Advertisement

15ರ ಇಂಜಿನಿಯರ್‌ಗೆ ಪಿಎಚ್‌.ಡಿ.?

09:30 AM Jul 30, 2018 | Team Udayavani |

ವಾಷಿಂಗ್ಟನ್‌: ಈತನಿಗೆ ಕೇವಲ 15 ವರ್ಷ. ಆದರೆ, ತನ್ನ ಶೈಕ್ಷಣಿಕ ಪಯಣದಲ್ಲಿ ಸಾಧಿಸಿದ ಮೈಲುಗಲ್ಲು ಮಾತ್ರ ಅಚ್ಚರಿ ಮೂಡಿಸುವಂಥದ್ದು. 9 ಅಥವಾ 10ನೇ ತರಗತಿಯಲ್ಲಿ ಕಲಿಯುತ್ತಿರಬೇಕಾಗಿದ್ದ ಈ ಹುಡುಗ ಈಗಾಗಲೇ ಪದವಿ ಪೂರೈಸಿದ್ದಾನೆ. ಅಷ್ಟೇ ಅಲ್ಲ, ಸದ್ಯದಲ್ಲೇ ಪಿ.ಎಚ್‌.ಡಿ. ಕೂಡ ಮಾಡಲಿದ್ದಾನೆ. 15 ವರ್ಷದ ಭಾರತೀಯ-ಅಮೆರಿಕನ್‌ ಬಾಲಕ ತನಿಷ್ಕ್ ಅಬ್ರಹಾಂನ ಸಾಧನೆಯಿದು.

Advertisement

ಕೇರಳ ಮೂಲದ ತಜಿ ಮತ್ತು ಬಿಜೋಯ್‌ ಅಬ್ರಹಾಂ ದಂಪತಿಯ ಪುತ್ರನಾದ ತನಿಷ್ಕ್ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಬಯೋಮೆಡಿಕಲ್‌ ಇಂಜಿನಿಯರಿಂಗ್‌ ನಲ್ಲಿ ಪದವಿ ಪೂರೈಸಿದ್ದಾನೆ. ಇಷ್ಟಕ್ಕೇ ಮುಗಿಸದೇ, ಈಗ ಪಿಎಚ್‌.ಡಿ. ಮಾಡಲು ಸಿದ್ಧತೆ ನಡೆಸುತ್ತಿದ್ದಾನೆ. ‘ನನ್ನ ಸಾಧನೆ ಬಗ್ಗೆ ಹೆಮ್ಮೆಯಿದೆ. ಕ್ಯಾನ್ಸರ್‌ ಮತ್ತು ಅದಕ್ಕೆ ಚಿಕಿತ್ಸೆ ನೀಡುವ ಹೊಸ ವಿಧಾನಗಳನ್ನು ಕಂಡುಕೊಳ್ಳುವುದು ನನ್ನ ಗುರಿಯಾಗಿದೆ’ ಎಂದು ಹೇಳಿದ್ದಾನೆ ತಾನಿಷ್ಕ್. ಈತ ಈಗಾಗಲೇ ಸುಟ್ಟ ಗಾಯಗಳಾಗಿರುವ ರೋಗಿಗಳನ್ನು ಸ್ಪರ್ಶಿಸದೇ, ಅವರ ಹೃದಯ ಬಡಿತವನ್ನು ಅರಿಯುವಂಥ ಒಂದು ಸಾಧನವನ್ನೂ ಅಭಿವೃದ್ಧಿಪಡಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next