Advertisement

ವ್ಯಾಯಾಮದ ಅನಂತರ ಇರಲಿ ಈ ಹವ್ಯಾಸ

09:27 PM Jun 03, 2019 | mahesh |

ವ್ಯಾಯಾಮ ಆರೋಗ್ಯಕರ ಅಭ್ಯಾಸಕ್ಕೆ ಪ್ರಮುಖ ಮಾರ್ಗ ಸೂಚಿ. ವ್ಯಾಯಾಮಗಳ ಚಟುವಟಿಕೆ ಪೂರ್ವ ಮತ್ತು ವ್ಯಾಯಾಮಗಳ ಬಳಿಕ ದೇಹ ದಣಿದಿರುವುದು ಸಹಜ .ಆ ನಿಟ್ಟಿನಲ್ಲಿ ವ್ಯಾಯಾಮ ಚಟುವಟಿಕೆಯ ಬಳಿಕ ಶರೀರದ ಅಂಗಾಂಗಳಿಗೆ ಸರಿಯಾದ ವಿಶ್ರಾಂತಿ ಅಗತ್ಯವಾಗಿದೆ. ವ್ಯಾಯಾಮ ಕೊನೆಗೊಳಿಸಿದ ಕೂಡಲೇ ದಿನನಿತ್ಯದ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಸಲ್ಲ. ವ್ಯಾಯಾಮದ ಅನಂತರ ದೇಹಕ್ಕೆ ಕೊಂಚ ಹೊತ್ತು ವಿಶ್ರಾಂತಿಯ ಅಗತ್ಯವಿರುತ್ತದೆ. ಹೀಗಾಗಿ ವ್ಯಾಯಾಮ ಕೊನೆಗೊಳಿಸಿದ ಕೂಡಲೇ ಉಳಿದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಾರದು.

Advertisement

ಸ್ಟ್ರೇಚ್‌- ವಾರ್ಮ್ಅಪ್‌
ವ್ಯಾಯಮದ ಬಳಿಕ 5 ರಿಂದ 10 ನಿಮಿಷಗಳ ಕಾಲ ಸ್ಟ್ರೇಚ್‌- ವಾರ್ಮ್ ಅಪ್‌ ನಂತಹ ಅಭ್ಯಾಸವು ಶರೀರದ ಅಂಗಾಂಗಗಳ ಸಡಿಲತೆ ಮತ್ತು ಸ್ನಾಯುಗಳ ಸೆಳೆತಗಳ ನಿವಾರಣೆ, ರಕ್ತದ ಪರಿಚಲನೆಗೆ ಸಹಾಯಕಾರಿಯಾದಿವೆ. ನೆಕ್‌ ಟಿಲ್ಟ್ , ನೆಕ್‌ ರೊಟೇಷನ್‌, ಹೀಪ್‌ ರೊಟೇಶನ್‌, ಆರ್ಮ್ ರೊಟೇಶನ್‌ ಮೊದಲಾದವುಗಳು ಪ್ರಮುಖವಾದ ಸ್ಟ್ರೇಚ್‌- ವಾರ್ಮ್ಅಪ್‌ಗ್ಳು.

ಕೂಲ್‌ ಡೌನ್‌
ಜಾಗಿಂಗ್‌, ರನ್ನಿಂಗ್‌ ಮೊದಲಾದ ವ್ಯಾಯಮಗಳ ಮುಕ್ತಾಯ ಹಂತದಲ್ಲಿ ಒಮ್ಮಿಂದೊಮ್ಮೆಗೆ ಮುಗಿಸುವ ಬದಲು ನಿಧಾನಗತಿಯಲ್ಲಿ ಮುಂದುವರಿಸುತ್ತಾ ಕೊನೆಗೆ ಸಮಾಪ್ತಿ ಗೊಳ್ಳಿಸುವುದು ಪರಿಣಾಮಕಾರಿ ವಿಧಾನ ವಾಗಿದೆ. ರನ್ನಿಂಗ್‌ ಮಾಡುತ್ತಿರುವವರು ಕೊನೆಯ ಹಂತಕ್ಕೆ ತಲುಪುತ್ತಿದ್ದಂತೆ ವೇಗದ ಗತಿಯನ್ನು ನಿಧಾನಗೊಳಿಸಿ ಜಾಗಿಂಗ್‌ ರೀತಿಯಲ್ಲಿ ಸ್ವಲ್ಪ ಸಮಯ ಓಡಿ ಕೊನೆಗೊಳಿಸುವುದು ಒಳ್ಳೆಯದು. ಒಮ್ಮೆಗೇ ವ್ಯಾಯಾಮ ನಿಲ್ಲಿಸಿದ್ದಲ್ಲಿ ಸ್ನಾಯುಗಳ ಮೇಲೆ ಒತ್ತಡ ಬೀಳುವುದು. ಇದರಿಂದ ದೇಹಕ್ಕೆ ಸಮಸ್ಯೆಗಳಾವುದು. ಜಾಗಿಂಗ್‌, ರನ್ನಿಂಗ್‌ ಅವುಗಳನ್ನು ಕೂಲ್‌ಡೌನ್‌ನಲ್ಲಿ ಕೊನೆಗೊಳಿಸುವುದು ಅಗತ್ಯ

ನೀರು ಆದಷ್ಟು ಬಳಸಿ
ಚಟುವಟಿಕೆಯಿಂದ ದೇಹದ ನೀರಿನಂಶ ಕಡಿಮೆಯಾಗುವುದು ಸಹಜ.ಹೀಗಾಗಿ ಸಾಕಷ್ಟು ನೀರು ಕುಡಿಯುವ ಅಗತ್ಯವಿದೆ. ಇದರೊಂದಿಗೆ ವ್ಯಾಯಾಮದ ಅನಂತರ ಕೊಂಚ ಸಮಯ ವಿಶ್ರಾಂತಿ ತೆಗೆದುಕೊಂಡು ಬಳಿಕ ಸ್ನಾನ ಮಾಡಬೇಕು. ಚಟುವಟಿಕೆಯ ವೇಳೆ ಸಾಕಷ್ಟು ಬೆವರು ಹೊರಬರುವ ಕಾರಣ ಬ್ಯಾಕ್ಟೇರಿಯಗಳ ಉತ್ಪತ್ತಿಯಾಗಿರುತ್ತವೆ. ವ್ಯಾಯಾಮದ ಅನಂತರ ಸ್ನಾನ ಮಾಡುವುದು ಮುಖ್ಯ.  ಆಹಾರಗಳು ವ್ಯಾಯಾಮ ಮುಗಿದ ಅನಂತರ ದೇಹ ಸಾಕಷ್ಟು ದಣಿಯುತ್ತದೆ. ಕಾಬೋಹೈಡ್ರೇಟ್, ಫೈಬರ್‌, ಬೀಟಾ-ಕ್ಯಾರೋಟಿನ್‌, ವಿಟಮಿನ್‌ ಸಿ, ಮ್ಯಾಂಗನೀಸ್‌ ಮತ್ತು ಪೊಟ್ಯಾಶಿಯಂಯುಕ್ತ ಆಹಾರ ಸೇವನೆ ಅಗತ್ಯ

-   ಕಾರ್ತಿಕ್‌ ಚಿತ್ರಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next