Advertisement

Deepavali Festival ಸ್ವದೇಶಿ ವಸ್ತುವಿನೊಂದಿಗೆ ಸೆಲ್ಫಿ: ಪ್ರಧಾನಿ ಮೋದಿ ಕರೆ

10:07 PM Nov 08, 2023 | Team Udayavani |

ನವದೆಹಲಿ: ಇನ್ನೇನು ದೀಪಾವಳಿ ಹಬ್ಬ ಹತ್ತಿರದಲ್ಲಿರುವಾಗಲೇ ಹಬ್ಬದ ಖರೀದಿಗೆ ಯೋಜಿಸುತ್ತಿರುವ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿಶಿಷ್ಟ ಕರೆಯೊಂದನ್ನ ನೀಡಿದ್ದಾರೆ ಅದುವೇ ಸ್ವದೇಶಿ ವಸ್ತುವಿನೊಂದಿಗೆ ಸೆಲ್ಫಿ!

Advertisement

ಹೌದು, ಈ ಕುರಿತಂತೆ ಎಕ್ಸ್‌ (ಟ್ವಿಟರ್‌)ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ” ಈ ಬಾರಿ ದೀಪಾವಳಿಯನ್ನು ವೋಕಲ್‌ಫಾರ್‌ಲೋಕಲ್‌ ಎನ್ನುವ ಹ್ಯಾಷ್‌ಟ್ಯಾಗ್‌ನೊಂದಿಗೆ ಭಾರತದ ಉದ್ಯಮಶೀಲತೆ ಮತ್ತು ಸೃಜನಶೀಲತೆಯನ್ನು ಬೆಂಬಲಿಸುವ ಮೂಲಕ ಆಚರಿಸೋಣ.

ಹಬ್ಬಕ್ಕಾಗಿ ಸ್ಥಳೀಯ ವಸ್ತುಗಳನ್ನು ಖರೀದಿಸಿ, ಅದರೊಂದಿಗೆ ಅಥವಾ ತಯಾರಕರೊಂದಿಗೆ ಸೆಲ್ಫಿ ತೆಗೆದುಕೊಂಡು https://narendramodi.in/vocal4local ವೆಬ್‌ಸೈಟ್‌ನಲ್ಲಿ ಅಥವಾ ನಮೋ ಆ್ಯಪ್‌ನಲ್ಲಿ ಅಪ್ಲೋಡ್‌ ಮಾಡಿ, ನಿಮ್ಮ ಕುಟುಂಬಸ್ಥರು ಸ್ನೇಹಿತರಿಗೂ ಈ ಉಪಕ್ರಮ ಅನುಸರಿಸಲು ಹೇಳಿ’ಎಂದಿದ್ದಾರೆ. ಈ ಮೂಲಕ ಆತ್ಮನಿರ್ಭರ ಭಾರತಕ್ಕೆ ಬೆಂಬಲ ನೀಡುವ ಪ್ರಧಾನಿ ಮೋದಿ ಅವರ ವಿಶಿಷ್ಟ ಉಪಕ್ರಮಗಳ ಸಾಲಿಗೆ ಈ ಕರೆಯೂ ಸೇರ್ಪಡೆಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next