ಮನೆಯಿಂದ ಹೊರಗುಳಿದು ಪಿಜಿ, ಹಾಸ್ಟೆಲ್, ಬಾಡಿಗೆ ಮನೆಯಲ್ಲಿರುವ ವಿದ್ಯಾರ್ಥಿಗಳು, ಉದ್ಯೋಗಕ್ಕೆಂದು ಬಂದಿರುವವರು ಈ ಜಾಲದಲ್ಲಿ ಸಿಲುಕುತ್ತಾರೆ. ಇಷ್ಟು ಮಾತ್ರವಲ್ಲ. ಇನ್ನೂ ದುರಂತವೆಂದರೆ ಮಾದಕ ವ್ಯಸನಿ ಕುಟುಂಬದೊಂದಿಗೆ ಇದ್ದರೂ ಎಲ್ಲರ ಗಮನಕ್ಕೆ ಬಾರದಂತೆ ಎಚ್ಚರ ವಹಿಸುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಹೆತ್ತವರು ಮನೆಯ ಮರ್ಯಾದೆ, ಪ್ರತಿಷ್ಠೆಗೆ ಅಂಜಿ ತಮ್ಮ ಮಕ್ಕಳ ಚಿಕಿತ್ಸೆಗೆ ಮುಂದಾಗುವುದಿಲ್ಲ. ಇದು ಅತ್ಯಂತ ಅಪಾಯಕಾರಿ ಎನ್ನುತ್ತಾರೆ ಸಮಾಲೋಚಕರು. ಶೇ. 40ರಷ್ಟು ಯುವತಿಯರು
ಮಾದಕ ವ್ಯಸನಿಗಳಲ್ಲಿ ಶೇ. 40ರಷ್ಟು ಯುವತಿಯರು. 18 ವರ್ಷಕ್ಕಿಂತ ಕಡಿಮೆ ಪ್ರಾಯದವರೂ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಪಾರ್ಟಿ ಡ್ರಗ್ಸ್ ಬಳಕೆಗಂತೂ ಕಡಿವಾಣವೇ ಇಲ್ಲ. ಪಾರ್ಟಿಗಳಿಗೆ ಹೋಗುವುದೇ ಡ್ರಗ್ಸ್ ಸೇವನೆಗೆ ಎಂಬಂತಾಗಿದೆ. ವಿದ್ಯಾರ್ಥಿ ಜೀವನದಲ್ಲೇ ಐಷಾರಾಮಿ ಜೀವನ ಶೈಲಿಯ ಆಕರ್ಷಣೆ, ಅದಕ್ಕಾಗಿ ಹಣ ಗಳಿಸುವ ಅನಿವಾರ್ಯಗಳು ಡ್ರಗ್ಸ್ ಜಾಲಕ್ಕೆ ಬೀಳಿಸುತ್ತಿವೆ ಎನ್ನುತ್ತಾರೆ ಮಂಗಳೂರಿನ ಡ್ರಗ್ ಡಿಎಡಿಕ್ಷನ್ ಸೆಂಟರ್‌ನ ಆಪ್ತಸಮಾಲೋಚಕರು. -ಸಂತೋಷ್ ಬೊಳ್ಳೆಟ್ಟು