Advertisement
ವಿಧಾನ ಸಭೆಯಲ್ಲಿ ನಿಯಮ 69ರಡಿ ಕಳೆದ 2 ವರ್ಷಗಳಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ಸರಕಾರದಿಂದ ಅನುದಾನ ಬಿಡುಗಡೆ ಆಗದೆ ಜನರಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಅವರು ಮಾತನಾಡಿದರು.
ನಾವು ಶಾಸಕರು 3.71 ಲಕ್ಷ ಕೋಟಿ ರೂ.ಗಳ ರಾಜ್ಯ ಬಜೆಟ್ ಅನ್ನು ಇಲ್ಲಿ ಅನುಮೋದಿಸಿ ಕೊಟ್ಟಿದ್ದೇವೆ. ಆದರೆ ನಮ್ಮ ಕ್ಷೇತ್ರಕ್ಕೆ ಒಂದೇ ಒಂದು ಪೈಸೆ ಅನುದಾನ ಸಿಗುತ್ತಿಲ್ಲ. ಸರಕಾರದ ಅಯವ್ಯಯ ಆಯ ತಪ್ಪಿದೆ ಎಂದು ಟೀಕಿಸಿದರು.